Benjamin Netanyahu, trump and Khameni
ನೇತನ್ಯಾಹು, ಟ್ರಂಪ್ ಮತ್ತು ಖಮೇನಿ ಸಾಂದರ್ಭಿಕ ಚಿತ್ರ

Ceasefire: ಕೊನೆಗೂ 'ಕದನ ವಿರಾಮ' ಒಪ್ಪಿದ ಇಸ್ರೇಲ್-ಇರಾನ್; ಮಧ್ಯ ಪ್ರಾಚ್ಯದಲ್ಲಿನ 12 ದಿನಗಳ ಯುದ್ಧ ಸದ್ಯಕ್ಕೆ ಅಂತ್ಯ!

ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದ ಸೂತ್ರವನ್ನು ಇಸ್ರೇಲ್ ಹಾಗೂ ಇರಾನ್ ಮಂಗಳವಾರ ಒಪ್ಪಿಕೊಂಡಿವೆ.
Published on

ಜೆರುಸೆಲೆಂ: ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ, ಮಿಲಿಟರಿ ಕಾರ್ಯಾಚರಣೆಯಿಂದ ಕಳೆದ 12 ದಿನಗಳಿಂದ ಮಧ್ಯ ಪ್ರಾಚ್ಯದಲ್ಲಿ ಉಂಟಾಗಿದ್ದ ಯುದ್ಧ ಕೊನೆಗೂ ಅಂತ್ಯವಾಗಿದೆ.

ಕತಾರ್ ನಲ್ಲಿ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್ ಪ್ರತೀಕಾರದ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದ ಸೂತ್ರವನ್ನು ಇಸ್ರೇಲ್ ಹಾಗೂ ಇರಾನ್ ಮಂಗಳವಾರ ಒಪ್ಪಿಕೊಂಡಿವೆ.

ಮಂಗಳವಾರ ಮುಂಜಾನೆ ಇಸ್ರೇಲ್ ಗುರಿಯಾಗಿಸಿ ಇರಾನ್ ನಡೆಸಿದ ಅಂತಿಮ ಕ್ಷಿಪಣಿ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ಇಸ್ರೇಲ್ ಬೆಳಗಾಗುವ ಮುನ್ನಾವೇ ಇರಾನ್‌ನಾದ್ಯಂತ ಅನೇಕ ಕಟ್ಟಡಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿತ್ತು. ತದ ನಂತರ ಉಭಯ ರಾಷ್ಟ್ರಗಳು ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡಿವೆ.

ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯೊಂದಿಗೆ ಇರಾನ್ ಜೊತೆಗಿನ ದ್ವಿಪಕ್ಷೀಯ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಒಪ್ಪಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಇರಾನ್‌ನ ಪರಮಾಣು ಮತ್ತು ಖಂಡಾಂತರ ಕ್ಷಿಪಣಿ ಬೆದರಿಕೆ ಹೋಗಲಾಡಿಸುವುದು ಸೇರಿದಂತೆ ಇರಾನ್ ವಿರುದ್ಧದ 12 ದಿನಗಳ ಕಾರ್ಯಾಚರಣೆಯಲ್ಲಿ ಇಸ್ರೇಲ್ ತನ್ನ ಎಲ್ಲಾ ಯುದ್ಧ ಗುರಿಗಳನ್ನು ಸಾಧಿಸಿದೆ ಎಂದು ಸೋಮವಾರ ರಾತ್ರಿ ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್‌ಗೆ ವಿವರಿಸಿರುವುದಾಗಿ ನೇತನ್ಯಾಹು ತಿಳಿಸಿದ್ದಾರೆ.

Benjamin Netanyahu, trump and Khameni
Iran-Israel war: 12 ದಿನಗಳ ಯುದ್ಧ ಕೊನೆಗೂ ಅಂತ್ಯ; ಕದನ ವಿರಾಮ ಖಚಿತಪಡಿಸಿದ ಇರಾನ್; ಮತ್ತೆ ಉಲ್ಲಂಘಿಸಿದಂತೆ ಟ್ರಂಪ್ ಸೂಚನೆ

ಇಸ್ರೇಲ್ ಕೂಡಾ ಇರಾನ್‌ನ ಹಲವು ಕಮಾಂಡರ್ ಗಳನ್ನು ಹತ್ಯೆ ಮಾಡಿದ್ದು, ಹಲವಾರು ಸರ್ಕಾರಿ ಕಟ್ಟಡಗಳನ್ನು ಹಾನಿಗೊಳಿಸಿದೆ. ಇರಾನ್ ನ ವಾಯು ದಾಳಿಯನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವುದಾಗಿ ನೇತನ್ಯಾಹು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com