ಜಪಾನ್ ನ Sendai semiconductor ಘಟಕಕ್ಕೆ ಪ್ರಧಾನಿ ಮೋದಿ ಭೇಟಿ; ಸ್ಥಿರ ಪೂರೈಕೆಗೆ ಒತ್ತು

ಜಪಾನ್ ಪ್ರಧಾನಿ ಇಶಿಬಾ ಅವರು ಸೆಂಡೈನಲ್ಲಿ ಮೋದಿ ಅವರಿಗೆ ಗೌರವಾರ್ಥವಾಗಿ ಭೋಜನ ಕೂಟವನ್ನು ಆಯೋಜಿಸಿದ್ದರು, ಇದರಲ್ಲಿ ಮಿಯಾಗಿ ಪ್ರಾಂತ್ಯದ ಗವರ್ನರ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
Prime Minister Narendra Modi along with his Japanese counterpart Shigeru Ishiba visits Tokyo Electron's semiconductor factory, in Sendai, Japan.
ಪ್ರಧಾನಿ ನರೇಂದ್ರ ಮೋದಿ ಸೆಮಿಕಂಡಕ್ಟರ್ ಘಟಕದಲ್ಲಿ
Updated on

ಟೋಕಿಯೋ: ಭಾರತ ಮತ್ತು ಜಪಾನ್ ದೇಶಗಳು ನಿರ್ಣಾಯಕ ತಂತ್ರಜ್ಞಾನ ವಲಯದಲ್ಲಿ ಸಹಕಾರವನ್ನು ಹೆಚ್ಚಿಸಲು ನಿರ್ಧರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಪಾನಿನ ಮಿಯಾಗಿ ಪ್ರಾಂತ್ಯದ ಸೆಂಡೈನಲ್ಲಿರುವ ಸೆಂಡೈ ಸೆಮಿಕಂಡಕ್ಟರ್ ಘಟಕಕ್ಕೆ ಭೇಟಿ ನೀಡಿದರು.

ಮೋದಿ, ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ, ಟೋಕಿಯೋದಿಂದ 300 ಕಿ.ಮೀ ದೂರದಲ್ಲಿರುವ ಸೆಂಡೈಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು.

ಜಪಾನ್ ಪ್ರಧಾನಿ ಇಶಿಬಾ ಅವರು ಸೆಂಡೈನಲ್ಲಿ ಮೋದಿ ಅವರಿಗೆ ಗೌರವಾರ್ಥವಾಗಿ ಭೋಜನ ಕೂಟವನ್ನು ಆಯೋಜಿಸಿದ್ದರು, ಇದರಲ್ಲಿ ಮಿಯಾಗಿ ಪ್ರಾಂತ್ಯದ ಗವರ್ನರ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

ಪ್ರಧಾನಿ ಮೋದಿ ಅವರು ಸೆಂಡೈನಲ್ಲಿರುವ ಟೋಕಿಯೋ ಎಲೆಕ್ಟ್ರಾನ್ ಮಿಯಾಗಿ ಲಿಮಿಟೆಡ್ (TEL Miyagi) ಗೆ ನೀಡಿದ ಭೇಟಿಯು, ಭಾರತದಲ್ಲಿ ಇತ್ತೀಚೆಗೆ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆ ಮತ್ತು ಈ ವಲಯದಲ್ಲಿ ಜಪಾನ್‌ ಸಾಮರ್ಥ್ಯಗಳ ನಡುವಿನ ಪೂರಕತೆಯನ್ನು ಎತ್ತಿ ತೋರಿಸಿದೆ ಎಂದು ಭಾರತೀಯ ಪ್ರಜೆಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸೆಮಿಕಂಡಕ್ಟರ್ ವಲಯದ ಪ್ರಮುಖ ಜಪಾನ್ ಕಂಪನಿಯಾದ ಟೆಲ್ ಮಿಯಾಗಿ, ಭಾರತದೊಂದಿಗೆ ಸಹಯೋಗಕ್ಕಾಗಿ ಯೋಜನೆಗಳನ್ನು ಹೊಂದಿದೆ.

ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಟೆಲ್ ನ ಪಾತ್ರ, ಅದರ ಮುಂದುವರಿದ ಉತ್ಪಾದನಾ ಸಾಮರ್ಥ್ಯಗಳು ಮತ್ತು ಭಾರತದೊಂದಿಗೆ ಅದರ ಯೋಜಿತ ಸಹಯೋಗಗಳ ಬಗ್ಗೆ ಮೋದಿಗೆ ವಿವರಿಸಿದರು.

Prime Minister Narendra Modi along with his Japanese counterpart Shigeru Ishiba visits Tokyo Electron's semiconductor factory, in Sendai, Japan.
ಮುಂಬೈ-ಅಹಮದಾಬಾದ್ ಮಾತ್ರವಲ್ಲ, ಭಾರತದಲ್ಲಿ 7000 ಕಿ.ಮೀ ಬುಲೆಟ್ ರೈಲು ಓಡಲಿದೆ: ಜಪಾನ್‌ನಲ್ಲಿ ಪ್ರಧಾನಿ ಮೋದಿ ಘೋಷಣೆ

ಅರೆವಾಹಕ ಪೂರೈಕೆ ಸರಪಳಿ, ತಯಾರಿಕೆ ಮತ್ತು ಪರೀಕ್ಷಾ ಕ್ಷೇತ್ರದಲ್ಲಿ ಸಹಯೋಗವನ್ನು ರೂಪಿಸಲು ಎರಡೂ ದೇಶಗಳ ನಡುವೆ ಇರುವ ಅವಕಾಶಗಳ ಪ್ರಾಯೋಗಿಕ ತಿಳುವಳಿಕೆಯನ್ನು ನೀಡಿತು ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.

ಈ ವಲಯದಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಬದ್ಧತೆಯನ್ನು ಉಭಯ ದೇಶಗಳ ನಾಯಕರು ಪುನರುಚ್ಛರಿಸಿದರು. ಜಪಾನ್-ಭಾರತ ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಪಾಲುದಾರಿಕೆಯಲ್ಲಿ ಸಹಕಾರದ ಜ್ಞಾಪಕ ಪತ್ರ ಹಾಗೂ ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕತೆ ಪಾಲುದಾರಿಕೆ ಮತ್ತು ಆರ್ಥಿಕ ಭದ್ರತಾ ಸಂವಾದದ ಅಡಿಯಲ್ಲಿ ನಡೆಯುತ್ತಿರುವ ಪಾಲುದಾರಿಕೆಗಳನ್ನು ನಿರ್ಮಿಸಿದರು ಎಂದು ಅದು ಹೇಳಿದೆ.

ಮೋದಿ ಮತ್ತು ಇಶಿಬಾ ಅವರ ಜಂಟಿ ಭೇಟಿಯು ಭಾರತ ಮತ್ತು ಜಪಾನ್‌ನ ದೃಢವಾದ, ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com