

ಬ್ರೆಜಿಲ್: ಅರ್ಜೆಂಟೀನಾದಲ್ಲಿ ನಡೆದ FIH Pro League ಗೆ ಮ್ಯಾನೇಜರ್ ಆಗಿ ಪಾಕಿಸ್ತಾನದ ಹಿರಿಯ ತಂಡದೊಂದಿಗೆ ಬಂದಿದ್ದ ಖ್ಯಾತ ಹಾಕಿ ಒಲಿಂಪಿಯನ್ ಅಂಜುಮ್ ಸಯೀದ್ ವಿಮಾನದೊಳಗೆ ಧೂಮಪಾನ ಮಾಡಿ ಸಿಕ್ಕಿಬಿದಿದ್ದಾರೆ.
ಇಲ್ಲಿನ ರಿಯೊ ಡಿ ಜನೈರೊ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬುತ್ತಿದ್ದಾಗ ವಿಮಾನದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಅವರು ತೊಂದರೆ ತೊಂದರೆಗೆ ಸಿಲುಕುವಂತಾಯಿತು. ಇಂಧನ ತುಂಬಿಸಿಕೊಳ್ಳಲು ಬ್ರೆಜಿಲ್ ನಲ್ಲಿ ವಿಮಾನ ನಿಲ್ಲಿಸಿದಾಗ ಧೂಮಪಾನ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಂಜುಮ್ ಜೊತೆಗೆ ಪಾಕಿಸ್ತಾನ ಒಬ್ಬ ಆಟಗಾರನಿಗೂ ದುಬೈಗೆ ತೆರಳಲು ಅವಕಾಶ ನೀಡಲಿಲ್ಲ.
1992 ರಲ್ಲಿ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಆಡಿದ ಮತ್ತು 1994 ರಲ್ಲಿ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲಿದ್ದ ಡಿಫೆಂಡರ್ ಮತ್ತು ಮಿಡ್‌ಫೀಲ್ಡರ್ ಅಂಜುಮ್ ಅವರನ್ನು ಅರ್ಜೆಂಟೀನಾಕ್ಕೆ ಮ್ಯಾನೇಜರ್ ಆಗಿ ಕಳುಹಿಸಲಾಗಿತ್ತು ಆದರೆ ಈ ವಾರ ಸ್ವದೇಶಕ್ಕೆ ವಾಪಸ್ಸಾದ ನಂತರ ಅವರು ದುಬೈನಲ್ಲಿ ಕೆಲ ವೈಯಕ್ತಿಕ ಕಾರಣದಿಂದ ಅವರು ತಂಡದೊಂದಿಗೆ ಹಿಂತಿರುಗಲಿಲ್ಲ ಎಂದು ಹೇಳುತ್ತಿದ್ದಾರೆ.
ಈ ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಪಾಕಿಸ್ತಾನ ಹಾಕಿ ಫೆಡರೇಶನ್‌ಗೆ ಕೇಳಿದ್ದೇವೆ ಎಂದು ಪಾಕಿಸ್ತಾನದ ಕ್ರೀಡಾ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದರು. ಇದು ಗಂಭೀರ ವಿಷಯವಾಗಿರುವುದರಿಂದ PHF ಈಗ ಏನು ಮಾಡುತ್ತದೆ ಎಂಬುದನ್ನು ನೋಡಲು ಬಯಸುತ್ತೇವೆ ಎಂದು ಅಧಿಕಾರಿ ಹೇಳಿದ್ದಾರೆ.
ವಿಮಾನದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ಮ್ಯಾನೇಜರ್ ಸಿಕ್ಕಿಬಿದ್ದಾಗ ಅಂಜುಮ್ ಮತ್ತು ಇನ್ನೊಬ್ಬ ಆಟಗಾರರು ಸಿಬ್ಬಂದಿಯೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಸಿರುವುದಾಗಿ ವರದಿಯಾಗಿದೆ.
Advertisement