
ಇಸ್ರೇಲ್: ಉತ್ತರ ಗಾಜಾ ಪಟ್ಟಿಯಲ್ಲಿ ನಡೆದ ದಾಳಿಯಲ್ಲಿ ಐವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ಮಂಗಳವಾರ ತಿಳಿಸಿದೆ. ಇತ್ತ ಪ್ಯಾಲೆಸ್ಟೀನಿಯನ್ ಪ್ರದೇಶದ ಆರೋಗ್ಯ ಅಧಿಕಾರಿಗಳು ಇಸ್ರೇಲ್ ದಾಳಿಯಲ್ಲಿ 51 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾ ಹೋರಾಟವನ್ನು ನಿಲ್ಲಿಸಲು ಕದನ ವಿರಾಮ ಯೋಜನೆಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ಶ್ವೇತಭವನಕ್ಕೆ ಭೇಟಿ ನೀಡುತ್ತಿದ್ದಾಗ ಈ ರಕ್ತಪಾತ ಸಂಭವಿಸಿದೆ.
ಯಾವುದೇ ಪ್ರಗತಿಯ ಘೋಷಣೆ ಮಾಡದಿದ್ದರೂ, ಒಪ್ಪಂದದತ್ತ ಪ್ರಗತಿಯ ಲಕ್ಷಣಗಳು ಕಂಡುಬಂದಿವೆ.
ಇಸ್ರೇಲ್‌ನಲ್ಲಿ ನಡೆದ ಸಮೀಕ್ಷೆಗಳಲ್ಲಿ 21 ತಿಂಗಳ ಯುದ್ಧವನ್ನು ಕೊನೆಗೊಳಿಸಲು ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಇತ್ತೀಚಿನ ಸೈನಿಕರ ಸಾವುಗಳು ನೆತನ್ಯಾಹು ಒಪ್ಪಂದ ಮಾಡಿಕೊಳ್ಳುವಂತೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ.
Advertisement