
ಕೆನಡಾ: ಕೆನಡಾದಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಉಭಯ ಕುಶಲೋಪರಿ ಫೋಟೋ, ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತ ಲಾಘವ ನೀಡಿ ಮಾತನಾಡಿಸಿದ ಜಾರ್ಜಿಯಾ ಮೆಲೋನಿ, ಮೋದಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
"ನೀವು ಅತ್ಯುತ್ತಮ, ನಾನೂ ನಿಮ್ಮಂತಾಗಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗತೊಡಗಿದೆ. ಈ ವಿಡಿಯೋ ಮಾತ್ರವಲ್ಲದೇ, ಪ್ರಧಾನಿ ಮೋದಿ- ಮೆಲೋನಿ ಭೇಟಿಯ ಫೋಟೋಗಳೂ ಸಹ ಜಾಲತಾಣಗಳಲ್ಲಿ ವೈರಲ್ ಆಗತೊಡಗಿವೆ.
ಪ್ರಧಾನಿ ಮೋದಿ ಮತ್ತು ಮೆಲೋನಿ ತಮ್ಮ ಸ್ನೇಹಪರ ಬಾಂಧವ್ಯವನ್ನು ಈ ಹಿಂದೆಯೂ ಹಲವು ಬಾರಿ ವೀಡಿಯೊಗಳು ಮತ್ತು ಸೆಲ್ಫಿಗಳಲ್ಲಿ ಪ್ರದರ್ಶಿಸಿದ್ದರು. ಈ ಪೈಕಿ ದುಬೈನಲ್ಲಿ ನಡೆದ COP28 ಶೃಂಗಸಭೆಯ ಸಮಯದಲ್ಲಿ ತೆಗೆದ ಒಂದು ಫೋಟೋ ವೈರಲ್ ಆಗಿತ್ತು ಅಲ್ಲಿ ಮೆಲೋನಿ "COP28 ನಲ್ಲಿ ಉತ್ತಮ ಸ್ನೇಹಿತರು, #Melodi" ಎಂಬ ಶೀರ್ಷಿಕೆಯೊಂದಿಗೆ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದರು.
Advertisement