ಅಮೇರಿಕಾ ವಿರುದ್ಧ ಕೆನಡಾ ಪ್ರತೀಕಾರ: ಶೇ.25 ರಷ್ಟು ಸುಂಕ!

ಸುಂಕ, ತೆರಿಗೆಗಳ ವಿಷಯದ ಬಗ್ಗೆ ಚರ್ಚಿಸಲು ತಾವು ಪ್ರಧಾನಿಗಳು ಮತ್ತು ಸಂಪುಟವನ್ನು ಭೇಟಿಯಾಗಿದ್ದಾಗಿ ಮತ್ತು ಶೀಘ್ರದಲ್ಲೇ ಮೆಕ್ಸಿಕೊ ಅಧ್ಯಕ್ಷ ಶೀನ್‌ಬಾಮ್ ಅವರೊಂದಿಗೆ ಮಾತನಾಡುವುದಾಗಿ ಟ್ರುಡೋ ಹೇಳಿದ್ದಾರೆ.
Trump-trudeau
ಟ್ರಂಪ್-ಟ್ರುಡೋonline desk
Updated on

ನವದೆಹಲಿ: ಅಮೇರಿಕಾ ವಿರುದ್ಧ ಕೆರಳಿ ನಿಂತಿರುವ ಕೆನಡಾ ಶೇ.26 ರಷ್ಟು ಸುಂಕ ವಿಧಿಸಿದೆ. ಈ ಕುರಿತು ಪೋಸ್ಟ್ ಮಾಡಿರುವ ಟ್ರೂಡೊ, ನಮಗೆ ಇದು ಬೇಕಾಗಿಲ್ಲ, ಆದರೆ ಕೆನಡಾ ಸಿದ್ಧವಾಗಿದೆ" ಎಂಬುದನ್ನು ತಿಳಿಸಲು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ.

ಸುಂಕ, ತೆರಿಗೆಗಳ ವಿಷಯದ ಬಗ್ಗೆ ಚರ್ಚಿಸಲು ತಾವು ಪ್ರಧಾನಿಗಳು ಮತ್ತು ಸಂಪುಟವನ್ನು ಭೇಟಿಯಾಗಿದ್ದಾಗಿ ಮತ್ತು ಶೀಘ್ರದಲ್ಲೇ ಮೆಕ್ಸಿಕೊ ಅಧ್ಯಕ್ಷ ಶೀನ್‌ಬಾಮ್ ಅವರೊಂದಿಗೆ ಮಾತನಾಡುವುದಾಗಿ ಟ್ರುಡೋ ಹೇಳಿದ್ದಾರೆ.

'ಫೆಬ್ರವರಿ 4 ರಿಂದ ಪ್ರಾರಂಭವಾಗುವ ಹೆಚ್ಚಿನ ಕೆನಡಾದ ಸರಕುಗಳ ಮೇಲೆ ಶೇ.25 ರಷ್ಟು ಸುಂಕವನ್ನು ವಿಧಿಸಲು ಉದ್ದೇಶಿಸಿರುವುದಾಗಿ ಅಮೆರಿಕ ದೃಢಪಡಿಸಿದೆ, ಇಂಧನದ ಮೇಲೆ ಶೇಕಡಾ 10 ರಷ್ಟು ಸುಂಕವನ್ನು ವಿಧಿಸಲಾಗುವುದು ಎಂದು ಅಮೇರಿಕ ಹೇಳಿದೆ.

ನಾನು ಇಂದು ಪ್ರಧಾನಿಗಳು ಮತ್ತು ನಮ್ಮ ಸಂಪುಟವನ್ನು ಭೇಟಿ ಮಾಡಿದ್ದೇನೆ ಮತ್ತು ನಾನು ಶೀಘ್ರದಲ್ಲೇ ಮೆಕ್ಸಿಕೊ ಅಧ್ಯಕ್ಷ ಶೀನ್‌ಬಾಮ್ ಅವರೊಂದಿಗೆ ಮಾತನಾಡುತ್ತೇನೆ' ಎಂದು ಅವರು ಹೇಳಿದರು.

Trump-trudeau
ಕೆನಡಾ, ಮೆಕ್ಸಿಕೊ, ಚೀನಾ ಮೇಲೆ ಸುಂಕ ವಿಧಿಸಿದ Donald Trump ಸರ್ಕಾರ: ಹಣದುಬ್ಬರ-ವ್ಯಾಪಾರ ಸಂಘರ್ಷ ಸಾಧ್ಯತೆ

'ನಮಗೆ ಇದು ಬೇಕಾಗಿಲ್ಲ, ಆದರೆ ಕೆನಡಾ ಎಲ್ಲದಕ್ಕೂ ಸಿದ್ಧವಾಗಿದೆ. ನಾನು ಇಂದು ಸಂಜೆ ನಂತರ ಈ ವಿಷಯವಾಗಿ ಕೆನಡಿಯನ್ನರನ್ನು ಉದ್ದೇಶಿಸಿ ಮಾತನಾಡುತ್ತೇನೆ' ಎಂದು ಅವರು ಹೇಳಿದರು.

ಹಿಂದಿನ ದಿನ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಕೆನಡಾ ಮತ್ತು ಮೆಕ್ಸಿಕೊದಿಂದ ಆಮದು ಮಾಡಿಕೊಳ್ಳುವ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿರುವುದಾಗಿ ಘೋಷಿಸಿದರು, ಜೊತೆಗೆ ಫೆಂಟನಿಲ್ ಸೇರಿದಂತೆ ಅಕ್ರಮ ವಲಸೆ ಮತ್ತು ಮಾದಕವಸ್ತು ಕಳ್ಳಸಾಗಣೆ ಬಗ್ಗೆ ಕಳವಳ ವ್ಯಕ್ತಪಡಿಸಿ ಚೀನಾದ ಸರಕುಗಳ ಮೇಲೆ ಶೇಕಡಾ 10 ರಷ್ಟು ಸುಂಕವನ್ನು ವಿಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com