
ಲಂಡನ್: ಕಳೆದ ವರ್ಷ ಜೂನ್‌ನಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ರಿಷಿ ಸುನಕ್‌ಗೆ ಜನಾಂಗೀಯ ಕೊಲೆ ಬೆದರಿಕೆ ಇಮೇಲ್ ಕಳುಹಿಸಿದ್ದ 21 ವರ್ಷದ ವ್ಯಕ್ತಿಗೆ 14 ವಾರಗಳ ಕಾಲ ಜೈಲು ಶಿಕ್ಷೆ ಮತ್ತು ಎರಡು ವರ್ಷ ನಿರ್ಬಂಧ ವಿಧಿಸಲಾಗಿದೆ.
ಯಾರ್ಕ್‌ಷೈರ್‌ನ ರಿಚ್‌ಮಂಡ್ ಮತ್ತು ನಾರ್ತಲರ್ಟನ್‌ನ ಸಂಸದ ಸುನಕ್ ಅವರ ಇಮೇಲ್ ವಿಳಾಸಕ್ಕೆ ಎರಡು ಬೆದರಿಕೆ ಮತ್ತು ಆಕ್ಷೇಪಾರ್ಹ ಇಮೇಲ್‌ಗಳನ್ನು ಕಳುಹಿಸಿರುವುದಾಗಿ ವಾಯುವ್ಯ ಇಂಗ್ಲೆಂಡ್‌ನ ಮರ್ಸಿಸೈಡ್‌ನಲ್ಲಿರುವ ಬಿರ್ಕೆನ್‌ಹೆಡ್‌ನ ಲಿಯಾಮ್ ಶಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ಬ್ರಿಟನ್ ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ ತಿಳಿಸಿದೆ.
ಭಾರತೀಯ ಮೂಲದ ಬ್ರಿಟಿಷ್ ನಾಯಕನ ವೈಯಕ್ತಿಕ ಸಹಾಯಕರು ಇಮೇಲ್‌ಗಳನ್ನು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದರು.
"ಅತ್ಯಂತ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಗೆ ಜನಾಂಗೀಯ ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಿದ ಲಿಯಾಮ್ ಶಾಗೆ ಶಿಕ್ಷೆ ವಿಧಿಸಲಾಗಿದೆ" ಎಂದು ಸಿಪಿಎಸ್ ಮರ್ಸಿ ಚೆಷೈರ್‌ನ ಹಿರಿಯ ಕ್ರೌನ್ ಪ್ರಾಸಿಕ್ಯೂಟರ್ ಮ್ಯಾಥ್ಯೂ ಡಿಕ್ಸನ್ ಹೇಳಿದ್ದಾರೆ.
Advertisement