Ukraine war: ರಷ್ಯಾ- ಅಮೆರಿಕ ಮಾತುಕತೆ ಅಂತ್ಯ, ಮುಂದಿನ ವಾರ ಟ್ರಂಪ್- ಪುಟಿನ್ ಭೇಟಿ ಇಲ್ಲ ಅಂದಿದ್ದೇಕೆ ರಷ್ಯಾ?

ಈ ಸಭೆಯಲ್ಲಿ ಯುಕ್ರೇನ್ ಅಧಿಕಾರಿಗಳು ಭಾಗಿಯಾಗಿರಲಿಲ್ಲ. ಈ ವಾರದ ಮಾತುಕತೆಯಲ್ಲಿ ಕೈವ್ ಭಾಗವಹಿಸದಿದ್ದರೆ, ಆ ಸಭೆಯ ಯಾವುದೇ ಫಲಿತಾಂಶವನ್ನು ತಮ್ಮ ದೇಶ ಸ್ವೀಕರಿಸುವುದಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
U.S. Secretary of State Marco Rubio, second left, meets with Saudi Foreign Minister Prince Faisal bin Farhan Al Saud, Saudi National Security Advisor Mosaad bin Mohammad Al-Aiban, U.S. National Security Advisor Mike Waltz, third left, U.S. Middle East envoy Steve Witkoff, left, Russian Foreign Minister Sergei Lavrov, right, and Russian President Vladimir Putin's foreign policy advisor Yuri Ushakov, second right
ರಷ್ಯಾ- ಅಮೆರಿಕ ಅಧಿಕಾರಿಗಳ ಸಭೆonline desk
Updated on

ಯುಕ್ರೇನ್ ವಿರುದ್ಧದ ಯುದ್ಧವನ್ನು ಕೊನೆಗಾಣಿಸುವ ಸಂಬಂಧ ಸಮಾಲೋಚನೆ ನಡೆಸುವುದಕ್ಕೆ ಸೌದಿ ಅರೇಬಿಯಾದಲ್ಲಿ ನಡೆದ ರಷ್ಯಾ- ಅಮೆರಿಕಾದ ಉನ್ನತಮಟ್ಟದ ಸಭೆ ಅಂತ್ಯಗೊಂಡಿದೆ.

ಸಭೆಯಲ್ಲಿ ಟ್ರಂಪ್ ನೇತೃತ್ವದಲ್ಲಿ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಆಗಿರುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಈ ಸಭೆಯಲ್ಲಿ ಯುಕ್ರೇನ್ ಅಧಿಕಾರಿಗಳು ಭಾಗಿಯಾಗಿರಲಿಲ್ಲ. ಈ ವಾರದ ಮಾತುಕತೆಯಲ್ಲಿ ಕೈವ್ ಭಾಗವಹಿಸದಿದ್ದರೆ, ಆ ಸಭೆಯ ಯಾವುದೇ ಫಲಿತಾಂಶವನ್ನು ತಮ್ಮ ದೇಶ ಸ್ವೀಕರಿಸುವುದಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಯುರೋಪಿಯನ್ ಮಿತ್ರರಾಷ್ಟ್ರಗಳು ಸಹ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಗೆ ದಾರಿ ಮಾಡಿಕೊಡುವುದೂ ಸಹ ಈ ಸಭೆಯ ಉದ್ದೇಶವಾಗಿತ್ತು. ಮಾತುಕತೆ ಮುಗಿದ ನಂತರ, ಪುಟಿನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಷಾಕೋವ್ ರಷ್ಯಾದ ಚಾನೆಲ್ ಒನ್‌ಗೆ ಮಾಹಿತಿ ನೀಡಿದ್ದು, ಟ್ರಂಪ್- ಪುಟಿನ್ ಸಭೆಗೆ ಇನ್ನೂ ದಿನಾಂಕ ನಿಗದಿಪಡಿಸಲಾಗಿಲ್ಲ ಆದರೆ ಮುಂದಿನ ವಾರ ಅದು ನಡೆಯುವುದು "ಅಸಂಭವ" ಎಂದು ಹೇಳಿದ್ದಾರೆ.

ತಮ್ಮನ್ನು ಬದಿಗಿಡಲಾಗುತ್ತಿದೆ- ಮಿತ್ರರಾಷ್ಟ್ರಗಳ ಕಳವಳ

ಮಾತುಕತೆಗಳು ಪ್ರಾಥಮಿಕವಾಗಿ "ಯುಎಸ್-ರಷ್ಯಾದ ಸಂಬಂಧಗಳನ್ನು ಪುನಃಸ್ಥಾಪಿಸುವುದು, ಜೊತೆಗೆ ಉಕ್ರೇನ್ ವಿರುದ್ಧದ ಯುದ್ಧವನ್ನು ಇತ್ಯರ್ಥಗೊಳಿಸುವುದರ ಕುರಿತು ಸಂಭವನೀಯ ಮಾತುಕತೆಗಳನ್ನು ಸಿದ್ಧಪಡಿಸುವುದು ಮತ್ತು ಇಬ್ಬರು ಅಧ್ಯಕ್ಷರ ಸಭೆಯನ್ನು ಆಯೋಜಿಸುವುದರ ಮೇಲೆ ಕೇಂದ್ರೀಕರಿಸಲ್ಪಡುತ್ತವೆ ಎಂದು ಯೂರಿ ಉಷಾಕೋವ್ ಹೇಳಿದ್ದಾರೆ.

ಯುಎಸ್ ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್ ಮಾತನಾಡಿ, ರಷ್ಯನ್ನರು ಶಾಂತಿಯನ್ನು ಬಯಸುವುದರ ಬಗ್ಗೆ ಎಷ್ಟು ಗಂಭೀರರಾಗಿದ್ದಾರೆ ಮತ್ತು ವಿವರವಾದ ಮಾತುಕತೆಗಳನ್ನು ಪ್ರಾರಂಭಿಸಬಹುದೇ ಎಂದು ನಿರ್ಧರಿಸುವ ಗುರಿಯನ್ನು ಈ ಸಭೆ ಹೊಂದಿದೆ ಎಂದು ಹೇಳಿದರು.

ಯುರೋಪ್ ನ್ನು ರಷ್ಯಾ-ಯುಕ್ರೇನ್ ವಿಷಯದ ಸಂಭಾಷಣೆಯಿಂದ ಹೊರಗಿಡಲಾಗಿದೆ ಎಂಬ ಕಲ್ಪನೆಯನ್ನು ಶ್ವೇತಭವನದ ಅಧಿಕಾರಿಗಳು ಅಲ್ಲಗಳೆದಿದ್ದಾರೆ, ಆಡಳಿತ ಅಧಿಕಾರಿಗಳು ಹಲವಾರು ನಾಯಕರೊಂದಿಗೆ ಮಾತನಾಡಿದ್ದಾರೆ ಎಂದು ಅಮೇರಿಕ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com