ಚಿನ್ಮೋಯ್‌ ಕೃಷ್ಣ ದಾಸ್‌
ಚಿನ್ಮೋಯ್‌ ಕೃಷ್ಣ ದಾಸ್‌

ಬಾಂಗ್ಲಾ: ಹಿಂದೂ ಸಂತ ಚಿನ್ಮೋಯ್‌ ಕೃಷ್ಣ ದಾಸ್‌ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

ಢಾಕಾದಿಂದ ಚಟ್ಟೋಗ್ರಾಮ್‌ಗೆ ತೆರಳಿದ್ದ ಸುಪ್ರೀಂ ಕೋರ್ಟ್‌ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಎಂಡಿ ಸೈಫುಲ್ ಇಸ್ಲಾಂ ಅವರು ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದರು.
Published on

ಢಾಕಾ: ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿರುವ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶ ನ್ಯಾಯಾಲಯ ಶಾಕ್ ನೀಡಿದೆ.

ದೇಶದ್ರೋಹದ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಚಿನ್ಮೋಯ್ ಕೃಷ್ಣ ದಾಸ್ ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆಯೇ ಇಂದು ಬಿಗಿ ಭದ್ರತೆಯ ನಡುವೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಚಿತ್ತಗಾಂಗ್ ಕೋರ್ಟ್ ನಲ್ಲಿ ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾದೀಶರು,ಚಿನ್ಮೋಯ್ ಕೃಷ್ಣ ದಾಸ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಢಾಕಾದಿಂದ ಚಟ್ಟೋಗ್ರಾಮ್‌ಗೆ ತೆರಳಿದ್ದ ಸುಪ್ರೀಂ ಕೋರ್ಟ್‌ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಎಂಡಿ ಸೈಫುಲ್ ಇಸ್ಲಾಂ ಅವರು ಸುಮಾರು 30 ನಿಮಿಷಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ಢಾಕಾ ಮೂಲದ ದಿ ಡೈಲಿ ಸ್ಟಾರ್ ವರದಿ ಮಾಡಿದೆ.

11 ವಕೀಲರ ತಂಡದ ನೇತೃತ್ವವನ್ನು ವಕೀಲ ಅಪುರ್ಬಾ ಕುಮಾರ್ ಭಟ್ಟಾಚಾರ್ಜಿ ವಹಿಸಿದ್ದರು, ಅಪುರ್ಬಾ ಕುಮಾರ್ ಭಟ್ಟಾಚಾರ್ಜಿ ಅವರು ಚಿನ್ಮಯ್ ಸಹ ಭಾಗವಾಗಿರುವ ಸಮ್ಮಿಲಿತಾ ಸನಾತನಿ ಜಾಗರಣ್ ಜೋಟೆ ಸಂಸ್ಥೆಯ ವಕ್ತಾರರೂ ಆಗಿದ್ದಾರೆ. ಚಟ್ಟೋಗ್ರಾಮ್‌ನ ನ್ಯಾಯಾಲಯವು ಜಾಮೀನು ತಿರಸ್ಕರಿಸಿದ ಹಿನ್ನೆಲೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ಚಿನ್ಮಯ್ ಅವರ ವಕೀಲ ಭಟ್ಟಾಚಾರ್ಜಿ ಡೈಲಿ ಸ್ಟಾರ್‌ಗೆ ತಿಳಿಸಿದ್ದಾರೆ.

ಚಿನ್ಮೋಯ್‌ ಕೃಷ್ಣ ದಾಸ್‌
ಬಾಂಗ್ಲಾದಲ್ಲಿ ಇಸ್ಕಾನ್ ಮುಖಂಡ ಚಿನ್ಮೋಯ್ ಕೃಷ್ಣ ದಾಸ್ ಬಂಧನ, ಜಾಮೀನು ನಿರಾಕರಣೆಗೆ ಭಾರತ ಖಂಡನೆ!

ಈ ಹಿಂದೆ ಡಿಸೆಂಬರ್ 3, 2024 ರಂದು, ಪ್ರಾಸಿಕ್ಯೂಷನ್ ಸಮಯದಲ್ಲಿ ಚಿನ್ಮೋಯ್ ಅವರನ್ನು ಪ್ರತಿನಿಧಿಸಲು ವಕೀಲರು ಇಲ್ಲದ ಕಾರಣ ಜಾಮೀನು ವಿಚಾರಣೆಗೆ ಚಿತ್ತಗಾಂಗ್ ನ್ಯಾಯಾಲಯವು ಜನವರಿ 2 ರಂದು ನಿಗದಿಪಡಿಸಿತ್ತು. ಒಂದು ತಿಂಗಳ ನಂತರ ಇಂದು ನಡೆದ ವಿಚಾರಣೆಯನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆಸಲಾಯಿತು.

ಬಾಂಗ್ಲಾದೇಶದಲ್ಲಿ ಉಂಟಾದ ರಾಜಕೀಯ ಅರಾಜಕತೆ ಬಳಿಕ ಅಕ್ಟೋಬರ್‌ 25ರಂದು ಚಿತ್ತಾಗಾಂಗ್‌ನಲ್ಲಿ ಬಾಂಗ್ಲಾದೇಶ ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಹಿಂದೂ ಧರ್ಮವನ್ನು ಸಂಕೇತಿಸುವ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಚಿನ್ಮಯ್ ಕೃಷ್ಣ ದಾಸ್ ಅವರ ಹಿಂದಿನ ವಕೀಲ ರವೀಂದ್ರನಾಥ್ ಘೋಷ್ ಅವರು ಡಿಸೆಂಬರ್‌ನಲ್ಲಿ ಚಿನ್ಮಯ್‌ಗೆ ಕಾನೂನು ಸಹಾಯ ಮಾಡಲು ಮುಂದಾಗಿ ಜಾಮೀನು ಅರ್ಜಿ ಸಲ್ಲಿಸಲು ಹೋದಾಗ ನ್ಯಾಯಾಲಯದ ಹೊರಗೆ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. 75 ವರ್ಷದ ಹಿರಿಯ ವಕೀಲ ಘೋಷ್ ಅವರು ನಂತರ ಹಠಾತ್ ಎದೆ ನೋವಿನಿಂದ ಕೋಲ್ಕತ್ತಾದ ಸೇಠ್ ಸುಖಲಾಲ್ ಕರ್ನಾನಿ ಸ್ಮಾರಕ (SSKM) ಆಸ್ಪತ್ರೆಗೆ ದಾಖಲಾಗಿದ್ದರು. ವಿಚಾರಣೆ ವೇಳೆ ನೂರಾರು ವಕೀಲರು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿ ಗೊಂದಲ ಸೃಷ್ಟಿಸಿದ್ದರು.

ಹೆಚ್ಚುವರಿ ಬಂಧನಗಳ ನಂತರ ಪರಿಸ್ಥಿತಿ ಹದಗೆಟ್ಟಿತು. ಇಸ್ಕಾನ್ ಕೋಲ್ಕತ್ತಾದ ಪ್ರಕಾರ, ಇಬ್ಬರು ಸನ್ಯಾಸಿಗಳಾದ ಆದಿಪುರುಷ ಶ್ಯಾಮ್ ದಾಸ್ ಮತ್ತು ರಂಗನಾಥ್ ದಾಸ್ ಬ್ರಹ್ಮಚಾರಿ ಅವರನ್ನು ನವೆಂಬರ್ 29 ರಂದು ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಕಸ್ಟಡಿಯಲ್ಲಿ ಭೇಟಿ ಮಾಡಿದ ನಂತರ ಬಂಧಿಸಲಾಯಿತು. ಅಶಾಂತಿಯ ಸಮಯದಲ್ಲಿ ಗಲಭೆಕೋರರು ಬಾಂಗ್ಲಾದೇಶದ ಇಸ್ಕಾನ್ ಕೇಂದ್ರವನ್ನು ಧ್ವಂಸಗೊಳಿಸಿದ್ದಾರೆ ಎಂದು ಸಂಘಟನೆಯ ಉಪಾಧ್ಯಕ್ಷ ರಾಧಾ ರಾಮನ್ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಉಗ್ರಗಾಮಿ ವಾಕ್ಚಾತುರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಢಾಕಾದೊಂದಿಗೆ ಅಲ್ಪಸಂಖ್ಯಾತರ ಮೇಲಿನ ಉದ್ದೇಶಿತ ದಾಳಿಯ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸಿದೆ ಎಂದು ಒತ್ತಿಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com