Video- ಉತ್ತರ ಕೆರೊಲಿನಾದಲ್ಲಿ ವಿಮಾನ ಅಪಘಾತ, ನಿವೃತ್ತ NASCAR ಚಾಲಕ ಗ್ರೆಗ್ ಬಿಫಲ್ ಮತ್ತು ಕುಟುಂಬ ಸದಸ್ಯರು ಸಜೀವ ದಹನ

ಷಾರ್ಲೆಟ್‌ನಿಂದ ಸುಮಾರು 40 ಮೈಲುಗಳ ಉತ್ತರಕ್ಕೆ ಇರೆಡೆಲ್ ಕೌಂಟಿಯಲ್ಲಿರುವ ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸೆಸ್ನಾ C550 ಸ್ಥಳೀಯ ಸಮಯ ಬೆಳಗ್ಗೆ 10:15 ರ ಸುಮಾರಿಗೆ ಅಪಘಾತಕ್ಕೀಡಾಯಿತು.
plane crash in North carolina
ಉತ್ತರ ಕೆರೊಲಿನಾದಲ್ಲಿ ವಿಮಾನ ಅಪಘಾತ
Updated on

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಶ್ಚಿಮ ಉತ್ತರ ಕೆರೊಲಿನಾದಲ್ಲಿ ವಿಮಾನ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾನ ನಿವೃತ್ತ NASCAR ಚಾಲಕ ಗ್ರೆಗ್ ಬಿಫಲ್, ಅವರ ನಿಕಟ ಕುಟುಂಬ ಸದಸ್ಯರು ಮತ್ತು ಬ್ಯುಸ್ ನೆಸ್ ಜೆಟ್‌ನಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಅಧಿಕಾರಿಗಳು ಮತ್ತು ಫೆಡರಲ್ ವಿಮಾನಯಾನ ಆಡಳಿತದ ಪ್ರಕಾರ, ಷಾರ್ಲೆಟ್‌ನಿಂದ ಸುಮಾರು 40 ಮೈಲುಗಳ ಉತ್ತರಕ್ಕೆ ಇರೆಡೆಲ್ ಕೌಂಟಿಯಲ್ಲಿರುವ ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸೆಸ್ನಾ C550 ಸ್ಥಳೀಯ ಸಮಯ ಬೆಳಗ್ಗೆ 10:15 ರ ಸುಮಾರಿಗೆ ಅಪಘಾತಕ್ಕೀಡಾಯಿತು. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಏಳು ಜನರು ಇದ್ದರು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ದೃಢಪಡಿಸಿದ್ದಾರೆ.

ನಂತರ ವಿಮಾನ ನೆಲಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಷಾರ್ಲೆಟ್‌ನಿಂದ ಉತ್ತರಕ್ಕೆ ಸುಮಾರು 72 ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ತಕ್ಷಣ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಉತ್ತರ ಕೆರೊಲಿನಾ ರಾಜ್ಯ ಹೆದ್ದಾರಿ ಗಸ್ತು ವರದಿ ಮಾಡಿದೆ.

ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.ಗ್ರೆಗ್ ಬಿಫಲ್ ಅವರ ಪತ್ನಿ ಕ್ರಿಸ್ಟಿನಾ, ಐದು ವರ್ಷದ ಮಗ ರೈಡರ್ ಮತ್ತು 14 ವರ್ಷದ ಮಗಳು ಎಮ್ಮಾ ಅವರೊಂದಿಗೆ ವಿಮಾನದಲ್ಲಿದ್ದರು.ಡೆನ್ನಿಸ್ ಡಟ್ಟನ್, ಅವರ ಮಗ ಜ್ಯಾಕ್ ಮತ್ತು ಕ್ರೇಗ್ ವ್ಯಾಡ್ಸ್‌ವರ್ತ್ ಕೂಡ ವಿಮಾನದಲ್ಲಿದ್ದರು.

ವಿಮಾನವು ಫ್ಲೋರಿಡಾಕ್ಕೆ ತೆರಳಬೇಕಿತ್ತು ಆದರೆ ಮಂಜು ಹವಾಮಾನದಲ್ಲಿ ಟೇಕ್ ಆಫ್ ಆದ ಕೂಡಲೇ ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ಪ್ರಯತ್ನಿಸಿತು ಎಂದು ವಿಮಾನ ಮಾರ್ಗಗಳನ್ನು ಪತ್ತೆಹಚ್ಚುವ ಫ್ಲೈಟ್‌ಅವೇರ್ ವರದಿ ಮಾಡಿದೆ. ವಿಮಾನವನ್ನು ಬಿಫಲ್‌ಗೆ ಸಂಬಂಧಿಸಿದ ಕಂಪನಿಗೆ ನೋಂದಾಯಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಮೃತರಲ್ಲಿ ಗ್ರೆಗ್ ಬಿಫಲ್, ಅವರ ಪತ್ನಿ ಕ್ರಿಸ್ಟಿನಾ ಬಿಫಲ್, ಅವರ 5 ವರ್ಷದ ಮಗ ರೈಡರ್ ಮತ್ತು ಮಗಳು ಎಮ್ಮಾ (14) ಅವರನ್ನು ಕುಟುಂಬಗಳು ಗುರುತಿಸಿವೆ. ವಿಮಾನದಲ್ಲಿದ್ದ ಇತರರನ್ನು ಡೆನ್ನಿಸ್ ಡಟ್ಟನ್, ಅವರ ಮಗ ಜ್ಯಾಕ್ ಮತ್ತು ಕ್ರೇಗ್ ವಾಡ್ಸ್‌ವರ್ತ್ ಎಂದು ಗುರುತಿಸಲಾಗಿದೆ.

ಎಫ್‌ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಅಪಘಾತದ ತನಿಖೆ ನಡೆಸುತ್ತಿವೆ. ಬೈಫಲ್ 2002 ರಲ್ಲಿ NASCAR ಕಪ್ ಸರಣಿಗೆ ಪದಾರ್ಪಣೆ ಮಾಡಿದ್ದರು. 2003 ರಿಂದ 2016 ರವರೆಗೆ 14 ವರ್ಷಗಳ ಕಾಲ ಪೂರ್ಣ ಸಮಯದ ಕಪ್ ಸರಣಿ ಚಾಲಕರಾಗಿ ಸೇವೆ ಸಲ್ಲಿಸಿದರು. 19 ಗೆಲುವುಗಳು, 92 ಟಾಪ್-ಫೈವ್ ಫಿನಿಶ್‌ಗಳು ಮತ್ತು 175 ಟಾಪ್ 10 ಗಳನ್ನು ಗಳಿಸಿದರು. ಜುಲೈ 5, 2003 ರಂದು ಡೇಟೋನಾ ಇಂಟರ್ನ್ಯಾಷನಲ್ ಸ್ಪೀಡ್‌ವೇಯಲ್ಲಿ ಚೆಕ್ಕರ್ ಧ್ವಜವನ್ನು ಪಡೆದಾಗ ಅವರ ಮೊದಲ ಕಪ್ ಗೆಲುವು NASCAR ನ ಅತ್ಯಂತ ಪ್ರಸಿದ್ಧ ಟ್ರ್ಯಾಕ್‌ನಲ್ಲಿ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com