2026 ಏಪ್ರಿಲ್‌ನಲ್ಲಿ ಬಾಂಗ್ಲಾದೇಶದಲ್ಲಿ ರಾಷ್ಟ್ರೀಯ ಚುನಾವಣೆ: ಮೊಹಮ್ಮದ್ ಯೂನಸ್ ಘೋಷಣೆ

ದೇಶದ ಇತಿಹಾಸದಲ್ಲಿ ಅತ್ಯಂತ ಮುಕ್ತ, ನ್ಯಾಯಯುತ, ಸ್ಪರ್ಧಾತ್ಮಕ ಮತ್ತು ಸ್ವೀಕಾರಾರ್ಹ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿದೆ.
Bangladesh's interim leader Muhammad Yunus.
ಮೊಹಮ್ಮದ್ ಯೂನಸ್
Updated on

ಡಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು 2026ರ ಏಪ್ರಿಲ್ ಮಧ್ಯಭಾಗದಲ್ಲಿ ನಡೆಸಲಾಗುವುದು ಎಂದು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಶುಕ್ರವಾರ ಘೋಷಿಸಿದ್ದಾರೆ

ಈದ್-ಉಲ್-ಅಝಾ ಮುನ್ನಾದಿನದಂದು ರಾಷ್ಟ್ರೀಯವಾಗಿ ದೂರದರ್ಶನದಲ್ಲಿ ಭಾಷಣ ಮಾಡಿದ ಮುಹಮ್ಮದ್ ಯೂನಸ್, ಚುನಾವಣಾ ಆಯೋಗವು ಶೀಘ್ರದಲ್ಲೇ ವಿವರವಾದ ಮಾರ್ಗಸೂಚಿ ಪ್ರಕಟಿಸಿಲಿದೆ ಎಂದಿದ್ದಾರೆ.

ದೇಶದ ಇತಿಹಾಸದಲ್ಲಿ ಅತ್ಯಂತ ಮುಕ್ತ, ನ್ಯಾಯಯುತ, ಸ್ಪರ್ಧಾತ್ಮಕ ಮತ್ತು ಸ್ವೀಕಾರಾರ್ಹ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿದೆ ಎಂದು ಮುಹಮ್ಮದ್ ಯೂನಸ್ ಹೇಳಿದರು. ಚುನಾವಣಾ ಸಮಯದ ಕುರಿತು ತಿಂಗಳುಗಳ ಕಾಲ ನಡೆದ ಊಹಾಪೋಹ ಮತ್ತು ರಾಜಕೀಯ ಜಗಳವನ್ನು ಈ ಘೋಷಣೆ ಕೊನೆಗೊಳಿಸಿದೆ.

ಸುಧಾರಣೆಗಳ ವೇಗವನ್ನು ಅವಲಂಬಿಸಿ ಡಿಸೆಂಬರ್ 2025 ಮತ್ತು ಜೂನ್ 2026ರ ನಡುವೆ ಯಾವುದೇ ಸಮಯದಲ್ಲಿ ಚುನಾವಣೆಗಳನ್ನು ನಡೆಸಬಹುದು ಎಂದು ಮುಹಮ್ಮದ್ ಯೂನಸ್ ಈ ಹಿಂದೆ ಸೂಚಿಸಿದ್ದರು.

Bangladesh's interim leader Muhammad Yunus.
Sheikh Hasina ಅವಾಮಿ ಲೀಗ್ ಪಕ್ಷ ನಿಷೇಧಿಸಿದ ಬಾಂಗ್ಲಾದೇಶದ Yunus ಸರ್ಕಾರ!

ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿರುವ ರಾಜಕೀಯ ಪಕ್ಷಗಳು ಯೂನಸ್ ಅವರನ್ನು ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸುವಂತೆ ಪದೇ ಪದೇ ಒತ್ತಾಯಿಸುತ್ತಿವೆ, ಆದರೆ ಹಸೀನಾ ಅವರ ಅಧಿಕಾರಾವಧಿಯ ನಂತರ ದೇಶವು ತನ್ನ ಪ್ರಜಾಪ್ರಭುತ್ವ ಸಂಸ್ಥೆಗಳ ಕೂಲಂಕುಷ ಪರೀಕ್ಷೆಯ ಅಗತ್ಯವಿರುವುದರಿಂದ ಸಮಯದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಚುನಾವಣೆಯನ್ನು ನಡೆಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸರ್ಕಾರವು ಅಗತ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದಿದ್ದಾರೆ.

ಬಾಂಗ್ಲಾದೇಶವು ಪ್ರತಿ ಬಾರಿ ಚುನಾವಣೆಗಳನ್ನು ನಡೆಸಿದಾಗಲೂ ಆಳವಾದ ಬಿಕ್ಕಟ್ಟಿಗೆ ಸಿಲುಕಿದೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಬಾಂಗ್ಲಾದೇಶದಲ್ಲಿ ನಡೆದ ವ್ಯಾಪಕ ಪ್ರತಿಭಟನೆಗಳು ಆಗಸ್ಟ್‌ನಲ್ಲಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಕಾರಣವಾದ ಕಾರಣ ಬಾಂಗ್ಲಾದೇಶ ಕಳೆದ ವರ್ಷ ಗಮನಾರ್ಹ ರಾಜಕೀಯ ದಂಗೆಯನ್ನು ಕಂಡಿತು.

ಅವರು ಪ್ರಸ್ತುತ ಗಡಿಪಾರಾಗಿ ಭಾರತದಲ್ಲಿ ವಾಸವಾಗಿದ್ದಾರೆ. ಸರ್ಕಾರದ ಉದ್ಯೋಗ ಕೋಟಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಬೇಡಿಕೆಗಳಿಂದ ರಾಜಕೀಯ ದಂಗೆ ಮತ್ತಷ್ಟು ಹೆಚ್ಚಾಯಿತು. ಅದು ಶೀಘ್ರವಾಗಿ ಭ್ರಷ್ಟಾಚಾರದ ವಿರುದ್ಧದ ವಿಶಾಲ ಚಳುವಳಿಯಾಗಿಯೂ ಬೆಳೆಯಿತು. ಇದರಿಂದ ಶೇಖ್ ಹಸೀನಾ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com