ಕೊಲಂಬಿಯಾದಲ್ಲಿ ಕಾರ್ ಬಾಂಬ್, ಹೆಲಿಕಾಪ್ಟರ್ ದಾಳಿ: 12 ಪೊಲೀಸರು ಸೇರಿ 17 ಮಂದಿ ಸಾವು

ಕೊಕೇನ್‌ಗೆ ಕಚ್ಚಾ ವಸ್ತುವಾದ ಕೋಕಾ ಎಲೆ ಬೆಳೆಗಳನ್ನು ನಿರ್ಮೂಲನೆ ಮಾಡಲು ಉತ್ತರ ಕೊಲಂಬಿಯಾದ ಆಂಟಿಯೋಕ್ವಿಯಾದ ಪ್ರದೇಶಕ್ಕೆ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಅಧಿಕಾರಿಗಳ ಪ್ರಕಾರ ಹೆಲಿಕಾಪ್ಟರ್ ಮೇಲಿನ ದಾಳಿಯಲ್ಲಿ ಕನಿಷ್ಠ 12 ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ.
Security forces inspect the site of a bomb explosion outside an Air Force base in Cali, Colombia, Thursday, Aug. 21, 2025.
ಕೊಲಂಬಿಯಾದ ಕ್ಯಾಲಿಯಲ್ಲಿರುವ ವಾಯುಪಡೆಯ ನೆಲೆಯ ಹೊರಗೆ ಬಾಂಬ್ ಸ್ಫೋಟದ ಸ್ಥಳವನ್ನು ಭದ್ರತಾ ಪಡೆಗಳು ಪರಿಶೀಲಿಸುತ್ತಿರುವುದು
Updated on

ಬೊಗೋಟಾ: ಕೊಲಂಬಿಯಾದಲ್ಲಿ ಕಳೆದ ರಾತ್ರಿ ಪೊಲೀಸ್ ಹೆಲಿಕಾಪ್ಟರ್ ಮೇಲೆ ನಡೆದ ಕಾರ್ ಬಾಂಬ್ ಮತ್ತು ಪ್ರತ್ಯೇಕ ದಾಳಿಯಲ್ಲಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಈ ಎರಡೂ ದಾಳಿಗಳಿಗೆ ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳು(FARC )ಎಂದು ಕರೆಯಲ್ಪಡುವ ನಿಷ್ಕ್ರಿಯ ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳ ಭಿನ್ನಮತೀಯರು ಕಾರಣ ಎಂದು ಆರೋಪಿಸಿದ್ದಾರೆ.

ಕೊಕೇನ್‌ಗೆ ಕಚ್ಚಾ ವಸ್ತುವಾದ ಕೋಕಾ ಎಲೆ ಬೆಳೆಗಳನ್ನು ನಿರ್ಮೂಲನೆ ಮಾಡಲು ಉತ್ತರ ಕೊಲಂಬಿಯಾದ ಆಂಟಿಯೋಕ್ವಿಯಾದ ಪ್ರದೇಶಕ್ಕೆ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಅಧಿಕಾರಿಗಳ ಪ್ರಕಾರ ಹೆಲಿಕಾಪ್ಟರ್ ಮೇಲಿನ ದಾಳಿಯಲ್ಲಿ ಕನಿಷ್ಠ 12 ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ.

ಪೆಟ್ರೋ ಆರಂಭದಲ್ಲಿ ಎಂಟು ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದ್ದರು, ಆದರೆ ಆಂಟಿಯೋಕ್ವಿಯಾ ಗವರ್ನರ್ ಆಂಡ್ರೆಸ್ ಜೂಲಿಯನ್ ನಂತರ ಇತರ ನಾಲ್ವರು ಅಧಿಕಾರಿಗಳು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಹೇಳಿದರು.

ಕೋಕಾ ಎಲೆ ಬೆಳೆಗಳ ಮೇಲೆ ಹಾರುವಾಗ ಡ್ರೋನ್ ಹೆಲಿಕಾಪ್ಟರ್ ಮೇಲೆ ದಾಳಿ ಮಾಡಿದೆ ಎಂದು ಆಂಟಿಯೋಕ್ವಿಯಾ ಗವರ್ನರ್ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಅವರು ಪ್ರಾಥಮಿಕ ಮಾಹಿತಿಯ ಪ್ರಕಾರ ದಾಳಿಯು ಹೆಲಿಕಾಪ್ಟರ್ ನಲ್ಲಿ ಬೆಂಕಿಗೆ ಕಾರಣವಾಗಿದೆ.

ನೈಋತ್ಯ ನಗರ ಕ್ಯಾಲಿಯಲ್ಲಿನ ಅಧಿಕಾರಿಗಳು, ಸ್ಫೋಟಕಗಳನ್ನು ತುಂಬಿದ ವಾಹನವು ಮಿಲಿಟರಿ ವಾಯುಯಾನ ಶಾಲೆಯ ಬಳಿ ಸ್ಫೋಟಗೊಂಡು ಐವರು ಮೃತಪಟ್ಟು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಕೊಲಂಬಿಯಾದ ವಾಯುಪಡೆಯು ಸ್ಫೋಟದ ಕುರಿತು ಹೆಚ್ಚುವರಿ ವಿವರಗಳನ್ನು ತಕ್ಷಣ ನೀಡಲಿಲ್ಲ.

ಪೆಟ್ರೋ ಆರಂಭದಲ್ಲಿ ದೇಶದ ಅತಿದೊಡ್ಡ ಸಕ್ರಿಯ ಮಾದಕವಸ್ತು ಕಾರ್ಟೆಲ್ ಆಗಿರುವ ಗಲ್ಫ್ ಕ್ಲಾನ್ ನ್ನು ಹೆಲಿಕಾಪ್ಟರ್ ಮೇಲಿನ ದಾಳಿಗೆ ದೂಷಿಸಿದರು. ಗುಂಪಿಗೆ ಸೇರಿದೆ ಎಂದು ಹೇಳಲಾದ ಕೊಕೇನ್ ವಶಪಡಿಸಿಕೊಂಡಿದ್ದಕ್ಕಾಗಿ ಪ್ರತೀಕಾರವಾಗಿ ಹೆಲಿಕಾಪ್ಟರ್ ಅನ್ನು ಗುರಿಯಾಗಿಸಲಾಗಿದೆ ಎಂದು ಅವರು ಹೇಳಿದರು.

ಭಿನ್ನಮತೀಯ ಗುಂಪಿನ ಆರೋಪಿತ ಸದಸ್ಯರನ್ನು ಸ್ಫೋಟದ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಕೊಲಂಬಿಯಾ ಅಧ್ಯಕ್ಷರು ತಿಳಿಸಿದ್ದಾರೆ.

2016 ರಲ್ಲಿ ಸರ್ಕಾರದೊಂದಿಗೆ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ FARC ಭಿನ್ನಮತೀಯರು ಮತ್ತು ಗಲ್ಫ್ ಕ್ಲಾನ್‌ನ ಸದಸ್ಯರು ಇಬ್ಬರೂ ಆಂಟಿಯೋಕ್ವಿಯಾದಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೊಲಂಬಿಯಾದಲ್ಲಿ ಕೋಕಾ ಎಲೆ ಕೃಷಿ ಹೆಚ್ಚುತ್ತಿದೆ. 2023 ರಲ್ಲಿ ಕೃಷಿ ಪ್ರದೇಶವು ದಾಖಲೆಯ 253,000 ಹೆಕ್ಟೇರ್ ತಲುಪಿದೆ ಎಂದು ಯುಎನ್ ಡ್ರಗ್ಸ್ ಮತ್ತು ಕ್ರೈಮ್ ಕಚೇರಿ ಮಾಹಿತಿ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com