ಭೀಕರ ದೃಶ್ಯ: ಚುನಾವಣಾ ರ‍್ಯಾಲಿ ವೇಳೆ ಅಧ್ಯಕ್ಷೀಯ ಅಭ್ಯರ್ಥಿ ತಲೆಗೆ ಗುಂಡು ಹಾರಿಸಿದ ಅಪ್ರಾಪ್ತ; ಜೀವನ್ಮರಣ ಹೋರಾಟ, Video!

ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಉರಿಬೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೊದಲ ಹಂತದ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ.
ಮಿಗುಯೆಲ್ ಉರಿಬೆ
ಮಿಗುಯೆಲ್ ಉರಿಬೆ
Updated on

ದಕ್ಷಿಣ ಅಮೆರಿಕಾದ ದೇಶವಾದ ಕೊಲಂಬಿಯಾದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ ಮೇಲೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಉರಿಬೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೊದಲ ಹಂತದ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ. ಹೀಗಿದ್ದರೂ ಉರಿಬೆ ಜೀವನ್ಮರಣ ಹೋರಾಟ ನಡೆಸುತ್ತಿದ್ದು ಮುಂದಿನ ಕೆಲವು ಗಂಟೆಗಳು ಬಹಳ ನಿರ್ಣಾಯಕವಾಗಿವೆ.

ನಿನ್ನೆ ಶನಿವಾರ ಸಂಜೆ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಉರಿಬೆಗೆ ಮೂರು ಬಾರಿ ಗುಂಡು ಹಾರಿಸಲಾಗಿದೆ. ಅದರಲ್ಲಿ ಒಂದು ಅವರ ತಲೆಗೆ ಬಿದ್ದಿದೆ ಎಂದು ವರದಿಯಾಗಿದೆ. ಉರಿಬೆ ರಾಜಧಾನಿ ಬೊಗೋಟಾದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಉರಿಬೆ ಮಾತನಾಡುತ್ತಿದ್ದರು. 2026ರಲ್ಲಿ ಕೊಲಂಬಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಮಿಗುಯೆಲ್ ಉರಿಬೆ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. 39 ವರ್ಷದ ಉರಿಬೆ ವಿರೋಧ ಪಕ್ಷದ ಸೆಂಟ್ರೊ ಡೆಮಾಕ್ರಟಿಕೊ ಕನ್ಸರ್ವೇಟಿವ್ ಪಕ್ಷದ ಸದಸ್ಯರಾಗಿದ್ದಾರೆ.

ಭಾಷಣ ಮಾಡುತ್ತಿದ್ದಾಗ ದಾಳಿಕೋರ ಉರಿಬೆ ಅವರ ಹಿಂದಿನಿಂದ ಗುಂಡು ಹಾರಿಸಿದ್ದಾನೆ ಎಂದು ಪಕ್ಷ ಹೇಳಿಕೆ ನೀಡಿದೆ. ನಗರದ ಫಾಂಟಿಬನ್ ಪ್ರದೇಶದಲ್ಲಿ ದಾಳಿ ನಡೆದಿದೆ ಎಂದು ಬೊಗೋಟಾ ಮೇಯರ್ ಕಾರ್ಲೋಸ್ ಗ್ಯಾಲನ್ ಹೇಳಿದ್ದಾರೆ. ಉರಿಬೆ ಅವರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಗರದಾದ್ಯಂತ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಪೊಲೀಸರು 15 ವರ್ಷದ ಆರೋಪಿ ದಾಳಿಕೋರನನ್ನು ಸ್ಥಳದಿಂದಲೇ ಬಂಧಿಸಿದ್ದಾರೆ.

ಉರಿಬೆ ಕೊಲಂಬಿಯಾದ ಪ್ರಸಿದ್ಧ ಪತ್ರಕರ್ತೆ ಡಯಾನಾ ಟರ್ಬೆ ಅವರ ಮಗ. ಡಯಾನಾಳನ್ನು 1991ರಲ್ಲಿ ಬೊಗೋಟಾದಲ್ಲಿ ಡ್ರಗ್ ಮಾಫಿಯಾ ಪ್ಯಾಬ್ಲೊ ಎಸ್ಕೋಬಾರ್‌ನ ಮೆಡೆಲಿನ್ ಕಾರ್ಟೆಲ್ ಅಪಹರಿಸಿತ್ತು. ಡಯಾನಾ ಆ ಯುಗದ ಖ್ಯಾತ ಪತ್ರಕರ್ತೆಯಾಗಿದ್ದರು. ಅವರು ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧದ ವಿರುದ್ಧ ನಿರಂತರವಾಗಿ ಬರೆಯುತ್ತಿದ್ದರು. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡರು.

ಮಿಗುಯೆಲ್ ಉರಿಬೆ
Dusting Challenge: 'ಅಪ್ಪ ನಾನು ರಾತ್ರೋರಾತ್ರಿ ಸ್ಟಾರ್ ಆಗ್ತೀನಿ'; 19ರ ಹರೆಯದ ಯುವತಿ ದುರಂತ ಸಾವು!

ಮಿಗುಯೆಲ್ ಉರಿಬೆ ಬಾಲ್ಯದಿಂದಲೂ ರಾಜಕೀಯದೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಮಾಜಿ ಅಧ್ಯಕ್ಷ ಜೂಲಿಯೊ ಸೀಸರ್ ಟರ್ಬೆ ಅವರ ಮೊಮ್ಮಗ. ಜೂಲಿಯೊ ಸೀಸರ್ ಟರ್ಬೆ 1978 ರಿಂದ 1982 ರವರೆಗೆ ಕೊಲಂಬಿಯಾದ 25ನೇ ಅಧ್ಯಕ್ಷರಾಗಿದ್ದರು. ಅವರು ಕೊಲಂಬಿಯಾದ ಲಿಬರಲ್ ಪಕ್ಷದ ಪ್ರಮುಖ ನಾಯಕರಾಗಿದ್ದರು. ಅವರ ರಾಜಕೀಯ ಸಿದ್ಧಾಂತವು ಉದಾರವಾದಿಯಾಗಿತ್ತು. ಅವರು ಸಾಮಾಜಿಕ ಸುಧಾರಣೆಗಳ ಪರವಾಗಿದ್ದರು. ಆದರೆ ಅವರ ಸಂಪ್ರದಾಯವಾದಿ ನೀತಿಗಳು ಅವರನ್ನು ವಿವಾದಾತ್ಮಕವಾಗಿಸಿದವು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com