Copy-Paste Diplomacy: ಅಂತಾರಾಷ್ಟ್ರೀಯ ಬೆಂಬಲ ಪಡೆಯಲು ಶತ್ರುರಾಷ್ಟ್ರದ ನಿಯೋಗವೂ ವಿವಿಧೆಡೆ ಭೇಟಿ!

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ತನ್ನ ರಾಜತಾಂತ್ರಿಕ ಪ್ರಭಾವದ ಭಾಗವಾಗಿ 33 ಜಾಗತಿಕ ರಾಜಧಾನಿಗಳಿಗೆ ಏಳು ಬಹು-ಪಕ್ಷ ನಿಯೋಗಗಳನ್ನು ಕಳುಹಿಸಿದ ನಂತರ ಶತ್ರು ರಾಷ್ಟ್ರವೂ ಭಾರತದ ಸೂತ್ರ ಕಾಫಿ ಮಾಡುತ್ತಿದೆ.
Former Pakistan Foreign Minister Bilawal Bhutto Zardari
ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ
Updated on

ಇಸ್ಲಾಮಾಬಾದ್: ಭಾರತದೊಂದಿಗಿನ ಇತ್ತೀಚಿನ ಸೇನಾ ಸಂಘರ್ಷದ ನಂತರ ಅಂತಾರಾಷ್ಟ್ರೀಯ ಬೆಂಬಲ ಪಡೆಯಲು ಮತ್ತು ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ನಿಭಾಯಿಸಲು ಮಾತುಕತೆಯ ಮಹತ್ವ ಕುರಿತು ತಿಳಿಸಲು ಪಾಕಿಸ್ತಾನವೂ ಎರಡು ನಿಯೋಗಗಳನ್ನು ವಿವಿಧೆಡೆ ಕಳುಹಿಸುತ್ತಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ತನ್ನ ರಾಜತಾಂತ್ರಿಕ ಪ್ರಭಾವದ ಭಾಗವಾಗಿ 33 ಜಾಗತಿಕ ರಾಜಧಾನಿಗಳಿಗೆ ಏಳು ಬಹು-ಪಕ್ಷ ನಿಯೋಗಗಳನ್ನು ಕಳುಹಿಸಿದ ನಂತರ ಶತ್ರು ರಾಷ್ಟ್ರವೂ ಭಾರತದ ಸೂತ್ರ ಕಾಫಿ ಮಾಡುತ್ತಿದೆ.

ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರ ನಿರ್ದೇಶನದ ಮೇರೆಗೆ, ಉನ್ನತ ಮಟ್ಟದ ಬಹು-ಪಕ್ಷ ನಿಯೋಗ ಇಂದಿನಿಂದ ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಲಂಡನ್ ಮತ್ತು ಬ್ರಸೆಲ್ಸ್‌ಗೆ ಜ ಭೇಟಿ ನೀಡಲಿದೆ ಎಂದು ವಿದೇಶಾಂಗ ಕಚೇರಿ (FO)ತಿಳಿಸಿದೆ.

ಪಾಕಿಸ್ತಾನದ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಮತ್ತು ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೇತೃತ್ವದ ನಿಯೋಗದಲ್ಲಿ 9 ಸದಸ್ಯರಿದ್ದಾರೆ.ಪ್ರಧಾನ ಮಂತ್ರಿಯ ವಿಶೇಷ ಸಹಾಯಕ ಸೈಯದ್ ತಾರಿಕ್ ಫತೇಮಿ ನೇತೃತ್ವದ ಮತ್ತೊಂದು ನಿಯೋಗವು ಜೂನ್ 2 ರಿಂದ ಮಾಸ್ಕೋಗೆ ಭೇಟಿ ನೀಡಲಿದೆ.

ಈ ಎರಡು ನಿಯೋಗಗಳು ಅಂತಾರಾಷ್ಟ್ರೀಯ ಸಂಸ್ಥೆಗಳು, ಹಿರಿಯ ಅಧಿಕಾರಿಗಳು, ಸಂಸದರು, ಚಿಂತಕರು, ಮಾಧ್ಯಮಗಳು ಮತ್ತು ವಲಸೆಗಾರ ಗುಂಪಿನ ನಾಯಕರೊಂದಿಗೆ ಸರಣಿ ಸಭೆ ನಡೆಸಲಿದೆ. ಈ ನಿಯೋಗಗಳ ಭೇಟಿಯೂ ಇತ್ತೀಚಿನ ಭಾರತೀಯ ಆಕ್ರಮಣದ ಬಗ್ಗೆ ಪಾಕಿಸ್ತಾನದ ದೃಷ್ಟಿಕೋನವನ್ನು ಬಿಂಬಿಸುವ ಗುರಿಯನ್ನು ಹೊಂದಿವೆ" ಎಂದು ಎಂದು ವಿದೇಶಾಂಗ ಕಚೇರಿ ಹೇಳಿದೆ.

ಸಿಂಧೂ ಜಲ ಒಪ್ಪಂದದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ತಕ್ಷಣವೇ ಪುನರಾರಂಭಿಸುವ ಅಗತ್ಯವು ನಿಯೋಗಗಳ ಪ್ರಮುಖ ವಿಷಯವಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ.

Former Pakistan Foreign Minister Bilawal Bhutto Zardari
ಸರ್ವ ಪಕ್ಷ ನಿಯೋಗ: ಭಯೋತ್ಪಾದನೆ ನಿಗ್ರಹಕ್ಕೆ ಹೊಸ ನಿಲುವನ್ನು ವಿವಿಧ ರಾಷ್ಟ್ರಗಳೊಂದಿಗೆ ಹಂಚಿಕೊಂಡ ಭಾರತ!

ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿತ್ತು. ಮೇ 7 ರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತವು ನಿಖರವಾದ ದಾಳಿಯನ್ನು ನಡೆಸಿತ್ತು.

ಮೇ 8, 9 ಮತ್ತು 10 ರಂದು ಪಾಕಿಸ್ತಾನವು ಭಾರತೀಯ ಸೇನಾ ನೆಲೆಗಳ ಮೇಲೆ ವಿಫಲ ಪ್ರಯತ್ನ ನಡೆಸಿತ್ತು. ಮೇ 10 ರಂದು ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಮಾತುಕತೆಗಳ ನಂತರ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com