ಭಾರತ ಸೇರಿ ಇತರ ದೇಶಗಳಿಂದ ಗಡಿಪಾರುಗೊಂಡ 300 ಪ್ರಜೆಗಳು ಪನಾಮಾ ಸಿಟಿಯಲ್ಲಿ ಬಂಧಿ!

ಅಮೆರಿಕಕ್ಕೆ ಅಕ್ರಮವಾಗಿ ಬಂದ ವಲಸಿಗರು ಹೆಚ್ಚಾಗಿ ಇರಾನ್, ಭಾರತ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ ಸೇರಿದಂತೆ 10 ಏಷ್ಯಾದ ದೇಶಗಳಿಂದ ಬಂದವರಾಗಿದ್ದಾರೆ.
Panama's Minister of Public Security Frank Alexis Abrego
ಪನಾಮದ ಸಾರ್ವಜನಿಕ ಭದ್ರತಾ ಸಚಿವ ಫ್ರಾಂಕ್ ಅಲೆಕ್ಸಿಸ್ ಅಬ್ರೆಗೊ
Updated on

ಪನಾಮ ಸಿಟಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ಗಡೀಪಾರು ಮಾಡಲಾದ ವಿವಿಧ ದೇಶಗಳ ಸುಮಾರು 300 ಜನರನ್ನು ಪನಾಮ ಸಿಟಿಯ ಹೋಟೆಲ್‌ನಲ್ಲಿ ಇರಿಸಲಾಗಿದೆ, ಅಂತಾರಾಷ್ಟ್ರೀಯ ಅಧಿಕಾರಿಗಳು ತಮ್ಮ ದೇಶಗಳಿಗೆ ಅವರು ಮರಳಲು ವ್ಯವಸ್ಥೆ ಮಾಡುವವರೆಗೆ ವಲಸಿಗರು ಇಲ್ಲಿ ಕಾಯಬೇಕಾದ ಪರಿಸ್ಥಿತಿಯಿದೆ.

ಶೇಕಡಾ 40 ಕ್ಕಿಂತ ಹೆಚ್ಚು ವಲಸಿಗರು ಸ್ವಯಂಪ್ರೇರಣೆಯಿಂದ ತಮ್ಮ ತಾಯ್ನಾಡಿಗೆ ಹಿಂತಿರುಗುವುದಿಲ್ಲ. ಹೋಟೆಲ್ ಕೋಣೆಗಳಲ್ಲಿದ್ದ ವಲಸಿಗರು ಸಹಾಯ ಮಾಡಿ ಎಂದು ಸ್ಟಿಕ್ಕರ್ ನಲ್ಲಿ ಬರೆದು ಬಾಗಿಲಿಗೆ ಅಂಟಿಸಿದ್ದು, ನಮ್ಮ ದೇಶದಲ್ಲಿ ನಾವು ನಮ್ಮನ್ನು ಬಚಾವ್ ಮಾಡಲಿಲ್ಲ ಎಂದು ಬರೆದಿದ್ದಾರೆ.

ಅಮೆರಿಕಕ್ಕೆ ಅಕ್ರಮವಾಗಿ ಬಂದ ವಲಸಿಗರು ಹೆಚ್ಚಾಗಿ ಇರಾನ್, ಭಾರತ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ ಸೇರಿದಂತೆ 10 ಏಷ್ಯಾದ ದೇಶಗಳಿಂದ ಬಂದವರಾಗಿದ್ದಾರೆ.

ಆ ಕೆಲವು ದೇಶಗಳಿಗೆ ನೇರವಾಗಿ ಗಡೀಪಾರು ಮಾಡಲು ಅಮೆರಿಕಕ್ಕೆ ತೊಂದರೆಯಾಗಿದೆ, ಆದ್ದರಿಂದ ಪನಾಮ ಸಿಟಿಯನ್ನು ನಿಲ್ದಾಣವಾಗಿ ಬಳಸಲಾಗುತ್ತಿದೆ. ಇಂದು ಕೋಸ್ಟರಿಕಾಕ್ಕೆ ಸಹ ಇದೇ ರೀತಿ ಗಡೀಪಾರದ ವಲಸಿಗರನ್ನು ಹೊತ್ತ ವಿಮಾನ ಬಂದಿಳಿಯಲಿದೆ.

ಪನಾಮದ ಭದ್ರತಾ ಸಚಿವ ಫ್ರಾಂಕ್ ಅಬ್ರೆಗೊ, ಪನಾಮ ಮತ್ತು ಯುಎಸ್ ನಡುವಿನ ವಲಸೆ ಒಪ್ಪಂದದ ಭಾಗವಾಗಿ ವಲಸಿಗರು ವೈದ್ಯಕೀಯ ಆರೈಕೆ ಮತ್ತು ಆಹಾರವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಪನಾಮ ಕಾಲುವೆಯ ನಿಯಂತ್ರಣವನ್ನು ಮರಳಿ ಪಡೆಯುವ ಟ್ರಂಪ್ ಅವರ ಬೆದರಿಕೆಗಳ ಮೇಲೆ ರಾಜಕೀಯ ಒತ್ತಡವನ್ನು ಎದುರಿಸುತ್ತಿರುವ ಪನಾಮ ಅಧ್ಯಕ್ಷ ಜೋಸ್ ರೌಲ್ ಮುಲಿನೊ, ಗಡೀಪಾರು ಮಾಡುವ ವಿಮಾನಗಳಲ್ಲಿ ಮೊದಲನೆಯದು ಕಳೆದ ಗುರುವಾರ ಆಗಮಿಸಿತ್ತು ಎಂದು ತಿಳಿಸಿದ್ದಾರೆ.

ಗಡೀಪಾರು ಮಾಡಿದವರು ಎದುರಿಸುತ್ತಿರುವ ಬಂಧನ ಮತ್ತು ಕಾನೂನು ನಿರ್ಬಂಧವು ಮಧ್ಯ ಅಮೆರಿಕದಲ್ಲಿ ಆತಂಕವನ್ನು ಹೆಚ್ಚಿಸಿದೆ, ಹೋಟೆಲ್‌ನ ಎತ್ತರದ ಮಹಡಿಗಳಲ್ಲಿ ತಮ್ಮ ಕೋಣೆಗಳ ಕಿಟಕಿಗಳ ಮೂಲಕ ವಲಸಿಗರು ಹತ್ತಿ ಸಹಾಯಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಕಂಡುಬರುತ್ತಿದೆ.

Panama's Minister of Public Security Frank Alexis Abrego
ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಕೂಡ ಒಂದು; India ಬಳಿ ಸಾಕಷ್ಟು ಹಣವಿದೆ, ನಾವೇಕೆ ಅವರಿಗೆ ಹಣ ನೀಡಬೇಕು: ಡೊನಾಲ್ಡ್ ಟ್ರಂಪ್

ಗಡೀಪಾರು ಮಾಡಿದ 299 ಜನರಲ್ಲಿ 171 ಜನರು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಮತ್ತು ಯುಎನ್ ನಿರಾಶ್ರಿತರ ಸಂಸ್ಥೆಯ ಸಹಾಯದಿಂದ ಸ್ವಯಂಪ್ರೇರಣೆಯಿಂದ ತಮ್ಮ ದೇಶಗಳಿಗೆ ಮರಳಲು ಒಪ್ಪಿಕೊಂಡಿದ್ದಾರೆ ಎಂದು ಅಬ್ರೆಗೊ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಏಜೆನ್ಸಿಗಳು ಇತರ 128 ವಲಸಿಗರೊಂದಿಗೆ ಮಾತನಾಡುತ್ತಿದ್ದು, ಅವರಿಗೆ ಮೂರನೇ ದೇಶಗಳಲ್ಲಿ ಗಮ್ಯಸ್ಥಾನವನ್ನು ಹುಡುಕುವ ಪ್ರಯತ್ನದಲ್ಲಿವೆ. ಗಡೀಪಾರು ಮಾಡಲಾದ ಐರಿಶ್ ಪ್ರಜೆಯೊಬ್ಬರು ಈಗಾಗಲೇ ತಮ್ಮ ದೇಶಕ್ಕೆ ಮರಳಿದ್ದಾರೆ ಎಂದು ಅಬ್ರೆಗೊ ಹೇಳಿದರು.

Panama's Minister of Public Security Frank Alexis Abrego
ಗಡಿಪಾರುಗೊಂಡ 112 ಮಂದಿ ಭಾರತೀಯರನ್ನು ಹೊತ್ತ ಅಮೆರಿಕಾ ಮೂರನೇ ವಿಮಾನ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮನ

ತಮ್ಮ ದೇಶಗಳಿಗೆ ಮರಳಲು ಒಪ್ಪದವರನ್ನು ತಾತ್ಕಾಲಿಕವಾಗಿ ದೂರದ ಡೇರಿಯನ್ ಪ್ರಾಂತ್ಯದಲ್ಲಿರುವ ಒಂದು ಸೌಲಭ್ಯದಲ್ಲಿ ಇರಿಸಲಾಗುತ್ತದೆ. ಅದರ ಮೂಲಕ ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ವಲಸಿಗರು ಉತ್ತರಕ್ಕೆ ಪ್ರಯಾಣಿಸಿದ್ದಾರೆ ಎಂದು ಅಬ್ರೆಗೊ ತಿಳಿಸಿದರು.

ಪನಾಮದ ಒಂಬುಡ್ಸ್‌ಮನ್ ಕಚೇರಿಯು ಗಡೀಪಾರು ಮಾಡಿದವರ ಪರಿಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ನೀಡಬೇಕಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com