Turkey Ski Hotel fire: 66 ಪ್ರವಾಸಿಗರು ಮಲಗಿದ್ದಲ್ಲೇ ಸುಟ್ಟು ಕರಕಲು; 51 ಮಂದಿಗೆ ಗಂಭೀರ ಗಾಯ; ಸಾವನ್ನು ಗೆದ್ದು ಬಂದವರು ಹೇಳಿದ್ದೇನು? Video

ಪರ್ವತದ ತುದಿಯ ರೆಸಾರ್ಟ್‌ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ.
Turkey Ski Hotel Fire
ಟರ್ಕಿಯ ಸ್ಕೀ ಹೋಟೆಲ್‌ನಲ್ಲಿ ಅಗ್ನಿ ದುರಂತAssociated Press
Updated on

ಟರ್ಕಿಯ ರೆಸಾರ್ಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯಲ್ಲಿ ಕನಿಷ್ಠ 66 ಜನರು ಸಜೀವ ದಹನವಾಗಿದ್ದು 51ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಇನ್ನು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿಗೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ.

ಮಂಗಳವಾರ ಬೆಳಿಗ್ಗೆ ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 66 ಜನರು ಸಾವನ್ನಪ್ಪಿದ್ದು 51 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳೀಯ ಸಮಯ ಬೆಳಗಿನ ಜಾವ 3:27ಕ್ಕೆ ಕಾರ್ತಲ್ಕಾಯಾದ ಪರ್ವತದ ತುದಿಯ ರೆಸಾರ್ಟ್‌ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ.

ಕಟ್ಟಡದಿಂದ ಹಾರಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಮಾಧ್ಯಮಗಳು ಸಹ ಅತಿಥಿಗಳು ಹಾಸಿಗೆ ಮತ್ತು ಕಂಬಳಿಗಳನ್ನು ಬಳಸಿ ತಮ್ಮ ಕೋಣೆಗಳಿಂದ ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ಮಾಡಿದೆ. ವೈರಲ್ ದೃಶ್ಯಗಳಲ್ಲಿ ಹೋಟೆಲ್‌ನ ಮೇಲ್ಛಾವಣಿ ಮತ್ತು ಮೇಲಿನ ಮಹಡಿಗಳು ಬೆಂಕಿಯಿಂದ ಹೊತ್ತಿಕೊಂಡಿರುವುದನ್ನು ಕಾಣಬಹುದಾಗಿದೆ.

ಶಾಲಾ ರಜಾದಿನಗಳ ಕಾರಣ ಹೋಟೆಲ್ ಶೇಖಡ 80-90ರಷ್ಟು ತುಂಬಿತ್ತು. 230ಕ್ಕೂ ಹೆಚ್ಚು ಅತಿಥಿಗಳು ಚೆಕ್ ಇನ್ ಆಗಿದ್ದರು. ಹೋಟೆಲ್‌ನಲ್ಲಿ ಸ್ಕೀ ಸಿಬ್ಬಂದಿ ನೆಕ್ಮಿ ಕೆಪ್ಸೆಟ್ಟುಟನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಟ್ಟಡದಿಂದ ಸುಮಾರು 20 ಜನರನ್ನು ಸ್ಥಳಾಂತರಿಸಲು ಸಹಾಯ ಮಾಡಿದ್ದೇನೆ. ಆದರೆ ಹೊಗೆಯಿಂದಾಗಿ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಂಡುಹಿಡಿಯುವುದು ಕಷ್ಟಕರವಾಗಿತ್ತು ಎಂದು ಅವರು ಹೇಳಿದರು. ಮತ್ತೊಂದೆಡೆ ಪ್ರವಾಸಿಗರೊಬ್ಬರು ಬೆಂಕಿಯ ಜೊತೆಗೆ ದಟ್ಟ ಹೊಗೆ ಆವರಿಸಿಕೊಂಡಿತ್ತು. ಮೊದಲ ಮಹಡಿಯಲ್ಲಿದ್ದರಿಂದ ನಾವು ಹೊರಗೆ ಬರಲು ಸಾಧ್ಯವಾಯಿತು ಎಂದರು.

Turkey Ski Hotel Fire
ಮೋದಿ ಹೊಗಳಿದ್ದಕ್ಕೆ ಇಬ್ಬರು Youtubers ಗೆ ಗಲ್ಲು? 12 ಯೂಟ್ಯೂಬರ್‌ಗಳ ನಾಪತ್ತೆ ಹಿಂದೆ ಇದೀಯಾ ಪಾಕ್ ಸೇನೆ ಕೈವಾಡ?

ಮರದ ಚಾಲೆಟ್ ಶೈಲಿಯ ಹೊದಿಕೆಯನ್ನು ಹೊಂದಿರುವ 161 ಕೋಣೆಗಳ ಹೋಟೆಲ್‌ನ ವಿನ್ಯಾಸವು ಬೆಂಕಿ ಬೇಗನೆ ಹರಡಲು ಕಾರಣ ಎಂದು ನಂಬಲಾಗಿದೆ. 30 ಅಗ್ನಿಶಾಮಕ ವಾಹನಗಳು ಮತ್ತು 28 ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ನಿಯಂತ್ರಿಸುವ ಅಗ್ನಿಶಾಮಕ ದಳದವರ ಪ್ರಯತ್ನಗಳಿಗೆ ಅಡ್ಡಿಯಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹತ್ತಿರದ ಇತರ ಹೋಟೆಲ್‌ಗಳನ್ನು ಸ್ಥಳಾಂತರಿಸಲಾಯಿತು ಮತ್ತು ಅತಿಥಿಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com