Donald Trump
ಡೊನಾಲ್ಡ್ ಟ್ರಂಪ್

Trump ಆಡಳಿತದ 5 ಮಿಲಿಯನ್ ಡಾಲರ್ ಮೊತ್ತದ 'ಗೋಲ್ಡ್ ಕಾರ್ಡ್': ಏನಿದು, ಯಾರಿಗೆ ಅನ್ವಯ?

Published on

ನವ ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ಪ್ರಜೆಗಳಿಗೆ 5 ಮಿಲಿಯನ್ ಡಾಲರ್ ಮೊತ್ತದ "ಗೋಲ್ಡ್ ಕಾರ್ಡ್" ನಿವಾಸಿ ಪರವಾನಗಿಗಳನ್ನು ನೀಡುವ ಯೋಜನೆಯನ್ನು ಘೋಷಿಸಿದ್ದಾರೆ. ಇದು ಅಮೆರಿಕದ ಪೌರತ್ವಕ್ಕೆ ಮಾರ್ಗವನ್ನು ಒದಗಿಸುವ ಕಾರ್ಯಕ್ರಮವಾಗಿದೆ.

ಇದನ್ನು ಸರಳವಾಗಿ ಹೇಳುವುದಾದರೆ, "ಶ್ರೀಮಂತರಿಗೆ ಗ್ರೀನ್ ಕಾರ್ಡ್" ಎನ್ನಬಹುದು. ಇನ್ನು ಎರಡು ವಾರಗಳಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಇದು "ಅತ್ಯಂತ ಉನ್ನತ ಮಟ್ಟದ ವ್ಯಕ್ತಿಗಳನ್ನು" ಆಕರ್ಷಿಸಲಿದೆ. ಇದರಿಂದ ಸಂಗ್ರಹವಾದ ಹಣವು ರಾಷ್ಟ್ರೀಯ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಈ ಅಧಿಕ ವೆಚ್ಚದ ವೀಸಾ ಈಗಿರುವ ಇಬಿ-5 ವಲಸೆ ಹೂಡಿಕೆದಾರರ ವೀಸಾಕ್ಕೆ ಬದಲಿಯಾಗಿದೆ. ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮಿಗಳು, ಆಗರ್ಭ ಶ್ರೀಮಂತ ವಿದೇಶಿ ಹೂಡಿಕೆದಾರರಿಗಾಗಿ ರಚಿಸಲಾಗಿದೆ.

ಶ್ರೀಮಂತ ವ್ಯಕ್ತಿಗಳು ಅಮೆರಿಕದಲ್ಲಿ ವಾಸಿಸಿ ಅಂತಿಮವಾಗಿ ಪೌರತ್ವವನ್ನು ಪಡೆಯುವ ಪ್ರಕ್ರಿಯೆಯಲ್ಲಿ ಏನು ಬದಲಾಗಿದೆ ಎಂಬುದರ ವಿವರ ಇಲ್ಲಿದೆ.

Q

EB-5 ವಲಸೆ ಹೂಡಿಕೆದಾರರ ವೀಸಾ ಎಂದರೇನು?

A

1990 ರಲ್ಲಿ ಪ್ರಾರಂಭಿಸಲಾದ ಈ ವೀಸಾದಡಿ ಉದ್ಯೋಗಗಳನ್ನು ಸೃಷ್ಟಿಸುವ ಹೊಸ ವ್ಯವಹಾರದಲ್ಲಿ ಕನಿಷ್ಠ 1.05 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ವಿದೇಶಿ ಪ್ರಜೆಗಳಿಗೆ ನಿವಾಸ (ಗ್ರೀನ್ ಕಾರ್ಡ್) ಮತ್ತು ಅಂತಿಮವಾಗಿ ಪೌರತ್ವವನ್ನು ನೀಡಿತು. ಉದ್ಯಮವು ಗ್ರಾಮೀಣ ಪ್ರದೇಶದಲ್ಲಿದ್ದರೆ, ಹೆಚ್ಚಿನ ನಿರುದ್ಯೋಗ ಇರುವ ಪ್ರದೇಶದಲ್ಲಿದ್ದರೆ ಅಥವಾ ಮೂಲಸೌಕರ್ಯ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರೆ ಹೂಡಿಕೆಯ ಅಗತ್ಯವನ್ನು 8 ಲಕ್ಷ ಡಾಲರ್ ಗೆ ಇಳಿಸಲಾಯಿತು.

Q

ಈ ವೀಸಾದ ಮೇಲೆ ಮಿತಿ ಇದೆಯೇ?

A

EB-5 ಕಾರ್ಯಕ್ರಮವನ್ನು ವಾರ್ಷಿಕವಾಗಿ 10,000 ವೀಸಾಗಳಿಗೆ ಮಿತಿಗೊಳಿಸಲಾಗಿದ್ದು, ಅವುಗಳಲ್ಲಿ 3 ಸಾವಿರ ವೀಸಾಗಳನ್ನು ಹೆಚ್ಚಿನ ನಿರುದ್ಯೋಗ ಪ್ರದೇಶಗಳಲ್ಲಿ ಹೂಡಿಕೆಗಾಗಿ ಕಾಯ್ದಿರಿಸಲಾಗಿದೆ.

Q

ವೀಸಾ ಬದಲಾವಣೆ ಏಕೆ?

A

ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ವೀಸಾ ಹೆಸರಿನಲ್ಲಿ ಹೆಚ್ಚಿನ ಶೋಷಣೆ ನಡೆಯುತ್ತಿದ್ದು, ತುಂಬಾ ಕಡಿಮೆ ಬೆಲೆ ಹೊಂದಿದೆ. EB-5 ಕಾರ್ಯಕ್ರಮವು ಅಸಂಬದ್ಧ ಮತ್ತು ವಂಚನೆಯಿಂದ ತುಂಬಿತ್ತು, ಗ್ರೀನ್ ಕಾರ್ಡ್ ಪಡೆಯಲು ಕಡಿಮೆ-ವೆಚ್ಚದ ಮಾರ್ಗ ಹೊಂದಿತ್ತು. ಹಾಗಾಗಿ, EB-5 ಕಾರ್ಯಕ್ರಮವನ್ನು ಮುಂದುವರಿಸುವ ಬದಲು, ಕೊನೆಗೊಳಿಸಲು ಅಧ್ಯಕ್ಷರು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ, ಅರ್ಜಿದಾರರ ನಿಧಿಯ ಮೂಲವನ್ನು ಪತ್ತೆಹಚ್ಚುವಲ್ಲಿನ ಸವಾಲುಗಳು ಮತ್ತು ಪಕ್ಷಪಾತದ ಸಂಭಾವ್ಯಗಳ ಬಗ್ಗೆ ಕಳವಳ ವ್ಯಕ್ತವಾಗಿದ್ದು, ವೀಸಾ ಕಾರ್ಯಕ್ರಮದ ವಿರುದ್ಧ ಉಲ್ಲೇಖಿಸಲಾಗಿದೆ.

Q

'ಗೋಲ್ಡ್ ವೀಸಾ'ಕ್ಕೆ ಯಾರು ಅರ್ಹರಾಗಿರುತ್ತಾರೆ?

A

ಶ್ರೀಮಂತರು ಮತ್ತು ಯಶಸ್ವಿ ಉದ್ಯಮಿಗಳು ಅರ್ಹರಾಗಿರುತ್ತಾರೆ. ಅವರು ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಬಹಳಷ್ಟು ತೆರಿಗೆಗಳನ್ನು ಪಾವತಿಸುತ್ತಾರೆ, ತಮ್ಮ ಉದ್ಯಮಗಳಲ್ಲಿ ಬಹಳಷ್ಟು ಜನರನ್ನು ನೇಮಿಸಿಕೊಳ್ಳುತ್ತಾರೆ, ಹೀಗಾಗಿ ಗೋಲ್ಡ್ ವೀಸಾ ಯಶಸ್ವಿಯಾಗಬಹುದು ಎಂದು ಭಾವಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.

Q

ಪರಿಶೀಲನಾ ಪ್ರಕ್ರಿಯೆ ಏನು?

A

ಎಲ್ಲಾ ಅರ್ಜಿದಾರರು ವಿಶ್ವ ದರ್ಜೆಯ ಜಾಗತಿಕ ನಾಗರಿಕರು ಎಂದು ಖಚಿತಪಡಿಸಿಕೊಳ್ಳಲು ಕಠಿಣ ಪರಿಶೀಲನೆಗೆ ಒಳಗಾಗುತ್ತಾರೆ ಎಂದು ಲುಟ್ನಿಕ್ ಹೇಳಿದರು.

Q

ವೀಸಾದ ಮೇಲೆ ಯಾವುದೇ ಮಿತಿ ಇದೆಯೇ?

A

ರಾಷ್ಟ್ರೀಯ ಕೊರತೆಯನ್ನು ಕಡಿಮೆ ಮಾಡಲು ಸರ್ಕಾರವು 10 ಮಿಲಿಯನ್ ವೀಸಾಗಳನ್ನು ಮಾರಾಟ ಮಾಡಬಹುದು ಎಂದು ಅಧ್ಯಕ್ಷರು ಹೇಳಿದ್ದು, ಕಾರ್ಯಕ್ರಮದ ಮೇಲೆ ಯಾವುದೇ ನಿರ್ಣಾಯಕ ಮಿತಿಯಿಲ್ಲ.

10 ಮಿಲಿಯನ್ ವೀಸಾಗಳು 50 ಟ್ರಿಲಿಯನ್ ಡಾಲರ್ ಆದಾಯವನ್ನು ತರಬೇಕು.

Q

ಪೌರತ್ವಕ್ಕೆ ದಾರಿ ಏನು?

A

EB-5 ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಿರುವವರು ಸೇರಿದಂತೆ ಪ್ರಸ್ತುತ ಗ್ರೀನ್ ಕಾರ್ಡ್ ಹೊಂದಿರುವವರು ಪೌರತ್ವಕ್ಕೆ ಅರ್ಹರಾಗುವ ಮೊದಲು ಐದು ವರ್ಷಗಳ ಕಾಲ ಕಾನೂನುಬದ್ಧ ಶಾಶ್ವತ ನಿವಾಸಿಗಳಾಗಿ ಅಮೆರಿಕಾದಲ್ಲಿ ವಾಸಿಸಬೇಕು. ಗೋಲ್ಡ್ ಕಾರ್ಡ್ ವೀಸಾ ಹೊಂದಿರುವವರು ಪೌರತ್ವಕ್ಕಾಗಿ ಕಡಿಮೆ ಕಾಯುವ ಸಮಯವನ್ನು ಹೊಂದಿರುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

Q

ಇದು ಇತರ ವರ್ಗಗಳ ಅರ್ಜಿದಾರರ ಮೇಲೆ ಪರಿಣಾಮ ಬೀರುತ್ತದೆಯೇ?

A

ಅಮೆರಿಕ ಸರ್ಕಾರದ ದತ್ತಾಂಶದ ಪ್ರಕಾರ, ಯುಎಸ್ ನಲ್ಲಿ ಗ್ರೀನ್ ಕಾರ್ಡ್‌ಗಳಿಗಾಗಿ ಕಾಯುತ್ತಿರುವವರಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ಇದ್ದಾರೆ. ಉದ್ಯೋಗ ಆಧಾರಿತ ವರ್ಗಗಳಲ್ಲಿ, ಭಾರತೀಯ ಅರ್ಜಿದಾರರ ಬಾಕಿ ಇರುವಿಕೆ 2030 ರ ವೇಳೆಗೆ 2.19 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಯಾವುದೇ ಹೊಸ ವರ್ಗವು ಅವರ ಕಾಯುವ ಅವಧಿಗೆ ಸೇರಿಸಲ್ಪಡುತ್ತದೆ.

Q

ಇತ್ತೀಚಿನ ದಿನಗಳಲ್ಲಿ ಅಮೆರಿಕ ಎಷ್ಟು ಜನರಿಗೆ ಪೌರತ್ವ ನೀಡಿದೆ?

A

ಕಳೆದ ದಶಕದಲ್ಲಿ, USCIS 7.9 ಮಿಲಿಯನ್‌ಗಿಂತಲೂ ಹೆಚ್ಚು ನಾಗರಿಕರಿಗೆ ಪೌರತ್ವ ನೀಡಿದೆ, 2024 ರ ಆರ್ಥಿಕ ವರ್ಷದಲ್ಲಿ 818,500 ಹೊಸ ನಾಗರಿಕರಿಗೆ ನೀಡಲಾಗಿದೆ.

ಇದು ಹಿಂದಿನ ವರ್ಷಕ್ಕಿಂತ 7% ರಷ್ಟು ಕಡಿಮೆಯಾಗಿದ್ದರೂ, ಮೂರು ವರ್ಷಗಳ 2.6 ಮಿಲಿಯನ್ ಹೊಸ ನಾಗರಿಕರನ್ನು ಮೀರಿದೆ.

Q

ಶ್ರೀಮಂತ ರಷ್ಯನ್ನರು ಗೋಲ್ಡ್ ಕಾರ್ಡ್‌ಗೆ ಅರ್ಹತೆ ಪಡೆಯುತ್ತಾರೆಯೇ?

A

ನನಗೆ ಕೆಲವು ರಷ್ಯಾದ ಶ್ರೀಮಂತ ಉದ್ಯಮಿಗಳು ಪರಿಚಯವಿದ್ದು, ಅವರು ತುಂಬಾ ಒಳ್ಳೆಯವರು.

Q

ಇತರ ದೇಶಗಳಲ್ಲಿ ಇದೇ ರೀತಿಯ ಯೋಜನೆಗಳಿವೆಯೇ?

A

ಸ್ಪೇನ್ ಮತ್ತು ಗ್ರೀಸ್ ಗೋಲ್ಡ್ ಕಾರ್ಡ್‌ನಂತಹ ಇದೇ ರೀತಿಯ ವೀಸಾ ನೀಡುತ್ತವೆ. ಮಾಲ್ಟಾ, ಈಜಿಪ್ಟ್ ಮತ್ತು ಜೋರ್ಡಾನ್‌ನಂತಹ ದೇಶಗಳು ವಿದೇಶಿ ಅರ್ಜಿದಾರರು ಹೂಡಿಕೆಯ ಮೂಲಕ ನೇರವಾಗಿ ಪೌರತ್ವವನ್ನು ಪಡೆಯಲು ಅವಕಾಶ ನೀಡುತ್ತವೆ. ಈ "ಗೋಲ್ಡನ್ ಪಾಸ್‌ಪೋರ್ಟ್" ಕಾರ್ಯಕ್ರಮಗಳು ಕೆರಿಬಿಯನ್‌ನಲ್ಲಿ ಸ್ಪರ್ಧಾತ್ಮಕವಾಗಿವೆ, ಗ್ರೆನಡಾ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್‌ನಂತಹ ದೇಶಗಳು 2 ಲಕ್ಷ ಡಾಲರ್ ನಿಂದ 3 ಲಕ್ಷ ಡಾಲರ್ ವರೆಗಿನ ಕಡಿಮೆ ಶುಲ್ಕವನ್ನು ನೀಡುತ್ತವೆ.

Q

ತೆರಿಗೆ ಪರಿಣಾಮಗಳೇನು?

A

ತೆರಿಗೆಗಿಂತ ಭಿನ್ನವಾಗಿ, ಯುಎಸ್ ಗೋಲ್ಡ್ ಕಾರ್ಡ್, ಹೆಚ್ಚಿನ ಬೇಡಿಕೆಯನ್ನು ಆಕರ್ಷಿಸುವ ಸಾಧ್ಯತೆಯಿದ್ದರೂ ಯುಎಸ್ ತೆರಿಗೆ ವ್ಯವಸ್ಥೆಯನ್ನು ತಪ್ಪಿಸುವುದು ಕಷ್ಟ.

Q

ಗೋಲ್ಡ್ ಕಾರ್ಡ್ ನ್ನು ಜಾರಿಗೆ ತರುವಲ್ಲಿ ಯಾವುದೇ ಸಂಭಾವ್ಯ ಅಡೆತಡೆಗಳಿವೆಯೇ?

A

ಎಚ್ಚರದಿಂದಿರಿ. ಯುಎಸ್ ಕಾಂಗ್ರೆಸ್ ಅನುಮೋದನೆ ಇಲ್ಲದೆ ಇದನ್ನು ಜಾರಿಗೆ ತರಲು ಪ್ರಯತ್ನಿಸಿದರೆ ಈ ವೀಸಾ ಯೋಜನೆಯು ಸ್ವಲ್ಪ ತೊಂದರೆಗೆ ಸಿಲುಕಬಹುದು, "ಪೌರತ್ವ ಅರ್ಹತೆಗಳನ್ನು" ನಿಗದಿಪಡಿಸುವ ಜವಾಬ್ದಾರಿ ಕಾಂಗ್ರೆಸ್‌ ಮೇಲಿದೆ. ಉದಾಹರಣೆಗೆ, ಟ್ರಂಪ್ ಆಡಳಿತವು ಕೊನೆಗೊಳಿಸಲು ಬಯಸುವ EB-5 ಕಾರ್ಯಕ್ರಮವನ್ನು ಅದು ಅಧಿಕೃತಗೊಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com