Operation Sindoor ನಿಂದ ಕಂಗೆಟ್ಟ ಪಾಕಿಸ್ತಾನ: ದಿವಾಳಿ ಅಂಚಿನಲ್ಲಿದ್ದರೂ ರಕ್ಷಣಾ ಬಜೆಟ್ ಶೇ.20 ರಷ್ಟು ಏರಿಕೆ, ಉಳಿದೆಲ್ಲಾ ಖರ್ಚುಗಳಿಗೆ ಕತ್ತರಿ!

ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದ ಒಟ್ಟಾರೆ ಸಾಲ ಸುಮಾರು PKR 76,000 ಶತಕೋಟಿ (ಸುಮಾರು USD 270 ಶತಕೋಟಿ) ಗೆ ಏರಿದೆ.
Operation Sindoor
ಆಪರೇಷನ್ ಸಿಂದೂರ್online desk
Updated on

ನವದೆಹಲಿ: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಗಾದೆ ಇದೆಯಲ್ಲಾ ಅದನ್ನ ಪಾಕಿಸ್ತಾನದಂತಹವರನ್ನು ನೋಡಿಯೇ ಮಾಡಿದ್ದಿರಬೇಕು. ಈಗ್ಯಾಕೆ ಈ ಗಾದೆ ಅಂದರೆ, ದೇಶ ದಿವಾಳಿಯ ಅಂಚಿನಲ್ಲಿದ್ದರೂ, ರಕ್ಷಣಾ ಬಜೆಟ್ ನ್ನು ಶೇ.20 ರಷ್ಟು ಹೆಚ್ಚಳ ಮಾಡಿದೆ. ಅಷ್ಟೆ ಅಲ್ಲದೇ ಉಳಿದೆಲ್ಲಾ ಖರ್ಚುಗಳಿಗೂ ಕತ್ತರಿ ಹಾಕಲು ನಿರ್ಧರಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದ ಒಟ್ಟಾರೆ ಸಾಲ ಸುಮಾರು PKR 76,000 ಶತಕೋಟಿ (ಸುಮಾರು USD 270 ಶತಕೋಟಿ) ಗೆ ಏರಿದೆ. ಕಳೆದ ತಿಂಗಳು ಭಾರತದೊಂದಿಗಿನ ಮಿಲಿಟರಿ ಘರ್ಷಣೆಯ ನಂತರ ಅಭಿವೃದ್ಧಿಗಿಂತ ತನ್ನ ಮಿಲಿಟರಿ ವೆಚ್ಚಕ್ಕೆ ಆದ್ಯತೆ ನೀಡುತ್ತಿದೆ. ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ರಕ್ಷಣಾ ವೆಚ್ಚದಲ್ಲಿ ಶೇ.20 ರಷ್ಟು ಹೆಚ್ಚಳ ಕಂಡುಬಂದಿದೆ. ಆದರೆ ಒಟ್ಟಾರೆ ವೆಚ್ಚವನ್ನು ಶೇ.7 ರಷ್ಟು ಕಡಿತಗೊಳಿಸಲಾಗಿದೆ.

ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ತಮ್ಮ ಮಹತ್ವಾಕಾಂಕ್ಷೆಯ PKR 17.573 ಟ್ರಿಲಿಯನ್ ($62 ಶತಕೋಟಿ) ಪ್ರಸ್ತಾವನೆಯು ಮುಂಬರುವ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯನ್ನು ಶೇ.4.2 ರಷ್ಟು ಹೆಚ್ಚಿಸುತ್ತದೆ ಎಂದು ಆಶಿಸಿದರು. ಇಸ್ಲಾಮಾಬಾದ್ ಆರ್ಥಿಕತೆಯನ್ನು ಸ್ಥಿರಗೊಳಿಸಿದೆ ಎಂದು ಹೇಳಿದರು. 2023 ರ ಹೊತ್ತಿಗೆ ತನ್ನ ಸಾಲಗಳನ್ನು ಮರುಪಾವತಿಸದೆ ಬಾಕಿ ಇರುವ ಅಪಾಯವನ್ನು ಎದುರಿಸುತ್ತಿದ್ದ ಆರ್ಥಿಕತೆಯನ್ನು ಪಾಕಿಸ್ತಾನ ಸ್ಥಿರಗೊಳಿಸಿದೆ. 2024-25 ರ ಗುರಿಯ 5.9 ಪ್ರತಿಶತದ ವಿರುದ್ಧ GDP (ಒಟ್ಟು ದೇಶೀಯ ಉತ್ಪನ್ನ) ದ ಶೇ. 3.9 ರಷ್ಟು ಕೊರತೆಯನ್ನು ಪಾಕಿಸ್ತಾನ ಅಂದಾಜಿಸಿದೆ. ಹಣದುಬ್ಬರವು ಶೇ.7.5 ಮತ್ತು ಶೇ. 4.2 ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.

ಆದರೆ, ಈ ಹಣಕಾಸು ವರ್ಷದ ಬೆಳವಣಿಗೆ ಶೇ.2.7 ರಷ್ಟಿರುವ ಸಾಧ್ಯತೆಯಿದೆ, ಬಜೆಟ್ ಗುರಿಯಾದ ಶೇ.3.6ಕ್ಕೆ ಹೋಲಿಸಿದರೆ. ಪಾಕಿಸ್ತಾನದ ಬೆಳವಣಿಗೆ ಈ ಪ್ರದೇಶಕ್ಕಿಂತ ಬಹಳ ಹಿಂದುಳಿದಿದೆ. 2024 ರಲ್ಲಿ, ದಕ್ಷಿಣ ಏಷ್ಯಾದ ದೇಶಗಳು ಸರಾಸರಿ ಶೇ. 5.8 ರಷ್ಟು ಬೆಳವಣಿಗೆ ಸಾಧಿಸಿದೆ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ 2025 ರಲ್ಲಿ ಶೇ.6.0 ರಷ್ಟು ನಿರೀಕ್ಷಿಸುತ್ತದೆ.

Operation Sindoor
Fraud Marshal: Pak ಸೇನಾ ಮುಖ್ಯಸ್ಥ ಅಸಿಮ್ ಮುನೀರ್​ಗೆ ಜಾಗತಿಕ ಮಟ್ಟದಲ್ಲಿ ಅವಮಾನ; ಅಮೆರಿಕದಲ್ಲಿ ರಾರಾಜಿಸಿದ ಬಿಲ್‌ಬೋರ್ಡ್‌; Video

ರಕ್ಷಣಾ ಖರ್ಚು

ಹೊಸ ಬಜೆಟ್ ಜುಲೈ-ಜೂನ್ 2025-26 ರಲ್ಲಿ ರಕ್ಷಣೆಗೆ 2.55 ಟ್ರಿಲಿಯನ್ ರೂಪಾಯಿಗಳನ್ನು ($9 ಬಿಲಿಯನ್) ನಿಗದಿಪಡಿಸಿದೆ. ಮಿಲಿಟರಿ ಪಿಂಚಣಿಗಳಿಗೆ 742 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ($2.63 ಬಿಲಿಯನ್) ಮೀಸಲಿಡಲಾಗಿದೆ. ಇದು ಇಡೀ ರಕ್ಷಣಾ ಬಜೆಟ್ ಅನ್ನು 3.292 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ($11.67 ಬಿಲಿಯನ್) ಏರಿಕೆ ಮಾಡಿದೆ. ಬಜೆಟ್ ಉಪಕರಣಗಳು ಮತ್ತು ಇತರ ಭೌತಿಕ ಸ್ವತ್ತುಗಳಿಗಾಗಿ ಖರ್ಚು ಮಾಡುವಲ್ಲಿ 704 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ($2.5 ಬಿಲಿಯನ್) ಒಳಗೊಂಡಿದೆ.

ಪ್ರಧಾನಿ ಷರೀಫ್ ಹೇಳಿಕೆಯೊಂದರಲ್ಲಿ, ಪಾಕಿಸ್ತಾನ "ಆರ್ಥಿಕ ಕ್ಷೇತ್ರದಲ್ಲಿ" ಭಾರತವನ್ನು ಮೀರಿಸಬೇಕು ಎಂದು ಹೇಳಿದ್ದರು. ಆಪರೇಷನ್ ಸಿಂಧೂರ್ ನಲ್ಲಿ ಭಾರತದ ರಕ್ಷಣಾ ಕ್ಷಮತೆಗೆ ಬೆಚ್ಚಿಬಿದ್ದ ಪಾಕಿಸ್ತಾನ ಈಗ ತನ್ನ ಸೇನಾ ಬಜೆಟ್ ನ್ನು ಹೆಚ್ಚಿಸಲು ಮುಂದಾಗಿರುವುದು ಸ್ಪಷ್ಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com