ಇಂತಹ ಬೇಕಾದಷ್ಟು ಬೆದರಿಕೆಗಳನ್ನು ನೋಡಿದ್ದೇವೆ, ಇದ್ಯಾವ ಲೆಕ್ಕ?: ಟ್ರಂಪ್ ಸುಂಕ ಬೆದರಿಕೆಗೆ ರಷ್ಯಾ ವಿದೇಶಾಂಗ ಸಚಿವ ಪ್ರತಿಕ್ರಿಯೆ

SCO ವಿದೇಶಾಂಗ ಸಚಿವರ ಮಂಡಳಿಯ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲಾವ್ರೊವ್, ರಷ್ಯಾ ಈಗಾಗಲೇ ಅಭೂತಪೂರ್ವ ಸಂಖ್ಯೆಯ ನಿರ್ಬಂಧಗಳಿಗೆ ಒಳಗಾಗಿದೆ ಎಂದು ಹೇಳಿದ್ದಾರೆ
Russian Foreign Minister Sergei Lavrov
online desk
Updated on

ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರರ ಮೇಲೆ ಶೇ.100 ರಷ್ಟು ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ಚುವರಿ ನಿರ್ಬಂಧಗಳನ್ನು ತಡೆದುಕೊಳ್ಳಲು ಮಾಸ್ಕೋ ಸುಸಜ್ಜಿತವಾಗಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಶಾಂಘೈ ಸಹಕಾರ ಸಂಸ್ಥೆಯ (SCO) ವಿದೇಶಾಂಗ ಸಚಿವರ ಮಂಡಳಿಯ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲಾವ್ರೊವ್, ರಷ್ಯಾ ಈಗಾಗಲೇ ಅಭೂತಪೂರ್ವ ಸಂಖ್ಯೆಯ ನಿರ್ಬಂಧಗಳಿಗೆ ಒಳಗಾಗಿದೆ ಎಂದು ಒತ್ತಿ ಹೇಳಿದರು ಮತ್ತು ಯಾವುದೇ ಹೊಸ ಹೊರೆಗಳನ್ನು ನಿಭಾಯಿಸುವ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

" ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ನಮ್ಮ ವಿರುದ್ಧ ಈಗಾಗಲೇ ನಿರ್ಬಂಧಗಳನ್ನು ಘೋಷಿಸಲಾಗಿದೆ". ನಾವು ನಿಭಾಯಿಸುತ್ತಿದ್ದೇವೆ; ನಾವು ಸಂಭವನೀಯ ಯುಎಸ್ ನಿರ್ಬಂಧಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂಬುದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ" ಎಂದು ಅವರು ಹೇಳಿದರು.

ರಷ್ಯಾದ ಈ ತೀರ್ಮಾನ ವಿಶೇಷವಾಗಿ ಅನೇಕ ಸ್ವತಂತ್ರ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರು ಮತ್ತು ರಾಜಕಾರಣಿಗಳ ಮೌಲ್ಯಮಾಪನ ಮತ್ತು ವಿಶ್ಲೇಷಣೆಯನ್ನು ಆಧರಿಸಿದೆ ಎಂದು ಅವರು ಹೇಳಿದ್ದಾರೆ.

50 ದಿನಗಳಲ್ಲಿ ಉಕ್ರೇನ್‌ ವಿಷಯವಾಗಿ ಇತ್ಯರ್ಥದ ಕುರಿತು ರಷ್ಯಾ ಯುಎಸ್‌ನೊಂದಿಗೆ ಒಪ್ಪಂದಕ್ಕೆ ಬರಲು ವಿಫಲವಾದರೆ ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರರ ಮೇಲೆ ಸುಮಾರು ಶೇ.100 ರಷ್ಟು ಆಮದು ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಉಕ್ರೇನ್ ಕುರಿತು ಇತ್ಯರ್ಥಕ್ಕೆ ಬರಲು ಟ್ರಂಪ್ 50 ದಿನಗಳನ್ನು ನಿಗದಿಪಡಿಸುವ ಮೂಲಕ ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ರಷ್ಯಾ ಬಯಸುತ್ತದೆ ಎಂದು ಲಾವ್ರೊವ್ ಹೇಳಿರುವುದನ್ನು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.

"ಈ ಹೇಳಿಕೆಯ ಹಿಂದಿನ ಉದ್ದೇಶವನ್ನು ಸುಮಾರು 50 ದಿನಗಳ ನಂತರ ನಾವು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಇದಕ್ಕೂ ಮೊದಲು, 24 ಗಂಟೆಗಳು ಮತ್ತು 100 ದಿನಗಳ ಗಡುವುಗಳು ಸಹ ಇದ್ದವು; ನಾವು ಎಲ್ಲವನ್ನೂ ನೋಡಿದ್ದೇವೆ ಮತ್ತು ಅಮೆರಿಕದ ಅಧ್ಯಕ್ಷರ ಪ್ರೇರಣೆಯನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಬಯಸುತ್ತೇವೆ" ಎಂದು ಅವರು ಹೇಳಿದರು.

Russian Foreign Minister Sergei Lavrov
Watch | ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ; ಜೈಶಂಕರ್ ಹೇಳಿದ್ದೇನು?

ಪರಮಾಣು ಶಕ್ತಿಯ ಶಾಂತಿಯುತ ಬಳಕೆಗೆ ಇರಾನ್‌ನ ಕಾನೂನುಬದ್ಧ ಹಕ್ಕಿಗೆ SCO ದೇಶಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ ಎಂದು ಲಾವ್ರೊವ್ ಇದೇ ವೇಳೆ ಹೇಳಿದರು.

SCO ಚೀನಾ, ರಷ್ಯಾ, ಭಾರತ, ಇರಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಬೆಲಾರಸ್ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಚೀನಾ ಪ್ರಸ್ತುತ SCO ಅಧ್ಯಕ್ಷತೆಯನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com