PNB scam: ಮೆಹುಲ್ ಚೋಕ್ಸಿ ಭಾರತ ಹಸ್ತಾಂತರಕ್ಕೆ ಬೆಲ್ಜಿಯಂ ಸುಪ್ರೀಂ ಕೋರ್ಟ್ ಅನುಮತಿ

ಭಾರತದ ಹಸ್ತಾಂತರ ವಿನಂತಿಯನ್ನು ಜಾರಿಗೊಳಿಸಬಹುದಾಗಿದೆ ಎಂದು ಹೇಳಿದ್ದ ಆಂಟ್ವೆರ್ಪ್ ಮೇಲ್ಮನವಿ ನ್ಯಾಯಾಲಯದ ಅಕ್ಟೋಬರ್ 17 ರ ಆದೇಶವನ್ನು ಪ್ರಶ್ನಿಸಿ ಚೋಕ್ಸಿ ಅಕ್ಟೋಬರ್ 30 ರಂದು ಬೆಲ್ಜಿಯಂನ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
Mehul Choksi
ಮೆಹುಲ್ ಚೋಕ್ಸಿ
Updated on

13,850 ಕೋಟಿ ರೂಪಾಯಿ ಹಗರಣದಲ್ಲಿ ಭಾರತಕ್ಕೆ ಪರಾರಿಯಾಗಿರುವ ಭಾರತೀಯ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬೆಲ್ಜಿಯಂ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಹಸ್ತಾಂತರ ವಿನಂತಿಯನ್ನು ಜಾರಿಗೊಳಿಸಬಹುದಾಗಿದೆ ಎಂದು ಹೇಳಿದ್ದ ಆಂಟ್ವೆರ್ಪ್ ಮೇಲ್ಮನವಿ ನ್ಯಾಯಾಲಯದ ಅಕ್ಟೋಬರ್ 17 ರ ಆದೇಶವನ್ನು ಪ್ರಶ್ನಿಸಿ ಚೋಕ್ಸಿ ಅಕ್ಟೋಬರ್ 30 ರಂದು ಬೆಲ್ಜಿಯಂನ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕ್ಯಾಸೇಶನ್ ನ್ಯಾಯಾಲಯದ ವಕ್ತಾರ ಅಡ್ವೊಕೇಟ್-ಜನರಲ್ ಹೆನ್ರಿ ವಾಂಡರ್ಲಿಂಡೆನ್, ಕ್ಯಾಸೇಶನ್ ನ್ಯಾಯಾಲಯವು ಮೇಲ್ಮನವಿಯನ್ನು ತಿರಸ್ಕರಿಸಿದೆ. ಆದ್ದರಿಂದ, ಮೇಲ್ಮನವಿ ನ್ಯಾಯಾಲಯದ ನಿರ್ಧಾರವು ಮಾನ್ಯವಾಗಿದೆ ಎಂದು ಹೇಳಿದರು.

13,850 ಕೋಟಿ ರೂಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣದ ಪ್ರಮುಖ ಆರೋಪಿ ಚೋಕ್ಸಿಯನ್ನು ಭಾರತಕ್ಕೆ ವಾಪಸ್ ಕಳುಹಿಸಿದರೆ ನ್ಯಾಯಯುತ ವಿಚಾರಣೆಯನ್ನು ನಿರಾಕರಿಸುವ ಅಥವಾ ತೀವ್ರ ಕೆಳಮಟ್ಟದಲ್ಲಿ ಕಾಣುವ ಸಂಭವ ಇಲ್ಲ ಎಂದು ಆಂಟ್ವೆರ್ಪ್ ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು.

Mehul Choksi
ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರ ಮುಂದೂಡಿಕೆ: 'ಸುಪ್ರೀಂ'ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೊಸ ತಂತ್ರ!

ಅಕ್ಟೋಬರ್ 17 ರಂದು, ಆಂಟ್ವೆರ್ಪ್ ಮೇಲ್ಮನವಿ ನ್ಯಾಯಾಲಯದ ನಾಲ್ವರು ಸದಸ್ಯರ ದೋಷಾರೋಪಣಾ ಕೋರ್ಟ್ ನವೆಂಬರ್ 29, 2024 ರಂದು ಜಿಲ್ಲಾ ನ್ಯಾಯಾಲಯದ ಪೂರ್ವ-ವಿಚಾರಣಾ ನ್ಯಾಯಾಲಯ ಹೊರಡಿಸಿದ ಹಿಂದಿನ ಆದೇಶವನ್ನು ಎತ್ತಿಹಿಡಿದಿದೆ. ಮುಂಬೈ ವಿಶೇಷ ನ್ಯಾಯಾಲಯವು ಮೇ 2018 ಮತ್ತು ಜೂನ್ 2021 ರಲ್ಲಿ ಹೊರಡಿಸಿದ ಬಂಧನ ವಾರಂಟ್‌ಗಳಲ್ಲಿ ಯಾವುದೇ ಅಕ್ರಮವಿಲ್ಲ ಎಂದು ಹೇಳಿದೆ. ಅವುಗಳನ್ನು "ಜಾರಿಗೊಳಿಸಬಹುದಾಗಿದೆ ಎಂದು ತೀರ್ಪು ನೀಡಿದ್ದು ಚೋಕ್ಸಿಯ ಹಸ್ತಾಂತರಕ್ಕೆ ದಾರಿ ಮಾಡಿಕೊಟ್ಟಿತು.

ಚೋಕ್ಸಿಯ ಮೇಲ್ಮನವಿಯನ್ನು ವಜಾಗೊಳಿಸಿದ ಮೇಲ್ಮನವಿ ನ್ಯಾಯಾಲಯವು, ಉದ್ಯಮಿ ಚಿತ್ರಹಿಂಸೆ ಅಥವಾ ನ್ಯಾಯ ನಿರಾಕರಣೆಯ ನಿಜವಾದ ಅಪಾಯದ ನಿರ್ದಿಷ್ಟವಾಗಿ ತೋರಿಕೆಯ ಪುರಾವೆಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ಅವರು ಸಲ್ಲಿಸಿದ ದಾಖಲೆಗಳು ರಾಜಕೀಯ ವಿಚಾರಣೆಗೆ ಒಳಪಟ್ಟಿದೆ ಎಂಬ ಅವರ ಹಕ್ಕುಗಳನ್ನು ದೃಢೀಕರಿಸುವುದಿಲ್ಲ ಎಂದು ಹೇಳಿದೆ.

Mehul Choksi
PNB ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಗಡಿಪಾರಿಗೆ ಬೆಲ್ಜಿಯಂ ಕೋರ್ಟ್ ಅನುಮೋದನೆ; 8 ವರ್ಷ ಭಾರತ ನಡೆಸಿದ್ದ ಹೋರಾಟ ಸಫಲ!

ಜನವರಿ 2, 2018 ರಂದು ಭಾರತದಿಂದ ಪಲಾಯನ ಮಾಡಿದ ನಂತರ ಕೇಂದ್ರ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ED) ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW & EW) ಏಜೆನ್ಸಿಗಳು - ಚೋಕ್ಸಿ ಮೇಲೆ ನಿಗಾ ವಹಿಸಿತ್ತು.

ಚೋಕ್ಸಿ ಬೆಲ್ಜಿಯಂ ಪ್ರಜೆಯಲ್ಲ, ವಿದೇಶಿ ಪ್ರಜೆ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಏಜೆನ್ಸಿಗಳ ಕೋರಿಕೆಯ ಮೇರೆಗೆ ಅವರನ್ನು ಏಪ್ರಿಲ್ 11 ರಂದು ಆಂಟ್ವೆರ್ಪ್‌ನಲ್ಲಿ ಬಂಧಿಸಲಾಗಿತ್ತು.

ವಂಚನೆ, ನಕಲಿ, ದಾಖಲೆಗಳ ಸುಳ್ಳು ಮತ್ತು ಭ್ರಷ್ಟಾಚಾರ ಸೇರಿದಂತೆ ಭಾರತ ಉಲ್ಲೇಖಿಸಿದ ಅಪರಾಧಗಳನ್ನು ಬೆಲ್ಜಿಯಂ ಕಾನೂನಿನಡಿಯಲ್ಲಿ ಅಪರಾಧಗಳೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ದಾಖಲಾಗಿರುವ ಪ್ರಕರಣಗಳು ಐಪಿಸಿ ಸೆಕ್ಷನ್ 120 ಬಿ, 201, 409, 420, 477 ಎ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತವೆ. ಇವೆಲ್ಲವೂ ಒಂದು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯನ್ನು ಹೊಂದಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com