
ಟ್ರಾವರ್ಸ್ ಸಿಟಿ: ಅಮೆರಿಕಾದ ಮಿಚಿಗನ್ ರಾಜ್ಯದ ಟ್ರಾವರ್ಸ್ ಸಿಟಿಯ ವಾಲ್ಮಾರ್ಟ್ ಮಾಲ್ ನ ಹೊರಗೆ ಇರಿತ ಪ್ರಕರಣದಲ್ಲಿ ಕನಿಷ್ಠ 11 ಜನರಿಗೆ ಗಾಯಗಳಾಗಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ.
ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಶೆರಿಫ್ ಮೈಕೆಲ್ ಶಿಯಾ ವರದಿಗಾರರಿಗೆ ತಿಳಿಸಿದರು. ಘಟನೆಯ ನಂತರ ಅಂಗಡಿಯ ಹೊರಗೆ ತುರ್ತು ವಾಹನಗಳು ಮತ್ತು ಸಮವಸ್ತ್ರ ಧರಿಸಿದ ವ್ಯಕ್ತಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯ ನೀಡುವುದು ಕಂಡುಬಂತು.
ಟ್ರಾವರ್ಸ್ ಸಿಟಿಯಿಂದ ಸುಮಾರು 25 ಮೈಲುಗಳಷ್ಟು ದೂರದಲ್ಲಿರುವ ಹಾನರ್‌ನಲ್ಲಿ ವಾಸಿಸುವ 36 ವರ್ಷದ ಟಿಫಾನಿ ಡಿಫೆಲ್, ತನ್ನ ಸುತ್ತಲೂ ಅವ್ಯವಸ್ಥೆ ಭುಗಿಲೆದ್ದಿರುವುದನ್ನು ನೋಡಿದಾಗ ತಾನು ಪಾರ್ಕಿಂಗ್ ಸ್ಥಳದಲ್ಲಿದ್ದೆ ಎಂದು ಹೇಳುತ್ತಾರೆ.
ಆ ದೃಶ್ಯ ನಿಜವಾಗಿಯೂ ಭಯಾನಕವಾಗಿತ್ತು. ನಾನು ಮತ್ತು ನನ್ನ ಸಹೋದರಿ ಭಯಭೀತರಾಗಿದ್ದೆವು ಎಂದು ಅವರು ಹೇಳಿದರು.
ಉತ್ತರ ಮಿಚಿಗನ್‌ನಲ್ಲಿರುವ ಪ್ರದೇಶದ ಅತಿದೊಡ್ಡ ಆಸ್ಪತ್ರೆಯಲ್ಲಿ 11 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುನ್ಸನ್ ಹೆಲ್ತ್‌ಕೇರ್ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದೆ. ವಕ್ತಾರೆ ಮೇಗನ್ ಬ್ರೌನ್ ಅವರೆಲ್ಲರೂ ಇರಿತಕ್ಕೆ ಒಳಗಾದ ಬಲಿಪಶುಗಳೆಂದು ಹೇಳಿದ್ದಾರೆ.
ತನಿಖೆಯಲ್ಲಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮುಂದುವರಿಸುವುದಾಗಿ ವಾಲ್ಮಾರ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ಟ್ರಾವರ್ಸ್ ಸಿಟಿ ಮಿಚಿಗನ್ ಸರೋವರದ ಕರಾವಳಿಯಲ್ಲಿ ಜನಪ್ರಿಯ ರಜಾ ತಾಣವಾಗಿದೆ. ಇದು ಚೆರ್ರಿ ಉತ್ಸವ, ವೈನರಿಗಳು ಮತ್ತು ಲೈಟ್‌ಹೌಸ್‌ಗಳಿಗೆ ಹೆಸರುವಾಸಿಯಾಗಿದೆ ಮತ್ತು ಸ್ಲೀಪಿಂಗ್ ಬೇರ್ ಡ್ಯೂನ್ಸ್ ನ್ಯಾಷನಲ್ ಲೇಕ್‌ಶೋರ್‌ನಿಂದ ಪೂರ್ವಕ್ಕೆ ಸುಮಾರು 25 ಮೈಲಿ (40 ಕಿಲೋಮೀಟರ್) ದೂರದಲ್ಲಿದೆ.
Advertisement