ಕೆನಡಾ ಪ್ರಧಾನಿ ರೇಸ್ ನಲ್ಲಿ ಕನ್ನಡಿಗ ಚಂದ್ರ ಆರ್ಯ!

ಪ್ರಧಾನಿ ಹುದ್ದೆ ರೇಸ್ ನಲ್ಲಿ ಭಾರತೀಯ ಮೂಲದವರ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಭಾರತೀಯ ಮೂಲದ ಅನಿತಾ ಆನಂದ್ ಅವರ ಹೆಸರು ಕೇಳಿಬಂದಿತ್ತು.
Chandra Arya
ಚಂದ್ರ ಆರ್ಯonline desk
Updated on

ಕೆನಡಾ: ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ? ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಪ್ರಧಾನಿ ಹುದ್ದೆ ರೇಸ್ ನಲ್ಲಿ ಭಾರತೀಯ ಮೂಲದವರ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಭಾರತೀಯ ಮೂಲದ ಅನಿತಾ ಆನಂದ್ ಅವರ ಹೆಸರು ಕೇಳಿಬಂದಿತ್ತು.

ಈಗ ಭಾರತೀಯ ಮೂಲದ ಮತ್ತೋರ್ವ ಸಂಸದನ ಹೆಸರು ಕೇಳಿಬರುತ್ತಿದೆ. ಅದರಲ್ಲೂ ಅವರು ಕರ್ನಾಟಕದ ಮೂಲದವರೆಂಬುದು ಮತ್ತೊಂದು ವಿಶೇಷ. ಅವರ ಹೆಸರು ಚಂದ್ರ ಆರ್ಯ.

ತುಮಕೂರು ಜಿಲ್ಲೆ ಸಿರಾ ತಾಲೂಕಿನ ದ್ವಾರಾಳು ಗ್ರಾಮದ ಮೂಲದವರಾಗಿರುವ ಚಂದ್ರ ಆರ್ಯ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ದೇಶವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡುವ, ನಿವೃತ್ತಿ ವಯಸ್ಸನ್ನು ಹೆಚ್ಚಿಸುವ, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸುವ ಮತ್ತು ಪ್ಯಾಲೆಸ್ಟೈನ್ ರಾಜ್ಯವನ್ನು ಗುರುತಿಸುವ ಭರವಸೆ ನೀಡುವ ಅಭಿಯಾನದೊಂದಿಗೆ ಲಿಬರಲ್ ನಾಯಕತ್ವಕ್ಕಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಕೆನಡಾವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡಲು ತಾನು ಬಯಸುತ್ತೇನೆ ಎಂದು ಆರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ, ಕೆನಡಾದಲ್ಲಿ ರಾಜಪ್ರಭುತ್ವವೇ ರಾಷ್ಟ್ರದ ಮುಖ್ಯಸ್ಥರ ಸ್ಥಾನದಲ್ಲಿದ್ದು ಇದನ್ನು ಬದಲಾಯಿಸುವ ಅಗತ್ಯವಿದೆ.

Chandra Arya
ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಆನಂದ್ ಸೇರಿ ಹಲವರ ಪೈಪೋಟಿ! ಯಾರೀಕೆ? ಇಲ್ಲಿದೆ ಮಾಹಿತಿ

"ಕೆನಡಾ ತನ್ನ ಹಣೆಬರಹವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಮಯ ಇದಾಗಿದೆ" ಎಂದು ಅವರು ಹೇಳಿಕೆಯಲ್ಲಿ ಬರೆದಿದ್ದಾರೆ. "(ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ) ಕೋಟಾಗಳ ಮೇಲೆ ಅಲ್ಲ, ಅರ್ಹತೆಯ ಮೇಲೆ ಆಯ್ಕೆ ಮಾಡಲಾದ ಕ್ಯಾಬಿನೆಟ್‌ನೊಂದಿಗೆ ಸಣ್ಣ, ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ನಾನು ಬಯಸುತ್ತೇನೆ ಎಂದು ಆರ್ಯ ಹೇಳಿದ್ದಾರೆ ಎಂದು ಸಿಬಿಸಿ ವರದಿ ಮಾಡಿದೆ.

2040 ರಲ್ಲಿ ನಿವೃತ್ತಿ ವಯಸ್ಸನ್ನು ಎರಡು ವರ್ಷಗಳವರೆಗೆ ಹೆಚ್ಚಿಸುವುದು, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸುವುದು ಮತ್ತು ಪ್ಯಾಲೆಸ್ಟೈನ್ ಅನ್ನು ಒಂದು ರಾಷ್ಟ್ರವಾಗಿ ಗುರುತಿಸುವುದು ಚಂದ್ರ ಆರ್ಯ ಭರವಸೆಗಳ ಪಟ್ಟಿಯಲ್ಲಿ ಸೇರಿವೆ.

ನಮ್ಮ ರಾಷ್ಟ್ರವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಣ್ಣ, ಹೆಚ್ಚು ಪರಿಣಾಮಕಾರಿ ಸರ್ಕಾರವನ್ನು ಮುನ್ನಡೆಸಲು ಕೆನಡಾದ ಮುಂದಿನ ಪ್ರಧಾನಿಯಾಗಲು ನಾನು ಸ್ಪರ್ಧಿಸುತ್ತಿದ್ದೇನೆ ಎಂದು 2015 ರಲ್ಲಿ ನೇಪಿಯನ್‌ನ ಉಪನಗರ ರೈಡಿಂಗ್‌ನಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಆರ್ಯ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com