ಪ್ರತಿಭಟನೆ ನಿಗ್ರಹ ವೇಳೆ 1400 ಜನರ ನರಮೇಧ: ಬಾಂಗ್ಲಾ ಮಾಜಿ ಪ್ರಧಾನಿ ವಿರುದ್ಧ ವಿಚಾರಣೆ ಶುರು; ಮರಣದಂಡನೆ ಸಾಧ್ಯತೆ!

ಶೇಖ್ ಹಸೀನಾ 15 ವರ್ಷಗಳ ಕಾಲ ಪ್ರಧಾನಿಯಾಗಿ ಅಧಿಕಾರ ನಡೆಸಿದ ನಂತರ ಆಗಸ್ಟ್‌ನಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.
Sheikh Hasina
ಶೇಖ್ ಹಸೀನಾ
Updated on

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಬಾಂಗ್ಲಾದೇಶದ ನ್ಯಾಯಮಂಡಳಿ ಇಂದು ದೊಡ್ಡ ನಿರ್ಧಾರ ಪ್ರಕಟಿಸುವ ಸಾಧ್ಯತೆ. ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (IST-BD) ಇಂದು ಶೇಖ್ ಹಸೀನಾ ವಿರುದ್ಧದ ಆರೋಪಗಳನ್ನು ವಿಚಾರಣೆ ನಡೆಸುತ್ತಿರುವುದರಿಂದ ನ್ಯಾಯಮಂಡಳಿ ಶೇಖ್ ಹಸೀನಾಗೆ ಮರಣದಂಡನೆ ವಿಧಿಸಬಹುದು ಎಂದು ಹೇಳಲಾಗುತ್ತಿದೆ.

2024ರ ವಿದ್ಯಾರ್ಥಿ ನೇತೃತ್ವದ ಚಳವಳಿಯ ಸಮಯದಲ್ಲಿ ನಡೆದ ಹಿಂಸಾತ್ಮಕ ದಮನಕ್ಕೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಾಸಿಕ್ಯೂಟರ್‌ಗಳು ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇಬ್ಬರು ಹಿರಿಯ ಅಧಿಕಾರಿಗಳ ಮೇಲೆ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪ ಹೊರಿಸಿದ್ದಾರೆ. ತನಿಖಾ ವರದಿಯ ಪ್ರಕಾರ ಶೇಖ್ ಹಸೀನಾ ಅವರು ರಾಜ್ಯ ಭದ್ರತಾ ಪಡೆಗಳು, ಅವರ ರಾಜಕೀಯ ಪಕ್ಷ ಮತ್ತು ಸಂಬಂಧಿತ ಗುಂಪುಗಳ ಮೇಲೆ ಬಹಳಷ್ಟು ನಾಗರಿಕರನ್ನು ಕೊಲ್ಲಲು ಕ್ರಮಗಳನ್ನು ಕೈಗೊಳ್ಳಲು ನೇರವಾಗಿ ಆದೇಶಿಸಿದ್ದಾರೆ.

ಭಾನುವಾರ ನಡೆದ ವಿಚಾರಣೆಯಲ್ಲಿ ಮುಖ್ಯ ಪ್ರಾಸಿಕ್ಯೂಟರ್ ತಾಜುಲ್ ಇಸ್ಲಾಂ, ಈ ಹತ್ಯೆಗಳನ್ನು ಯೋಜಿಸಲಾಗಿತ್ತು ಎಂದು ಹೇಳಿದರು. ಇದಕ್ಕಾಗಿ ವಿವಿಧ ಏಜೆನ್ಸಿಗಳ ನಡುವಿನ ವೀಡಿಯೊ ಪುರಾವೆಗಳು ಮತ್ತು ರಹಸ್ಯ ಸಂದೇಶಗಳನ್ನು ಉಲ್ಲೇಖಿಸಿದರು. ಪ್ರಕರಣದಲ್ಲಿ 81 ಜನರನ್ನು ಸಾಕ್ಷಿಗಳಾಗಿ ಹೆಸರಿಸಲಾಗಿದೆ ಎಂದು ಇಸ್ಲಾಂ ಹೇಳಿದರು. ಅಶಾಂತಿಯ ಸಮಯದಲ್ಲಿ ಭದ್ರತಾ ಪಡೆಗಳ ಕ್ರಮಗಳಿಗೆ ಸರ್ಕಾರದ ಮುಖ್ಯಸ್ಥರಾಗಿ ಶೇಖ್ ಹಸೀನಾ ಅವರ ಮೇಲೆ ಆದೇಶದ ಜವಾಬ್ದಾರಿ ಇದೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

Sheikh Hasina
Sheikh Hasina ಅವಾಮಿ ಲೀಗ್ ಪಕ್ಷ ನಿಷೇಧಿಸಿದ ಬಾಂಗ್ಲಾದೇಶದ Yunus ಸರ್ಕಾರ!

ಶೇಖ್ ಹಸೀನಾ 15 ವರ್ಷಗಳ ಕಾಲ ಪ್ರಧಾನಿಯಾಗಿ ಅಧಿಕಾರ ನಡೆಸಿದ ನಂತರ ಆಗಸ್ಟ್‌ನಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ತಮ್ಮ ರಾಜೀನಾಮೆಗೆ ಒತ್ತಾಯಿಸಿ ವಾರಗಟ್ಟಲೆ ಬೀದಿಗಿಳಿದ ಲಕ್ಷಾಂತರ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಬಾಂಗ್ಲಾದೇಶದಿಂದ ನವದೆಹಲಿಗೆ ಪಲಾಯನ ಮಾಡಿದರು. ಅವರ ಮತ್ತು ಅವರ ಕುಟುಂಬದ ಕೆಲವು ಸದಸ್ಯರ ಮೇಲೂ ಭ್ರಷ್ಟಾಚಾರದ ಆರೋಪವಿದೆ. ಈ ಹಿಂಸಾತ್ಮಕ ಕ್ರಮಗಳಲ್ಲಿ ಸುಮಾರು 1,400 ಜನರು ಸಾವನ್ನಪ್ಪಿದ್ದಾರೆ ಮತ್ತು 25,000 ಜನರು ಗಾಯಗೊಂಡಿದ್ದಾರೆ ಎಂದು ಇಸ್ಲಾಂ ಕಳೆದ ತಿಂಗಳು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com