ಅಮೆರಿಕ ಎದುರಿಸುತ್ತಿರುವ ಪ್ರತಿಯೊಂದು ಬಿಕ್ಕಟ್ಟನ್ನೂ ಸರಿಪಡಿಸಲು ಐತಿಹಾಸಿಕ ವೇಗದಲ್ಲಿ ಕೆಲಸ ಮಾಡುತ್ತೇವೆ: Donald Trump

ಜೊ ಬೈಡನ್ ಆಡಳಿತವು ನಾಲ್ಕು ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನದನ್ನು ನಾವು ಈಗಾಗಲೇ ಸಾಧಿಸಿದ್ದೇವೆ.
Donald Trump
ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಭಾರತೀಯ ಕಾಲಮಾನ ಇಂದು ರಾತ್ರಿ 10.30ಕ್ಕೆ ಅಮೆರಿಕಾದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ತಮ್ಮ ಪದಗ್ರಹಣ ಸಮಾರಂಭದ ಮುನ್ನಾದಿನ, ಟ್ರಂಪ್ ಅವರು ತಮ್ಮ ಬೆಂಬಲಿಗರು ಮತ್ತು ದೇಶವಾಸಿಗಳಿಗೆ ಅಮೆರಿಕ ಎದುರಿಸುತ್ತಿರುವ ಪ್ರತಿಯೊಂದು ಬಿಕ್ಕಟ್ಟನ್ನು ಸರಿಪಡಿಸಲು ಐತಿಹಾಸಿಕ ವೇಗದಲ್ಲಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ನಾಳೆಯಿಂದ ಪ್ರಾರಂಭಿಸಿ, ಐತಿಹಾಸಿಕ ವೇಗ ಮತ್ತು ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತೇನೆ, ನಮ್ಮ ದೇಶ ಎದುರಿಸುತ್ತಿರುವ ಪ್ರತಿಯೊಂದು ಬಿಕ್ಕಟ್ಟನ್ನು ಸರಿಪಡಿಸುತ್ತೇನೆ ಎಂದು ಟ್ರಂಪ್ ಕ್ಯಾಪಿಟಲ್ ಒನ್ ಅರೆನಾದಲ್ಲಿ ತಮ್ಮ ಬೆಂಬಲಿಗರಿಗೆ ಹೇಳಿದರು, ನಿನ್ನೆ ಪ್ರಮಾಣವಚನಕ್ಕೆ ಮುನ್ನ ಏರ್ಪಡಿಸಿದ್ದ "ಮೇಕ್ ಅಮೇರಿಕಾ ಗ್ರೇಟ್" ವಿಜಯೋತ್ಸವ ಕಾರ್ಯಕ್ರಮದಲ್ಲಿ 20,000 ಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಹೇಳಿದರು.

78 ವರ್ಷದ ಟ್ರಂಪ್, ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ ಮೂಲಕ ಅಮೆರಿಕಾ ಅಧ್ಯಕ್ಷರಾಗಿ ಪುನರಾಗಮನ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ಅಂತರದ ನಂತರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಯುಎಸ್ ಇತಿಹಾಸದಲ್ಲಿ ಎರಡನೇ ವ್ಯಕ್ತಿಯಾಗಿದ್ದಾರೆ.

ಇಂದು ಅಮೆರಿಕದ 47 ನೇ ಅಧ್ಯಕ್ಷರಾಗಿ ಜೊ ಬೈಡನ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿರುವ ಟ್ರಂಪ್ ಮೊನ್ನೆ ಶನಿವಾರ ಯುಎಸ್ ಕ್ಯಾಪಿಟಲ್‌ಗೆ ಆಗಮಿಸಿದರು. ಕಾರ್ಯನಿರತರಿಂದ ತುಂಬಿದ'ವಿಜಯ ರ್ಯಾಲಿ' ಎಂದು ಕರೆದ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

ಅಧಿಕಾರ ವಹಿಸಿಕೊಳ್ಳುವ ಮೊದಲೇ, ಯಾರೂ ನಿರೀಕ್ಷಿಸದ ಫಲಿತಾಂಶಗಳನ್ನು ನೀವು ಈಗಾಗಲೇ ನೋಡುತ್ತಿದ್ದೀರಿ. ಎಲ್ಲರೂ ಇದನ್ನು ಟ್ರಂಪ್ ಪರಿಣಾಮ ಎಂದು ಕರೆಯುತ್ತಿದ್ದಾರೆ. ಆದರೆ ನನ್ನ ಗೆಲುವಿಗೆ ಕಾರಣಕರ್ತರು ನೀವು ಎಂದರು.

Donald Trump
ಅಂದು-ಇಂದು: ಶ್ವೇತಭವನಕ್ಕೆ Donald Trump ಮರಳುತ್ತಿದ್ದಂತೆ ಏನು ಬದಲಾಗಿದೆ?

ಚುನಾವಣೆಯ ನಂತರ, ಷೇರು ಮಾರುಕಟ್ಟೆ ಏರಿದೆ, ಆದರೆ ಸಣ್ಣ ವ್ಯವಹಾರಗಳ ಆಶಾವಾದವು ದಾಖಲೆಯ 41 ಪಾಯಿಂಟ್‌ಗಳ ಏರಿಕೆಯಾಗಿ 39 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಬಿಟ್‌ಕಾಯಿನ್ ಒಂದರ ನಂತರ ಒಂದರಂತೆ ದಾಖಲೆಗಳನ್ನು ಮುರಿದಿದೆ. ಪ್ರಮುಖ ಹೂಡಿಕೆ ಕಂಪನಿ ಡಿಎಂಎಸಿಸಿ ಪ್ರಾಪರ್ಟೀಸ್ ಯುಎಸ್‌ನಲ್ಲಿ 20 ಬಿಲಿಯನ್ ಮತ್ತು 40 ಬಿಲಿಯನ್ ಯುಎಸ್ ಡಾಲರ್‌ಗಳ ನಡುವೆ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಮತ್ತೊಂದು ದೊಡ್ಡ ಕಂಪನಿಯಾದ ಸಾಫ್ಟ್‌ಬ್ಯಾಂಕ್ 100 ಬಿಲಿಯನ್ ಮತ್ತು 200 ಬಿಲಿಯನ್ ಯುಎಸ್ ಡಾಲರ್‌ಗಳ ನಡುವೆ ವಾಗ್ದಾನ ಮಾಡಿದೆ. ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂಬ ಕಾರಣಕ್ಕಾಗಿ ಮಾಡಲಾಗುತ್ತಿರುವ ಹೂಡಿಕೆಗಳಿವು ಎಂದು ಹೇಳಿದರು.

ಭಾನುವಾರ ಆಪಲ್ ಸಿಇಒ ಟಿಮ್ ಕುಕ್ ಅವರನ್ನು ಭೇಟಿ ಮಾಡಿದ್ದನ್ನು ಉಲ್ಲೇಖಿಸಿದ ಟ್ರಂಪ್, ನಮ್ಮ ದೊಡ್ಡ ಚುನಾವಣಾ ಗೆಲುವಿನಿಂದಾಗಿ ಅವರು ಅಮೆರಿಕದಲ್ಲಿ ಭಾರಿ ಹೂಡಿಕೆ ಮಾಡಲಿದ್ದಾರೆ ಎಂದು ಹೇಳಿದರು.

Donald Trump
Donald Trump: ಅಮೆರಿಕಾದ 47ನೇ ಅಧ್ಯಕ್ಷರಾಗಿ ಇಂದು ಪ್ರಮಾಣ ವಚನ; ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗಿ

ಜೊ ಬೈಡನ್ ಆಡಳಿತವು ನಾಲ್ಕು ವರ್ಷಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನದನ್ನು ನಾವು ಈಗಾಗಲೇ ಸಾಧಿಸಿದ್ದೇವೆ. ನಾವು ಶ್ವೇತಭವನದಲ್ಲಿ ಇನ್ನೂ ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಸಾಧಿಸುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಊಹಿಸಿ ನೋಡಿ. ನಾವು ಬಹಳಷ್ಟು ಕೆಲಸಗಳನ್ನು ಮಾಡಲಿದ್ದೇವೆ. ನಾವು ನಮ್ಮ ದೇಶವನ್ನು ಸರಿಯಾದ ಹಾದಿಯಲ್ಲಿ ಹೊಂದಿಸಬೇಕು. ನಾಳೆ ಸೂರ್ಯ ಮುಳುಗುವ ಹೊತ್ತಿಗೆ, ನಮ್ಮ ಗಡಿಗಳ ಮೇಲಿನ ಆಕ್ರಮಣವು ನಿಲ್ಲುತ್ತದೆ. ಎಲ್ಲಾ ಅಕ್ರಮ ಗಡಿ ಅತಿಕ್ರಮಣಕಾರರು, ಒಂದಲ್ಲ ಒಂದು ರೂಪದಲ್ಲಿ, ಮನೆಗೆ ಹಿಂತಿರುಗುತ್ತಾರೆ. ಯೋಚಿಸಿ, ಲಕ್ಷಾಂತರ ಜನರು ತೆರೆದ ಗಡಿಗಳ ಮೂಲಕ ನಮ್ಮ ದೇಶಕ್ಕೆ ಬಂದರು. ಯಾವುದೇ ತಪಾಸಣೆ ಇಲ್ಲ, ಪರಿಶೀಲನೆ ಇಲ್ಲ, ಏನೂ ಇಲ್ಲ. ಮತ್ತು ಆ ಜನರಲ್ಲಿ ಅನೇಕರು ಕೊಲೆಗಾರರಾಗಿದ್ದಾರೆ ಎಂದು ಬೈಡನ್ ಸರ್ಕಾರದ ಆಡಳಿತವನ್ನು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com