
ಟೊರೊಂಟೊ: ಭಾರೀ ಬಹುಮತದಿಂದ ಗೆದ್ದ ಲಿಬರಲ್ ಪಕ್ಷದ ಮಾಜಿ ಬ್ಯಾಂಕರ್ ಮಾರ್ಕ್ ಕಾರ್ನಿ ಕೆನಡಾದ ಮುಂದಿನ ಪ್ರಧಾನಿಯಾಗಲಿದ್ದಾರೆ.
59 ವರ್ಷದ ಮಾರ್ಕ್ ಕಾರ್ನಿಯವರ ಹಿನ್ನೆಲೆ ನೋಡಿದರೆ, ಮಾರ್ಚ್ 16, 1965 ರಂದು ವಾಯುವ್ಯ ಪ್ರಾಂತ್ಯಗಳ ಫೋರ್ಟ್ ಸ್ಮಿತ್‌ನಲ್ಲಿ ಜನಿಸಿದ ಅವರು ಆಲ್ಬರ್ಟಾದ ಎಡ್ಮಂಟನ್‌ನಲ್ಲಿ ಬೆಳೆದರು.
ಅನುಭವ
2008 ರಿಂದ 2013 ರವರೆಗೆ ಬ್ಯಾಂಕ್ ಆಫ್ ಕೆನಡಾ ಮತ್ತು 2013 ರಿಂದ 2020 ರವರೆಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ನ್ನು ಮಾರ್ಕ್ ಕಾರ್ನಿ ಮುನ್ನಡೆಸುತ್ತಿದ್ದರು. 2008 ರ ವಿಶ್ವ ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳನ್ನು ನಿರ್ವಹಿಸಲು ಕೆನಡಾಕ್ಕೆ ಸಹಾಯ ಮಾಡಿದ್ದರು. 1694 ರಲ್ಲಿ ಸ್ಥಾಪನೆಯಾದ ನಂತರ ಬ್ಯಾಂಕ್ ಆಫ್ ಇಂಗ್ಲೆಂಡ್ ನ್ನು ನಿರ್ವಹಿಸಲು ಬ್ರಿಟಿಷೇತರ ವ್ಯಕ್ತಿಯನ್ನು ನೇಮಿಸಲಾಯಿತು.
2020 ರಲ್ಲಿ, ಅವರು ಹವಾಮಾನ ಕ್ರಮ ಮತ್ತು ಹಣಕಾಸಿಗಾಗಿ ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.
ಕಾರ್ನಿ ಗೋಲ್ಡ್‌ಮನ್ ಸ್ಯಾಚ್ಸ್‌ನ ಮಾಜಿ ಕಾರ್ಯನಿರ್ವಾಹಕರಾಗಿದ್ದಾರೆ. 2003 ರಲ್ಲಿ ಬ್ಯಾಂಕ್ ಆಫ್ ಕೆನಡಾದ ಉಪ ಗವರ್ನರ್ ಆಗಿ ನೇಮಕಗೊಳ್ಳುವ ಮೊದಲು ಲಂಡನ್, ಟೋಕಿಯೊ, ನ್ಯೂಯಾರ್ಕ್ ಮತ್ತು ಟೊರೊಂಟೊದಲ್ಲಿ 13 ವರ್ಷಗಳ ಕಾಲ ಕೆಲಸ ಮಾಡಿದರು. ರಾಜಕೀಯದಲ್ಲಿ ಯಾವುದೇ ಅನುಭವ ಹೊಂದಿಲ್ಲ.
ಶೈಕ್ಷಣಿಕ ಹಿನ್ನೆಲೆ
ಕಾರ್ನಿ 1988 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆದರು. ಹಾರ್ವರ್ಡ್‌ಗೆ ಬ್ಯಾಕಪ್ ಗೋಲ್‌ಕೀಪರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಪೌರತ್ವ
ಮಾರ್ಕ್ ಕಾರ್ನಿ ಕೆನಡಾ, ಇಂಗ್ಲೆಂಡ್ ಮತ್ತು ಐರ್ಲೆಂಡ್ ಪೌರತ್ವವನ್ನು ಹೊಂದಿದ್ದಾರೆ. ಅಂತಿಮವಾಗಿ ಕೆನಡಾದ ಪೌರತ್ವವನ್ನು ಮಾತ್ರ ಉಳಿಸಿಕೊಂಡಿದ್ದು, ಕಾನೂನು ಪ್ರಕಾರ ಅಗತ್ಯವಿಲ್ಲದಿದ್ದರೂ ರಾಜಕೀಯವಾಗಿ ಅವರ ಈ ನಡೆ ಬುದ್ಧಿವಂತಿಕೆಯದ್ದಾಗಿದೆ.
ಕೌಟುಂಬಿಕ ಹಿನ್ನೆಲೆ
ಮಾರ್ಕ್ ಕಾರ್ನಿಯವರ ಪತ್ನಿ ಡಯಾನಾ ಬ್ರಿಟಿಷ್ ಮೂಲದವರಾಗಿದ್ದು, ಅವರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದಾರೆ.
Advertisement