
ಇಸ್ಲಾಮಾಬಾದ್: ಯುದ್ಧಭೂಮಿಯಲ್ಲಿ ತನ್ನ ಹೀನಾಯ ಸೋಲನ್ನು ಮರೆಮಾಡಲು ಪ್ರಯತ್ನಿಸಿದ ಪಾಕಿಸ್ತಾನ ಮುಖವಾಡ ಮತ್ತೊಮ್ಮೆ ಬಹಿರಂಗಗೊಂಡಿದೆ. ಸಾಮ ಟಿವಿಯಲ್ಲಿನ ವರದಿಯು ಪಾಕಿಸ್ತಾನದ ಸುಳ್ಳುಗಳ ಪದರಗಳನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ 2025ರ ಮೇನಲ್ಲಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಪಾಕಿಸ್ತಾನಿ ಸೇನೆಗೆ ಪಾಠ ಕಲಿಸಿತು. ನೂರಾರು ಸೈನಿಕರು ಹತ್ಯೆಯಾದರು. ಪಾಕಿಸ್ತಾನ ಸರ್ಕಾರವು ಈ ಸಾವುನೋವುಗಳ ನಿಜವಾದ ಸಂಖ್ಯೆಯನ್ನು ಮರೆಮಾಡಲು ವಿಫಲ ಪ್ರಯತ್ನ ಮಾಡಿದರೂ, ಶೌರ್ಯ ಪ್ರಶಸ್ತಿಗಳ ಪಟ್ಟಿಯು ಸತ್ಯವನ್ನು ಬಹಿರಂಗಪಡಿಸಿದೆ.
ಸಾಮ ಟಿವಿಯಲ್ಲಿ ಕೆಲ ಸಮಯ ಪ್ರಕಟವಾಗಿ ತಕ್ಷಣವೇ ಡಿಲೀಟ್ ಮಾಡಲಾದ ಈ ವರದಿಯು, ಪಾಕಿಸ್ತಾನದ ಅಧ್ಯಕ್ಷರು 'ಆಪರೇಷನ್ ಬನ್ಯನ್ ಉಲ್ ಮರ್ಸೂಸ್' (ಇದು ಆಪರೇಷನ್ ಸಿಂಧೂರ್‌ಗೆ ಪ್ರತಿಕ್ರಿಯೆಯಾಗಿ ನೀಡಲಾದ ಹೆಸರು) ನಲ್ಲಿ ನೀಡಿದ ಶೌರ್ಯ ಪ್ರಶಸ್ತಿಗಳನ್ನು ಉಲ್ಲೇಖಿಸಿದೆ. ಆದರೆ ಗಮನ ಸೆಳೆದ ವಿಷಯವೆಂದರೆ ಪ್ರಶಸ್ತಿ ಪಟ್ಟಿಯಲ್ಲಿ ಕನಿಷ್ಠ 155 ಸೈನಿಕರ ಹೆಸರುಗಳಿಗೆ 'ಶಹೀದ್' ಎಂಬ ಪದವನ್ನು ಜೋಡಿಸಲಾಗಿದೆ. ಅಂದರೆ ಅವರು ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ ಎಂದರ್ಥ.
ವರದಿಯ ಪ್ರಕಾರ, 146 ಸೈನಿಕರಿಗೆ ಇಮ್ತಿಯಾಜಿ ಅಸ್ನಾದ್ (ವಿಶಿಷ್ಟ ಗೌರವ) ನೀಡಲಾಯಿತು. ಎಲ್ಲರನ್ನೂ 'ಹುತಾತ್ಮರು' ಎಂದು ಘೋಷಿಸಲಾಯಿತು. ಇದಲ್ಲದೆ, 45 ಸೈನಿಕರಿಗೆ ತಮ್ಘಾ-ಎ-ಬಸಲತ್* (ಕರ್ತವ್ಯಕ್ಕೆ ಸಮರ್ಪಣೆ) ನೀಡಲಾಯಿತು. ಅದರಲ್ಲಿ 4 ಜನರಿಗೆ ಮರಣೋತ್ತರವಾಗಿ ನೀಡಲಾಯಿತು. ಸಿತಾರಾ-ಎ-ಬಸಲತ್‌ನಂತಹ ಉನ್ನತ ಪದಕಗಳನ್ನು ಸಹ ಸತ್ತ ಸೈನಿಕರಿಗೆ ನೀಡಲಾಯಿತು. ದೊಡ್ಡ ಆಘಾತವೆಂದರೆ ಪಾಕಿಸ್ತಾನದ ವೀರ ಚಕ್ರಕ್ಕೆ ಸಮಾನವೆಂದು ಪರಿಗಣಿಸಲಾದ 5 ತಮ್ಘಾ-ಎ-ಜುರ್ರಾತ್‌ಗಳಲ್ಲಿ 4 ಹುತಾತ್ಮ ಸೈನಿಕರಿಗೆ ನೀಡಲಾಯಿತು.
ಅಂಕಿಅಂಶಗಳು ಸರಿಯಾಗಿದ್ದರೆ, ಆಪರೇಷನ್ ಸಿಂಧೂರ್ ದಶಕಗಳಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳಿಗೆ ಎದುರಾದ ಅತಿದೊಡ್ಡ ಸೋಲು ಎಂದು ಸಾಬೀತಾಯಿತು. ಭಾರತೀಯ ದಾಳಿಯಿಂದ ಸೋತ ಪಾಕಿಸ್ತಾನಿ ಜನರಲ್‌ಗಳು ಸೋಲನ್ನು ಒಪ್ಪಿಕೊಳ್ಳುವ ಬದಲು ಸೈನಿಕರ ಸಮಾಧಿಗಳನ್ನು ಶೌರ್ಯ ಪದಕಗಳಿಂದ ಅಲಂಕರಿಸುವಲ್ಲಿ ನಿರತರಾಗಿದ್ದಾರೆ. 'ಮತ್ತೊಂದು ದಾಳಿ ನಡೆದರೆ, ನಾವು ತಕ್ಕ ಉತ್ತರ ನೀಡುತ್ತೇವೆ' ಎಂದು ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಬಹಿರಂಗ ಎಚ್ಚರಿಕೆ ನೀಡಿದರು.
Advertisement