Axiom4 Mission: ಫ್ಲೋರಿಡಾದ ನಾಸಾ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಯಶಸ್ವಿ; Video

ನಾಸಾದ ಮಾಜಿ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ಈ ವಾಣಿಜ್ಯ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ.
SpaceX Falcon 9 rocket with the Crew Dragon capsule carrying
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್‌ನೊಂದಿಗೆ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಉಡಾವಣೆಗೊಂಡಿದೆ.
Updated on

ಹಲವು ಬಾರಿ ವಿಳಂಬಗಳ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಹೊತ್ತ ಆಕ್ಸಿಯಮ್-4 ಮಿಷನ್(Axiom-4) ಕೊನೆಗೂ ಇಂದು ಬುಧವಾರ ಭಾರತೀಯ ಕಾಮಾನ ಮಧ್ಯಾಹ್ನ 12.01ಕ್ಕೆ ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಡೆಗೆ ಯಶಸ್ವಿಯಾಗಿ ಚಿಮ್ಮಿದೆ.

ಇಂದು ಮಧ್ಯಾಹ್ನದಿಂದ 28 ಗಂಟೆಗಳ ಪ್ರಯಾಣದ ನಂತರ, ಬಾಹ್ಯಾಕಾಶ ನೌಕೆ ನಾಳೆ ಗುರುವಾರ ಸಂಜೆ 4:30 (IST) ಸುಮಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನೊಂದಿಗೆ ಡಾಕ್ ಆಗುವ ನಿರೀಕ್ಷೆಯಿದೆ. ಗಗನಯಾತ್ರಿಗಳು ಬಾಹ್ಯಾಕಾಶ ನೌಕೆ ನಿಲ್ದಾಣದಲ್ಲಿ ಸುಮಾರು 14 ದಿನಗಳನ್ನು ಕಳೆಯಲಿದ್ದಾರೆ.

ನಾಸಾದ ಮಾಜಿ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ಈ ವಾಣಿಜ್ಯ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ. ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಗಗನಯಾತ್ರಿ ಶುಭಾನ್ಶು ಶುಕ್ಲಾ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇಬ್ಬರು ಮಿಷನ್ ತಜ್ಞರು ಪೋಲೆಂಡ್‌ನ ಇಎಸ್‌ಎ (ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ) ಯೋಜನೆಯ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಹುನೋರ್ (ಹಂಗೇರಿಯನ್ ಟು ಆರ್ಬಿಟ್) ಗಗನಯಾತ್ರಿ ಟಿಬೋರ್ ಕಾಪು ಆಗಿದ್ದಾರೆ.

ಹಲವು ವಿಘ್ನಗಳನ್ನು ಎದುರಿಸಿ ಯಶಸ್ವಿ ಉಡಾವಣೆ

ಆಕ್ಸಿಯಮ್-4 ಮಿಷನ್ ಅನೇಕ ವಿಳಂಬಗಳನ್ನು ಎದುರಿಸಿದೆ, ಮೊದಲು ಪ್ರತಿಕೂಲ ಹವಾಮಾನದಿಂದಾಗಿ ಮತ್ತು ನಂತರ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನಲ್ಲಿ ಪತ್ತೆಯಾದ ಸೋರಿಕೆಗಳಿಂದಾಗಿ ಮತ್ತು ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ರಷ್ಯಾದ ಮಾಡ್ಯೂಲ್‌ನಲ್ಲಿ ಸೋರಿಕೆಯುಂಟಾಗಿ ಉಡಾವಣೆ ವಿಳಂಬವಾಯಿತು.

ಕಕ್ಷೆಯ ಪ್ರಯೋಗಾಲಯದ ಜ್ವೆಜ್ಡಾ ಸೇವಾ ಮಾಡ್ಯೂಲ್‌ನ ಹಿಂಭಾಗದಲ್ಲಿರುವ ವರ್ಗಾವಣೆ ಸುರಂಗದಲ್ಲಿ ಇತ್ತೀಚಿನ ದುರಸ್ತಿ ಕಾರ್ಯದ ಸ್ಥಿತಿಯ ಬಗ್ಗೆ ನಾಸಾ ಮತ್ತು ರೋಸ್ಕೋಸ್ಮೋಸ್ ಅಧಿಕಾರಿಗಳು ಚರ್ಚಿಸಿದ ನಂತರ ಉಡಾವಣೆಗೆ ಅವಕಾಶ ಸಿಕ್ಕಿತು.

ನಾಸಾ ಮತ್ತು ಇಸ್ರೋ ನಡುವಿನ ಸಹಯೋಗದ ಭಾಗವಾಗಿ, ಆಕ್ಸಿಯಮ್ ಮಿಷನ್ 4 ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬದ್ಧತೆಯನ್ನು ತೋರಿಸುತ್ತದೆ ಎಂದು ನಾಸಾ ಹೇಳಿಕೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com