
ಪಾಕಿಸ್ತಾನದ ಪ್ರಸಿದ್ಧ ಪ್ರಭಾವಿ ಮಾಡೆಲ್ ಮಥಿರಾ ಖಾನ್ ಕಳೆದ ವಾರವಷ್ಟೇ ಕಾರ್ಯಕ್ರಮದ ವೇಳೆ ನನ್ನ ಸೊಂಟಕ್ಕೆ ಕೈಹಾಕಿ ಅನುಚಿತವಾಗಿ ವರ್ತಿಸಲಾಗಿತ್ತು ಎಂದು ಗರಂ ಆಗಿದ್ದರು. ಇದೀಗ ಮತ್ತೊಂದು ಕಾರಣಕ್ಕೆ ಮಥಿರಾ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಮಥಿರಾ ಖಾನ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಮತ್ತು ಫೋಟೋಗಳು ಲೀಕ್ ಆಗಿವೆ.
ಈ ವೀಡಿಯೊಗಳು ಮಥಿರಾ ಖಾನ್ ಅವರದ್ದೆ ಎಂದು ಹೇಳಲಾಗುತ್ತಿದ್ದು ಈ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಯಾಗಿದೆ. ಆದರೆ ವಿಡಿಯೋಗಳು ತನ್ನದಲ್ಲ ಎಂದು ಹೇಳುವ ಮೂಲಕ ಮಥಿರಾ ಆರೋಪಗಳನ್ನು ದೃಢವಾಗಿ ನಿರಾಕರಿಸಿದ್ದಾರೆ. ಅಲ್ಲದೆ ನನ್ನ ಖ್ಯಾತಿಗೆ ಹಾನಿ ಮಾಡುವ ಉದ್ದೇಶದಿಂದ ತಮ್ಮ ಹೆಸರಲ್ಲಿ ವಿಡಿಯೋ ಮತ್ತು ನಗ್ನಗಳನ್ನು ಹರಿಬಿಡಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಥಿರಾ ಖಾನ್, ನನ್ನ ಹೆಸರು ಮತ್ತು ನನ್ನ ಫೋಟೋಶೂಟ್ ಚಿತ್ರಗಳ ಜೊತೆಗೆ ಫೇಕ್ ಫೋಟೋಗಳನ್ನು ಸೇರಿಸಿ, ಅವುಗಳನ್ನು ಹರಿಬಿಡುವ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಸ್ವಲ್ಪ ನಾಚಿಕೆ ಇರಲಿ! ಈ ಕೊಳಕಿನ ಅಸಂಬದ್ಧತೆಯಿಂದ ನನ್ನನ್ನು ದೂರವಿಡಿ ಎಂದು ಬರೆದಿದ್ದಾರೆ. ವೀಡಿಯೊಗಳು ಕಟ್ಟುಕಥೆ ಎಂದು ಅವರು ಮತ್ತಷ್ಟು ಒತ್ತಿ ಹೇಳಿದರು ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಆಧಾರರಹಿತವಾಗಿ ಗುರಿಯಾಗಿಸಿಕೊಳ್ಳುವುದನ್ನು ಕೊನೆಗೊಳಿಸಲು ಕರೆ ನೀಡಿದರು.
ಮಥಿರಾ ಯಾರು?
ಮಥಿರಾ ಮೊಹಮ್ಮದ್, ಜಿಂಬಾಬ್ವೆಯಲ್ಲಿ ಜನಿಸಿದ ಪಾಕಿಸ್ತಾನಿ ಮಾಡೆಲ್, ಟಿವಿ ನಿರೂಪಕಿ, ಗಾಯಕಿ ಮತ್ತು ನಟಿ. ಜಿಂಬಾಬ್ವೆಯಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ ಅವರು ಮತ್ತು ಅವರ ಕುಟುಂಬ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡಿತು. ಮಥಿರಾ ನಂತರ ಪಾಕಿಸ್ತಾನದ ಮನರಂಜನಾ ಉದ್ಯಮದಲ್ಲಿ ಪ್ರಸಿದ್ಧಿ ಪಡೆದರು. ಮತಿರಾ ಪ್ರಬಲ ಆನ್‌ಲೈನ್ ಉಪಸ್ಥಿತಿಯನ್ನು ಹೊಂದಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಮತ್ತು Xನಲ್ಲಿ 59,000 ಅನುಯಾಯಿಗಳನ್ನು ಹೊಂದಿದ್ದಾರೆ. 2014ರಲ್ಲಿ ಪಾಕಿಸ್ತಾನಿ ಗಾಯಕ ಫರಾನ್ ಜೆ. ಮಿರ್ಜಾ ಅವರನ್ನು ವಿವಾಹವಾಗಿದ್ದು ದಂಪತಿಗೆ ಆಹಿಲ್ ರಿಜ್ವಿ ಎಂಬ ಮಗನಿದ್ದಾನೆ. ಆದಾಗ್ಯೂ, ದಂಪತಿಗಳು 2018ರಲ್ಲಿ ವಿಚ್ಛೇದನ ಪಡೆದಿದ್ದರು.
Advertisement