
ನವದೆಹಲಿ: ಓಪನ್‌ಎಐನ ಚಾಟ್‌ಜಿಪಿಟಿ ಮಂಗಳವಾರ ಅನಿರೀಕ್ಷಿತವಾಗಿ ಜಾಗತಿಕವಾಗಿ ತಾಂತ್ರಿಕ ತೊಂದರೆಯಿಂದ ಡೌನ್ ಆಗಿದ್ದು, ಇದರಿಂದಾಗಿ ಲಕ್ಷಾಂತರ ಬಳಕೆದಾರರು ಅದರ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಸೇವೆ ಪಡೆಯಲು ಸಾಧ್ಯವಾಗಲಿಲ್ಲ.
ಡೌನ್‌ಡೆಕ್ಟರ್ ಪ್ರಕಾರ, ಇಂದು ಮಧ್ಯಾಹ್ನ 12:30 ರಿಂದ 3:30(IST) ರ ನಡುವೆ 860ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಬಳಕೆದಾರರು ತಾಂತ್ರಿಕ ತೊಂದರೆಗಳನ್ನು ಎದುರಿಸಿದರು. ಹಲವರು ಈ ಅನಿರೀಕ್ಷಿತ ಅಡಚಣೆಯ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದು, ತಾಂತ್ರಿಕ ತೊಂದರೆಯ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.
ಚಾಟ್‌ಬಾಟ್‌ನೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುವಾಗ ಅನೇಕರಿಗೆ "ನೆಟ್‌ವರ್ಕ್ ಸಮಸ್ಯೆ ಇದೆ" ಎಂಬ ಪ್ರತಿಕ್ರಿಯೆ ಬಂದಿದೆ. ಈ ಸ್ಥಗಿತವು ಸಾರ್ವತ್ರಿಕವಾಗಿದೆಯೇ ಅಥವಾ ಕೆಲವು ಪ್ರದೇಶಗಳಿಗೆ ಸೀಮಿತವಾಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
2025ರಲ್ಲಿ ಚಾಟ್‌ಜಿಪಿಟಿ ಹಲವಾರು ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಇದು ವ್ಯಾಪಕವಾಗಿ ಬಳಸಲಾಗುವ AI ಸೇವೆಯಲ್ಲಿ ತಾಂತ್ರಿಕ ಸಮಸ್ಯೆಗಳು ಸಾಮಾನ್ಯ ಎಂಬುದನ್ನು ಎತ್ತಿ ತೋರಿಸುತ್ತದೆ.
ಕಳೆದ ಜನವರಿಯಲ್ಲಿ, ಜಾಗತಿಕ ಸ್ಥಗಿತವು ಲಕ್ಷಾಂತರ ಜನರು ಪ್ಲಾಟ್‌ಫಾರ್ಮ್ ಬಳಸಲು ಸಾಧ್ಯವಾಗಲಿಲ್ಲ. ನಂತರ ಮಾರ್ಚ್‌ನಲ್ಲಿ ಮತ್ತಷ್ಟು ಸೇವಾ ಅಡಚಣೆ ಸಂಭವಿಸಿತ್ತು.
ಓಪನ್‌ಎಐ ಚಾಟ್‌ಜಿಪಿಟಿ ಕಾರ್ಯ ಸ್ಥಗಿತಗೊಂಡಿದ್ದನ್ನು ಒಪ್ಪಿಕೊಂಡಿದ್ದು,, ಚಾಟ್‌ಜಿಪಿಟಿ ಮತ್ತು ಅದರ ವಿಡಿಯೋ ಪ್ಲಾಟ್ ಫಾರ್ಮ್ ಸೋರಾ ಎರಡರ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದೆ ಮತ್ತು ಸಮಸ್ಯೆಯನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದೆ.
Advertisement