
ಬುಧವಾರ ತಡರಾತ್ರಿ ಇರಾಕ್‌ನ ವಾಸಿಟ್‌ನ ಅಲ್-ಕುಟ್ ನಗರದ ಶಾ ಮಾಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಕನಿಷ್ಠ 69 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಮಾಲ್ ಹೊತ್ತಿಹುರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೃಹತ್ ಕಟ್ಟಡದಲ್ಲಿ ಬೆಂಕಿಯಲ್ಲಿ ಆವರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹಲವಾರು ಗಂಟೆಗಳನ್ನು ತೆಗೆದುಕೊಂಡರು ಎಂದು ಸ್ಥಳೀಯರು ಹೇಳಿದ್ದಾರೆ.
ನಾವು ಇಲ್ಲಿಯವರೆಗೆ 68 ಶವಗಳನ್ನು ಗುರುತಿಸಿದ್ದೇವೆ. ಆದರೆ ಒಂದು ಶವ ತುಂಬಾ ಕೆಟ್ಟದಾಗಿ ಸುಟ್ಟುಹೋಗಿದ್ದು ಅದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಶವಗಳನ್ನು ಇನ್ನೂ ಹೊರತೆಗೆಯಲಾಗುತ್ತಿದೆ. ಆದರೆ ಅಗ್ನಿ ಅವಘಡಕ್ಕೆ ಕಾರಣ ತಿಳಿದಿಲ್ಲ. ವಾಸಿತ್ ಪ್ರಾಂತ್ಯದ ಗವರ್ನರ್ ಮೊಹಮ್ಮದ್ ಅಲ್-ಮಿಯಾಹಿ ಅವರು ಕಟ್ಟಡ ಮತ್ತು ಮಾಲ್‌ನ ಮಾಲೀಕರ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ. ಕಟ್ಟಡದ ಭದ್ರತಾ ವ್ಯವಸ್ಥೆ ಮತ್ತು ಅಗ್ನಿಶಾಮಕ ಸುರಕ್ಷತಾ ಸಾಧನಗಳನ್ನು ಸಹ ತನಿಖೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.
ಈ ಅಪಘಾತಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಕಾರಣರಾದ ಯಾರಿಗೂ ಯಾವುದೇ ದಯೆ ತೋರಿಸಲ್ಲ ಎಂದು ನಾವು ಅಮಾಯಕ ಬಲಿಪಶುಗಳ ಕುಟುಂಬಗಳಿಗೆ ಭರವಸೆ ನೀಡಲು ಬಯಸುತ್ತೇವೆ ಎಂದು ಗವರ್ನರ್ ಮೊಹಮ್ಮದ್ ಅಲ್-ಮಾಯೆಹ್ ಹೇಳಿದರು. ಇರಾಕ್‌ನಲ್ಲಿ ಕಟ್ಟಡ ನಿರ್ಮಾಣ ಗುಣಮಟ್ಟ ಉತ್ತಮವಾಗಿಲ್ಲದ ಕಾರಣ ಹಿಂದೆಯೂ ಇಂತಹ ದುರಂತ ಘಟನೆಗಳು ಸಂಭವಿಸಿವೆ. ಜುಲೈ 2021ರಲ್ಲಿ ನಸಿರಿಯಾ ನಗರದ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 60 ರಿಂದ 92 ಜನರು ಸಾವನ್ನಪ್ಪಿದರು.
Advertisement