
ಇಸ್ಲಾಮಾಬಾದ್: ಇರಾನ್ ನ ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದ ನಂತರ 2026ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು ನಾಮನಿರ್ದೇಶನ ಮಾಡಿದ ಪಾಕಿಸ್ತಾನ ಸರ್ಕಾರದ ನಿರ್ಧಾರವನ್ನು ಅಲ್ಲಿನ ಕೆಲವು ಜನಪ್ರತಿನಿಧಿಗಳು ಟೀಕಿಸಿದ್ದಾರೆ.
ಇತ್ತೀಚಿನ ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಶಮನದಲ್ಲಿ ಪ್ರಮುಖ ಪಾತ್ರವನ್ನು ಉಲ್ಲೇಖಿಸಿ 2026ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅವರ ಹೆಸರನ್ನು ಶಿಫಾರಸು ಮಾಡುವ ನಿರ್ಧಾರವನ್ನು ಪಾಕಿಸ್ತಾನ ಸರ್ಕಾರ ಶನಿವಾರ ಘೋಷಿಸಿತ್ತು.
ಆದರೆ, ಇದಕ್ಕೆ ಅಲ್ಲಿನ ಕೆಲ ಜನಪ್ರತಿನಿಧಿಗಳು ಅಪಸ್ವರ ವ್ಯಕ್ತಪಡಿಸಿದ್ದು, ಅವರ ಹೆಸರನ್ನು ನಾಮನಿರ್ದೇಶವನ್ನು ವಾಪಸ್ ಪಡೆಯಬೇಕು ಎಂದು ಜಮೈತ್ ಉಲೇಮಾ-ಇ-ಇಸ್ಲಾಂ (JUI-F) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಆಗ್ರಹಿಸಿದ್ದಾರೆ.
ಅಮೆರಿಕದೊಂದಿಗೆ ಸ್ನೇಹವನ್ನು ಬಯಸುತ್ತೇವೆ ಆದರೆ ಗುಲಾಮಗಿರಿಯನ್ನು ಸ್ವೀಕರಿಸಲ್ಲ ಎಂದು ಹೇಳಿರುವುದಾಗಿ ಎಕ್ಸ್ ಪ್ರೆಸ್ ಟ್ರಿಬ್ಯುನ್ ವರದಿ ಮಾಡಿದೆ.
ಇರಾನ್ ನಲ್ಲಿ ಅಮೆರಿಕ ದಾಳಿಯನ್ನು ಖಂಡಿಸಿದ ರೆಹಮಾನ್, ಇದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಡೊನಾಲ್ಡ್ ಟ್ರಂಪ್ ಅವರ ಕೈಯಲ್ಲಿ ಪ್ಯಾಲೆಸ್ತಿಯನ್ನರು, ಇರಾಕ್ ಮತ್ತು ಅಪ್ಘಾನ್ ಜನರ ರಕ್ತವಿದೆ ಎಂದು ಆರೋಪಿಸಿದ ಅವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಟ್ರಂಪ್ ಹೆಸರು ನಾಮನಿರ್ದೇಶನವನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದು, ನಾವು ಇರಾನ್ ಬೆಂಬಲಿಸೋಣ ಎಂದು ಹೇಳಿದ್ದಾರೆ.
ಅಮೆರಿಕದೊಂದಿಗೆ ಸ್ನೇಹವನ್ನು ಬಯಸುತ್ತೇವೆ ಆದರೆ ಗುಲಾಮಗಿರಿಯನ್ನು ಸ್ವೀಕರಿಸಲ್ಲ ಎಂದು ಹೇಳಿರುವುದಾಗಿ ಎಕ್ಸ್ ಪ್ರೆಸ್ ಟ್ರಿಬ್ಯುನ್ ವರದಿ ಮಾಡಿದೆ.
ಇರಾನ್ ನಲ್ಲಿ ಅಮೆರಿಕ ದಾಳಿಯನ್ನು ಖಂಡಿಸಿದ ರೆಹಮಾನ್, ಇದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಡೊನಾಲ್ಡ್ ಟ್ರಂಪ್ ಅವರ ಕೈಯಲ್ಲಿ ಪ್ಯಾಲೆಸ್ತಿಯನ್ನರು, ಇರಾಕ್ ಮತ್ತು ಅಪ್ಘಾನ್ ಜನರ ರಕ್ತವಿದೆ ಎಂದು ಆರೋಪಿಸಿದ ಅವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಟ್ರಂಪ್ ಹೆಸರು ನಾಮನಿರ್ದೇಶನವನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದು, ನಾವು ಇರಾನ್ ಬೆಂಬಲಿಸೋಣ ಎಂದು ಹೇಳಿರುವುದಾಗಿ ಎಕ್ಸ್ ಪ್ರೆಸ್ ಟ್ರಿಬ್ಯುನ್ ವರದಿಯಲ್ಲಿ ಹೇಳಿದೆ.
Advertisement