Grammys 2025: ರ‍್ಯಾಪರ್ ಕಾನ್ಯೆ ವೆಸ್ಟ್ ಪತ್ನಿಯ ಬೆತ್ತಲೆ ಪ್ರದರ್ಶನ; ಇದೇನಾ ಸಭ್ಯತೆ ಎಂದ ನೆಟ್ಟಿಗರು, ವಿಡಿಯೋ ವೈರಲ್!

ಹಾಲಿವುಡ್‌ನ 67ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 3ರಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಹಾಲಿವುಡ್‌ನ ಅನೇಕ ದೊಡ್ಡ ಗಾಯಕರು ಅದರ ಭವ್ಯತೆಯನ್ನು ಹೆಚ್ಚಿಸಲು ಆಗಮಿಸಿದ್ದರು.
Kanye West-Bianca Censori
ಕಾನ್ಯೆ ವೆಸ್ಟ್-ಬಿಯಾಂಕಾ ಸೆನ್ಸೋರಿ
Updated on

ಹಾಲಿವುಡ್‌ನ 67ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 3ರಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಹಾಲಿವುಡ್‌ನ ಅನೇಕ ದೊಡ್ಡ ಗಾಯಕರು ಅದರ ಭವ್ಯತೆಯನ್ನು ಹೆಚ್ಚಿಸಲು ಆಗಮಿಸಿದ್ದರು. ಅನೇಕ ದೊಡ್ಡ ಸಂಗೀತ ದಿಗ್ಗಜರಿಗೆ ಇಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಆದರೆ ಎಲ್ಲೆಡೆ ಚರ್ಚೆಯಾಗುತ್ತಿರುವ ಒಂದು ವಿಷಯವೆಂದರೆ, ಅದು ರ‍್ಯಾಪರ್ ಕಾನ್ಯೆ ವೆಸ್ಟ್ ಮತ್ತು ಅವರ ಪತ್ನಿ ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ ವೇಷ.

ಅಮೇರಿಕನ್ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಪತ್ನಿ ಆಸ್ಟ್ರೇಲಿಯಾದ ಮಾಡೆಲ್ ಬಿಯಾಂಕಾ ಸೆನ್ಸೋರಿ ಅವರೊಂದಿಗೆ ಆಗಮಿಸಿದರು. ಸಮಾರಂಭಕ್ಕೆ ಹೋಗುವ ಮೊದಲು ಇಬ್ಬರೂ ರೆಡ್ ಕಾರ್ಪೆಟ್ ಗೆ ಬಂದಿದ್ದು ಅಲ್ಲಿ ಅವರು ತಮ್ಮ ಲುಕ್ ನಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಕಾನ್ಯೆ ಮತ್ತು ಬಿಯಾಂಕಾ ಮೊದಲು ರೆಡ್ ಕಾರ್ಪೆಟ್ ಮೇಲೆ ಸಂಪೂರ್ಣವಾಗಿ ಕಪ್ಪು ಲುಕ್‌ನಲ್ಲಿ ಕಾಣಿಸಿಕೊಂಡರು. ಬಿಯಾಂಕಾ ಕಪ್ಪು ನಿಲುವಂಗಿಯನ್ನು ಧರಿಸಿದ್ದರು. ಆದರೆ ಮುಂದೆ ಸಾಗುತ್ತಿದ್ದಂತೆ ಬಿಯಾಂಕಾ ತನ್ನ ನಿಲುವಂಗಿಯನ್ನು ತೆಗೆದಳು. ಅದರ ನಂತರ ಅಲ್ಲಿ ಒಂದು ಸಂಚಲನ ಉಂಟಾಯಿತು. ಬಿಯಾಂಕಾ ಒಳಗೆ ಪಾರದರ್ಶಕ ಉಡುಪನ್ನು ಧರಿಸಿ ಬಂದಿದ್ದಳು. ಆ ಉಡುಪಿಯನ್ನು ಆಕೆ ಸಂಪೂರ್ಣ ಬೆತ್ತಲಾದಂತೆ ಕಾಣುತ್ತಿತ್ತು. ಇದನ್ನು ನೋಡಿದ ಕ್ಯಾಮೆರಾಮನ್ ಗಳು ತಾ ಮುಂದು ನಾ ಮುಂದು ಎಂದು ಫೋಟೋಗಳನ್ನು ಕ್ಲಿಕ್ಕಿಸಲು ಮುಂದಾಗಿದ್ದು ಕಾರ್ಯಕ್ರಮದ ವಾತಾವರಣವೂ ಹಾಳಾಗಿ ಹೋಯಿತು. ಅವರಿಬ್ಬರ ಫೋಟೋಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗಿವೆ. ಈ ಘಟನೆಯ ನಂತರ, ಕಾನ್ಯೆ ಮತ್ತು ಅವರ ಪತ್ನಿಯನ್ನು ಪ್ರಶಸ್ತಿ ಪ್ರದಾನ ಸಮಾರಂಭದಿಂದ ಹೊರಹಾಕಲಾಯಿತು.

Kanye West-Bianca Censori
ರಿಕ್ಕಿ ಕೇಜ್ ಹಿಂದಿಕ್ಕಿದ ಚಂದ್ರಿಕಾ ಟಂಡನ್: ಭಾರತೀಯ ಮೂಲದ ಅಮೆರಿಕ ಸಂಗೀತಗಾರ್ತಿಗೆ ಗ್ರ್ಯಾಮಿ ಪ್ರಶಸ್ತಿ

ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾನ್ಯೆ ಎರಡು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು. ಅತ್ಯುತ್ತಮ ರ‍್ಯಾಪ್ ಗೀತೆಗೆ ನಾಮನಿರ್ದೇಶನಗೊಂಡಿತು. ಆದರೆ, ಅವರಿಗೆ ಯಾವುದೇ ಪ್ರಶಸ್ತಿ ಸಿಗಲಿಲ್ಲ. ಅವರು ಪ್ರಶಸ್ತಿ ಗೆದ್ದಿದ್ದರೆ, ಪ್ರಶಸ್ತಿ ಸ್ವೀಕರಿಸಲು ವೇದಿಕೆಯ ಮೇಲೆ ಹೋಗಲು ಅವರಿಗೆ ಅವಕಾಶ ಸಿಗುತ್ತಿರಲಿಲ್ಲ ಎಂದು ಹೇಳಲಾಗುತ್ತಿತ್ತು. ಈ ಘಟನೆಯ ನಂತರ, ರ‍್ಯಾಪರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದಾರೆ. ಪ್ರಚಾರ ಪಡೆಯಲು ಹೀಗೆ ಮಾಡಿದ್ದಕ್ಕಾಗಿ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com