
ವಾಷಿಂಗ್ ಟನ್ ಡಿಸಿ: ಡೊನಾಲ್ಡ್ ಟ್ರಂಪ್ (Donald Trump) ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಇನ್ನು ಕೆಲವೇ ದಿನಗಳು ಇದ್ದು, ಅಮೇರಿಕಾ ರಾಜಧಾನಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕಾರ್ಯಕ್ರಮಗಳು, ಸಮಾರಂಭಗಳ ನಡುವೆಯೇ, ವಾಷಿಂಗ್ ಟನ್ ಡಿಸಿಯ ಹಲವು ನಿವಾಸಿಗಳು ನಗರದಿಂದ ಹೊರಹೋಗುತ್ತಿದ್ದಾರೆ. "ಆ ರೀತಿಯ ಪ್ರತಿಕೂಲ ನಕಾರಾತ್ಮಕ ಶಕ್ತಿ"ಯನ್ನು ನಮಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂಬುದು ಇದಕ್ಕೆ ನಿವಾಸಿಗಳು ನೀಡುತ್ತಿರುವ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ ಪದಗ್ರಹಣ ಕಾರ್ಯಕ್ರಮದ ಸಂಭ್ರಮಾಚರಣೆಗಳಿಂದ ದೂರ ಉಳಿಯುವುದಕ್ಕಾಗಿ ಕೆಲವು ನಿವಾಸಿಗಳು ನಿರ್ಧರಿಸಿದ್ದಾರೆ. ಡಿಸಿ ನಿವಾಸಿ ಅಲೆಜಾಂಡ್ರಾ ವಿಟ್ನಿ-ಸ್ಮಿತ್ ಈಗಾಗಲೇ ನಗರವನ್ನು ತೊರೆದು ತಂತ್ರಜ್ಞಾನವಿಲ್ಲದ ಕ್ಯಾಬಿನ್‌ನಲ್ಲಿ ಒಂದು ವಾರ ಕಳೆಯಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ. "ಇದು [ಪದಗ್ರಹಣ ಕಾರ್ಯಕ್ರಮದ ವಾರಾಂತ್ಯ] ನನ್ನ ಹುಟ್ಟುಹಬ್ಬದ ವೀಕ್ ಎಂಡ್ ನಲ್ಲೇ ಬಂದಿದೆ. ನಾನು ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ಡಿಸಿಯಲ್ಲಿ ಕಳೆಯುತ್ತೇನೆ, ಆದರೆ ಚುನಾವಣೆ ನಡೆದಾಗ, 'ಓಹ್, ಇಲ್ಲ, ನಾನು ಇಲ್ಲಿರಲು ಸಾಧ್ಯವಿಲ್ಲ' ಎಂದು ನಾನು ನನಗೆ ನಾನೇ ಹೇಳಿಕೊಂಡೆ" ಎಂದು ಅವರು ಹೇಳಿದ್ದಾರೆ.
ಟ್ರಂಪ್ ಅವರ ಮರುಚುನಾವಣೆಯ ಬಗ್ಗೆ ಮಾತನಾಡುತ್ತಾ, ಅವರು "ಇದು ಜನರು ಒಪ್ಪಿಕೊಳ್ಳಲು ಇಷ್ಟಪಡದ ಅಮೆರಿಕದ ಕೊಳಕು ಭಾಗವನ್ನು ಪ್ರತಿನಿಧಿಸುತ್ತದೆ" ಎಂದು ಹೇಳಿದ್ದಾರೆ.
2020 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಸೋಲಿನ ಎರಡು ತಿಂಗಳ ನಂತರ ಜನವರಿ 6 ರಂದು ಟ್ರಂಪ್ ಬೆಂಬಲಿಗರಿಂದ ಯುಎಸ್ ಕ್ಯಾಪಿಟಲ್ ದಾಳಿಯ ಸಮಯದಲ್ಲಿ ಅವರ ತಾಯಿ ಕಾಂಗ್ರೆಸ್ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಸ್ಮಿತ್ ಅವರಲ್ಲಿ ಮೂಡಿದ ಭಯವನ್ನು ಅವರು ನೆನಪಿಸಿಕೊಂಡರು.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ಏನಾಯಿತು ಎಂಬುದನ್ನು ಅಮೆರಿಕದ ಜನರು ನೋಡಿದ್ದಾರೆ ಮತ್ತು ಅವರು "ಹಿಂದಿನ ಸ್ಥಿತಿಗೆ ಹೋಗುವುದಿಲ್ಲ" ಎಂದು ಅವರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅಮೆರಿಕದ ಜನರು ತಮ್ಮ ಮೊದಲ ಕಪ್ಪು ಮಹಿಳಾ ಅಧ್ಯಕ್ಷರಿಗೆ ಸಿದ್ಧರಿಲ್ಲ ಎಂದು ತನಗೆ ತಿಳಿದಿದೆ ಎಂದು ಹೇಳಿದರು.
"ಆದರೆ ಈ ದೇಶದಲ್ಲಿ ಕಪ್ಪು ಮಹಿಳೆಯಾಗಿ ಬದುಕುವುದರ ವಾಸ್ತವ ನನಗೂ ತಿಳಿದಿದೆ. ಹ್ಯಾರಿಸ್ ಗೆಲ್ಲಬೇಕೆಂದು ನಾನು ಎಷ್ಟು ಬಯಸಿದ್ದೆನೋ, ಅಮೆರಿಕ ತನ್ನ ಮೊದಲ ಕಪ್ಪು ಮಹಿಳಾ ಅಧ್ಯಕ್ಷರಿಗೆ ಸಿದ್ಧವಾಗಿಲ್ಲ ಎಂಬ ವಾಸ್ತವ ನನಗೆ ಅರಿವಾಗಿತ್ತು ಎಂದು ಸ್ಮಿತ್ ಹೇಳಿದ್ದಾರೆ.
ಜನವರಿ 6'ರ ಗಲಭೆ ಮತ್ತು 2020'ರ ಚುನಾವಣೆಯ ನಂತರ ಜೀವ ಪರ ಪ್ರತಿಭಟನಾಕಾರರನ್ನು ಎದುರಿಸಿದ ಘಟನೆಗಳನ್ನು ನೆನಪು ಮಾಡಿಕೊಂಡರೆ "ಉದ್ಘಾಟನಾ ಸಮಾರಂಭದ ಸಮಯದಲ್ಲಿ ನಗರದಲ್ಲಿ ಇರಲು ಬಯಸುವುದಿಲ್ಲ" ಎಂದು ಡಿಸಿ ನಿವಾಸಿ ಟಿಯಾ ಬಟ್ಲರ್ ಹೇಳುತ್ತಾರೆ.
ಮತ್ತೊಂದೆಡೆ, ಅನೇಕ ಸಂಪ್ರದಾಯವಾದಿಗಳು ಮತ್ತು ರಿಪಬ್ಲಿಕನ್ ಬೆಂಬಲಿಗರು ಟ್ರಂಪ್ ಪದಗ್ರಹಣದ ಬಗ್ಗೆ ಉತ್ಸುಕರಾಗಿದ್ದಾರೆ. ಬುಧವಾರದ ವೇಳೆಗೆ, ನಗರದ ಹೋಟೆಲ್‌ಗಳು 70% ಬುಕ್ ಆಗಿದ್ದವೆ ಮತ್ತು ರಾತ್ರಿಗೆ $900 ರಿಂದ $1,500 ವೆಚ್ಚದವರೆಗೆ ಹೊಟೆಲ್ ಗಳನ್ನು ಕಾಯ್ದಿರಿಸಲಾಗುತ್ತಿದೆ.
Advertisement