Justin Trudeau ರಾಜೀನಾಮೆ: Bank of England ಮಾಜಿ ಗವರ್ನರ್ ಕೆನಡಾದ ಹೊಸ ಪ್ರಧಾನಿ?

ಬೆಲೆ ಏರಿಕೆ, ಆರ್ಥಿಕ ಸಂಕಷ್ಟ, ಅಮೇರಿಕಾ ಬೆದರಿಕೆಗಳಂತಹ ಸಂಕಷ್ಟದ ಸ್ಥಿತಿಯ ನಡುವೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿರುವುದು ದೇಶವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ.
Justin Trudeau
ಜಸ್ಟಿನ್ ಟ್ರುಡೊonline desk
Updated on

ಟೊರಂಟೋ: ಪಕ್ಷದ ಆತಂಕರಿಕವಾಗಿ ಹಾಗೂ ದೇಶದಲ್ಲಿ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ್ದಾರೆ.

ಕೆನಡಾದ ಅಮೇರಿಕಾ ನಡುವಿನ ವ್ಯಾಪಾರ-ವ್ಯವಹಾರ ಅಸಮತೋಲನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್ ಕೆನಡಾದ ಎಲ್ಲಾ ಸರಕುಗಳ ಮೇಲೆ 25% ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದಷ್ಟೇ ಅಲ್ಲದೇ ಅಕ್ರಮ ವಲಸೆಯೆಡೆಗೆ ಕಠಿಣ ನಿಲುವು ಹೊಂದಿರುವ ಟ್ರಂಪ್ ಕೆನಡಾವನ್ನು ಅಮೇರಿಕಾದ 51ನೇ ರಾಜ್ಯ ಎಂದು ಹೇಳುವ ಮೂಲಕ ವಿಲೀನಗೊಳಿಸಿಕೊಳ್ಳುವ ಮಾತುಗಳನ್ನೂ ಆಡಿದ್ದಾರೆ.

ಬೆಲೆ ಏರಿಕೆ, ಆರ್ಥಿಕ ಸಂಕಷ್ಟ, ಅಮೇರಿಕಾ ಬೆದರಿಕೆಗಳಂತಹ ಸಂಕಷ್ಟದ ಸ್ಥಿತಿಯ ನಡುವೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿರುವುದು ದೇಶವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ. ಡೊನಾಲ್ಡ್ ಟ್ರಂಪ್ ಪದಗ್ರಹಣವಾಗುವ ಮುನ್ನ ಕೆನಡಾದಲ್ಲಿ ಹೊಸ ನಾಯಕನ ಆಯ್ಕೆಯಾಗುವುದು ಅನುಮಾನ

ಹಾಗಾದರೆ ಕೆನಡಾ ಭವಿಷ್ಯವೇನು? ಟ್ರುಡೋ ಬಿಟ್ಟರೆ ಬೇರೆ ಯಾರು ಕೆನಡಾ ಪ್ರಧಾನಿಯಾಗಲು ಸಾಧ್ಯ ಎಂಬುದರ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.

ಹೊಸ ಪಕ್ಷದ ನಾಯಕನನ್ನು ಆಯ್ಕೆ ಮಾಡುವವರೆಗೆ ತಾನು ಪ್ರಧಾನಿಯಾಗಿ ಮುಂದುವರಿಯಲು ಯೋಜಿಸುತ್ತಿರುವುದಾಗಿ ಟ್ರುಡೊ ಹೇಳಿದ್ದಾರೆ. ಆದರೆ ಇದು ದೀರ್ಘಾವಧಿಯ ಪರಿಹಾರವಲ್ಲ.

ಟ್ರುಡೋ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ, ಅತ್ಯಂತ ಶಕ್ತಿಶಾಲಿ ಮತ್ತು ನಿಷ್ಠಾವಂತ ಮಂತ್ರಿಗಳಲ್ಲಿ ಒಬ್ಬರಾದ ಹಣಕಾಸು ಸಚಿವ ಕ್ರಿಸ್ಟಿಯಾ ಫ್ರೀಲ್ಯಾಂಡ್ ಕಳೆದ ತಿಂಗಳು ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿ ಟ್ರುಡೋ ಅವರಿಗೆ ತಮ್ಮ ಬೆಂಬಲವಿಲ್ಲ ಎಂಬ ಸಂದೇಶ ನೀಡಿದ್ದರು.

Justin Trudeau
'ಕೆನಡಾ-ಅಮೆರಿಕ ವಿಲೀನ': Justin Trudeau ರಾಜಿನಾಮೆ ಬೆನ್ನಲ್ಲೇ Donald Trump ಹೇಳಿಕೆ!, ಮುಳುವಾಯಿತೇ ಭಾರತದ ವಿರೋಧ?

ಹೊಸ ಪ್ರಧಾನಿ ಯಾವಾಗ?

ಮಾರ್ಚ್ 24 ರಂದು ಸಂಸತ್ತು ಪುನರಾರಂಭಗೊಳ್ಳುವ ಮೊದಲು ಲಿಬರಲ್‌ಗಳು ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಒಂದು ವೇಳೆ ನಾಯಕನ ಆಯ್ಕೆಯಾಗದೇ ಇದ್ದಲ್ಲಿ ಎಲ್ಲಾ ಮೂರು ವಿರೋಧ ಪಕ್ಷಗಳು ಮೊದಲ ಅವಕಾಶದಲ್ಲಿ ಅವಿಶ್ವಾಸ ಮತದಲ್ಲಿ ಲಿಬರಲ್ ಸರ್ಕಾರವನ್ನು ಉರುಳಿಸುವುದಾಗಿ ಹೇಳುತ್ತಿವೆ. ಅವಿಶ್ವಾಸ ಮಂಡನೆಯಾಗಿ ಸರ್ಕಾರ ಬಿದ್ದರೆ, ಕೆನಡಾ ಹೊಸ ಚುನಾವಣೆಗೆ ಸಜ್ಜಾಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಹೊಸದಾಗಿ ಆಯ್ಕೆಯಾಗುವ ನಾಯಕ ಬಹುಕಾಲ ಪ್ರಧಾನಿಯಾಗದೇ ಇರುವ ಸಾಧ್ಯತೆಗಳಿವೆ. ಅವಧಿಗೂ ಮುನ್ನ ಚುನಾವಣೆ ನಡೆದರೆ ಅದು ವಿಪಕ್ಷ ಕನ್ಸರ್ವೇಟಿವ್ ಪಕ್ಷಕ್ಕೆ ಅನುಕೂಲಕರವಾಗಿರುತ್ತದೆ.

ಮುಂದಿನ ಪ್ರಧಾನಿ ಯಾರು?

ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ದೇಶದ ಚುಕ್ಕಾಣಿ ಹಿಡಿದಿರುವ ಉದಾಹರಣೆಗಳು ಅತ್ಯಂತ ಕಡಿಮೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೆನಡಾ ಅಂಥಹದ್ದೊಂದು ಉದಾಹರಣೆಗೆ ಸಾಕ್ಷಿಯಾಗುವ ಸಾಧ್ಯೆತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅವರ ಹೆಸರು ಮಾರ್ಕ್ ಕಾರ್ನಿ.

ಈ ಮಾರ್ಕ್ ಕಾರ್ನಿ ಇದ್ದಾರಲ್ಲಾ, ಅವರು ಬ್ಯಾಂಕ್ ಆಫ್ ಕೆನಡಾದ ಮಾಜಿ ಮುಖ್ಯಸ್ಥ. ಅಷ್ಟೇ ಅಲ್ಲದೇ 1694 ರಲ್ಲಿ ಸ್ಥಾಪನೆಯಾದ ನಂತರ ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಆಗಿ ಸೇವೆ ಸಲ್ಲಿಸಿದ ಮೊದಲ ವಿದೇಶಿಯರೂ ಹೌದು. 2012 ರಲ್ಲಿ ಅವರು ಬ್ಯಾಂಕ್ ಆಫ್ ಇಂಗ್ಲೆಂಡ್ ನ ಗರ್ವನರ್ ಆಗಿ ನೇಮಕಗೊಂಡಿದ್ದರು. 2008ರಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಕೆನಡಾವನ್ನು ರಕ್ಷಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಇತರ ದೇಶಗಳಿಗಿಂತ ವೇಗವಾಗಿ ಚೇತರಿಸಿಕೊಂಡ ನಂತರ ಬ್ರಿಟನ್‌ನಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ನಲ್ಲಿ ಅವರು ಮಾಡಿದ ಕೆಲಸಗಳು ಅವರಿಗೆ ಕಠಿಣ ನಿಯಂತ್ರಕ ಎಂದೇ ಹೆಸರು ತಂದುಕೊಟ್ಟಿತ್ತು.

ಪ್ರಪಂಚದಲ್ಲಿ ಕೆಲವೇ ಜನರು ಕಾರ್ನಿಯ ಅರ್ಹತೆಗಳನ್ನು ಹೊಂದಿದ್ದಾರೆ. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳಿಂದ ಕೆನಡಾವನ್ನು ರಕ್ಷಿಸಲು ಮತ್ತು U.Kಗೆ ಬ್ರೆಕ್ಸಿಟ್ ನ್ನು ನಿರ್ವಹಿಸಲು ಸಹಾಯ ಮಾಡುವಲ್ಲಿ ಕಾರ್ನಿ ವ್ಯಾಪಕವಾಗಿ ಮನ್ನಣೆ ಪಡೆದಿದ್ದಾರೆ. ಕಾರ್ನಿ ರಾಜಕೀಯಕ್ಕೆ ಪ್ರವೇಶಿಸಲು ಮತ್ತು ಪ್ರಧಾನ ಮಂತ್ರಿಯಾಗಲು ಬಹಳ ಹಿಂದಿನಿಂದಲೂ ಆಸಕ್ತಿ ಹೊಂದಿದ್ದಾರೆ. ಆದರೆ ಅವರಿಗೆ ರಾಜಕೀಯ ಅನುಭವದ ಕೊರತೆಯಿದೆ.

Freeland ಗೆ ಇರುವ ಅವಕಾಶ, ಅನಾನುಕೂಲತೆಗಳೇನು?

ಕೆನಡಾದ ಹೊಸ ಪ್ರಧಾನಿ ಹುದ್ದೆಗೆ ಕೇಳಿಬರುತ್ತಿರುವ ಮತ್ತೊಂದು ಹೆಸರೆಂದರೆ ಅದು ಫ್ರೀಲ್ಯಾಂಡ್! ಟ್ರೂಡೊ ಕಳೆದ ತಿಂಗಳು ಫ್ರೀಲ್ಯಾಂಡ್‌ಗೆ ಅವರು ಇನ್ನು ಮುಂದೆ ಅವರು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಲು ಬಯಸುವುದಿಲ್ಲ ಆದರೆ ಅವರು ಉಪ ಪ್ರಧಾನ ಮಂತ್ರಿಯಾಗಿ ಉಳಿಯಬಹುದು ಮತ್ತು ಯುಎಸ್-ಕೆನಡಾ ಸಂಬಂಧಗಳಿಗೆ ಪ್ರಮುಖ ವ್ಯಕ್ತಿಯಾಗಬಹುದು ಎಂದು ಹೇಳಿದರು. ಫ್ರೀಲ್ಯಾಂಡ್‌ಗೆ ನಿಕಟವಾಗಿರುವ ಅಧಿಕಾರಿಯೊಬ್ಬರು ಫ್ರೀಲ್ಯಾಂಡ್ ಅವರು ಇನ್ನು ಮುಂದೆ ಟ್ರುಡೊ ಅವರ ವಿಶ್ವಾಸವನ್ನು ಹೊಂದಿಲ್ಲ. ಸಚಿವರಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಆದರೆ ಪ್ರಧಾನಿ ಹುದ್ದೆ ಅಲಂಕರಿಸುವ ವಿಷಯದಲ್ಲಿ ಫ್ರೀಲ್ಯಾಂಡ್ ತಮ್ಮ ಬೆಂಬಲಿಗರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ ಎಂಬುದು ಸದ್ಯದ ಮಾಹಿತಿ.

Freeland ಪ್ರಧಾನಿಯಾದರೆ ಹಳ್ಳಹಿಡಿಯಲಿದೆ ಅಮೆರಿಕಾ- ಕೆನಡಾ ಸಂಬಂಧ!

ಸಚಿವ ಸ್ಥಾನಕ್ಕೆ Freeland ರಾಜೀನಾಮೆ ನೀಡಿದ ನಂತರ ಪ್ರತಿಕ್ರಿಯೆ ನೀಡಿದ್ದ ಟ್ರಂಪ್ ಫ್ರೀಲ್ಯಾಂಡ್ ಅವರನ್ನು ಅಮೇರಿಕಾ-ಕೆನಡಾ ಸಂಬಂಧಕ್ಕೆ "ಸಂಪೂರ್ಣವಾಗಿ ವಿಷಕಾರಿ" ಎಂದು ಹೇಳಿದ್ದರು. "ಒಪ್ಪಂದಗಳನ್ನು ಮಾಡಲು ಅವರು ಅನುಕೂಲಕರವಾಗಿಲ್ಲ" ಎಂದು ಹೇಳಿದ್ದರು. ಫ್ರೀಲ್ಯಾಂಡ್ ಟ್ರಂಪ್‌ಗೆ ಕಿರಿಕಿರಿಯನ್ನುಂಟುಮಾಡುವ ವ್ಯಕ್ತಿ ಎಂದೇ ಬಿಂಬಿತರಾಗಿದ್ದಾರೆ.

ಉಕ್ರೇನಿಯನ್ ಪರಂಪರೆಯನ್ನು ಹೊಂದಿರುವ ಫ್ರೀಲ್ಯಾಂಡ್, ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಬಲವಾದ ಬೆಂಬಲಿಗರಾಗಿದ್ದರು ಎಂಬುದು ಗಮನಾರ್ಹ

ಮತ್ತೊಂದು ಸಂಭಾವ್ಯ ಅಭ್ಯರ್ಥಿ ಹೊಸ ಹಣಕಾಸು ಮಂತ್ರಿ ಡೊಮಿನಿಕ್ ಲೆಬ್ಲಾಂಕ್. ಮಾಜಿ ಸಾರ್ವಜನಿಕ ಸುರಕ್ಷತಾ ಮಂತ್ರಿ ಮತ್ತು ಟ್ರುಡೊ ಅವರ ಆಪ್ತ ಸ್ನೇಹಿತ, ಲೆಬ್ಲಾಂಕ್ ಇತ್ತೀಚೆಗೆ ಮಾರ್-ಎ-ಲಾಗೊದಲ್ಲಿ ಟ್ರಂಪ್ ಅವರೊಂದಿಗೆ ಔತಣಕೂಟದಲ್ಲಿ ಇವರು ಭಾಗಿಯಾಗಿದ್ದರು. ಟ್ರೂಡೊ ಮಗುವಾಗಿದ್ದಾಗ ಲೆಬ್ಲಾಂಕ್ ಟ್ರುಡೊ ಅವರ ಶಿಶುಪಾಲಕರಾಗಿದ್ದರು. ಇನ್ನು ಈ ಬಾರಿ ಚುನಾವಣೆ ನಡೆದರೆ ಅಧಿಕಾರ ಹಿಡಿಯುವ ಸಾಧ್ಯತೆ ಲಿಬ್ರಲ್ಸ್ ಗಳಿಗಿಂತ ಕನ್ಸರ್ವೆಟೀವ್ಸ್ ಗೆ ಹೆಚ್ಚಿದೆ ಎಂದು ಸ್ಥಳೀಯ ಸಮೀಕ್ಷೆಗಳು ಹೇಳುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com