
ಲಾಸ್ ಏಂಜಲೀಸ್: ಆಕ್ಷನ್ ಲೆಜೆಂಡ್ ಜಾಕಿ ಚಾನ್ ಅವರ ಕರಾಟೆ ಕಿಡ್: ಲೆಜೆಂಡ್ಸ್ ಮೇ 30 ರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಜೋನಾಥನ್ ಎಂಟ್ವಿಸ್ಟಲ್ ನಿರ್ದೇಶನದ ಚಿತ್ರದಲ್ಲಿ ರಾಲ್ಫ್ ಮ್ಯಾಕಿಯೊ ಮತ್ತು ಬೆನ್ ವಾಂಗ್ ಜೊತೆಗೆ ಜಾಕಿ ಚಾನ್ ನಟಿಸಿದ್ದಾರೆ.
ದಿ ಕರಾಟೆ ಕಿಡ್‌ನ 2010 ಚಿತ್ರದ ಪಾತ್ರದಂತೆ ಈ ಚಿತ್ರದಲ್ಲೂ ಅವರು ನಟಿಸಿದ್ದಾರೆ. ತಮ್ಮ ಹೊಸ ಚಿತ್ರದ ಕುರಿತು ಲಾಸ್ ಏಂಜಲೀಸ್ ನಲ್ಲಿ ಮಾತನಾಡಿದ ಜಾಕಿಜಾನ್, 64 ವರ್ಷಗಳಿಂದ ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡುತ್ತಿದ್ದು, ಯಾವುದೇ ತರಬೇತಿಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ವೃತ್ತಿಜೀವನದುದ್ದಕ್ಕೂ ತನ್ನದೇ ಆದ ಸಾಹಸ ಪ್ರದರ್ಶಿಸುವಲ್ಲಿ ಹೆಸರುವಾಸಿಯಾದ ಜಾಕಿಜಾನ್, ಪೈಟಿಂಗ್ ನನ್ನ ಎರಡನೇ ಸ್ವಭಾವವಾಗಿದೆ. 64 ವರ್ಷಗಳಿಂದ ಪ್ರತಿದಿನ ತರಬೇತಿ ನೀಡುತ್ತಿದ್ದು, ಇನ್ನು ಮುಂದೆ ಅದರ ಅಗತ್ಯವಿಲ್ಲ. ಆದರೂ ಈಗಲೂ ನಾನು ನಾನು ಪೈಟ್ ಮಾಡುತ್ತೇದ್ದೇನೆ ಎಂದು 71 ವರ್ಷ ವರ್ಷದ ನಟ ಎಂಟರ್ಟೈನ್ಮೆಂಟ್ ಔಟ್ಲೆಟ್ ವೆರೈಟಿಗೆ ತಿಳಿಸಿದರು.
ಯೌವ್ವನದಲ್ಲಿದ್ದಾಗೆ ದೈಹಿಕ ಆಕಾರದಲ್ಲಿ ಇಲ್ಲದಿದ್ದರೂ, ಇನ್ನೂ ತನ್ನದೇ ಆದ ಸಾಹಸಗಳನ್ನು ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡರು. "ನಾನು 20 ವರ್ಷದವನಿದ್ದಾಗ ಮಾಡುತ್ತಿದ್ದ ಹಾಗೆ ಈಗ ಮಾಡಲು ಸಾಧ್ಯವಿಲ್ಲ. ಈಗಲೂ ಕೂಡಾ ನಾನು ಹೊಡೆಯಬಹುದು ಎಂದು ನಗುತ್ತಾ ಹೇಳಿದರು.
Advertisement