
ಮ್ಯಾಂಚೆಸ್ಟರ್: ಕೆಲವೊಂದು ಘಟನೆಗಳನ್ನು ಕೇಳಿದರೆ ವಿಚಿತ್ರ ಅನಿಸುತ್ತದೆ. 22ರ ಚೆಲುವೆಯೊಬ್ಬಳು ತನ್ನ ಕನ್ಯತ್ವವನ್ನೇ ಮಾರಾಟ ಮಾಡಿ ಕೋಟಿ ಕೋಟೋ ಹಣ ಗಳಿಸಿದ್ದಾಳೆ, ಈ ಸುದ್ದಿ ಆಶ್ಚರ್ಯವಾದರೂ ಸತ್ಯ,. ಹಾಲಿವುಡ್ ಹೀರೋ ಒಬ್ಬರು ದೊಡ್ಡ ಮೊತ್ತಕ್ಕೆ ವಿದ್ಯಾರ್ಥಿನಿಯ ಕನ್ಯತ್ವ ಖರೀದಿಸಿದ್ದು ಸಾಕಷ್ಟು ಸಂಚಲನ ಸೃಷ್ಟಿಸಿದೆ.
ಲಂಡನ್ ಮೂಲದ ವಿದ್ಯಾರ್ಥಿನಿ ಕನ್ಯತ್ವ ಕಳೆದುಕೊಳ್ಳಲು ಇಷ್ಟು ದೊಡ್ಡ ಮೊತ್ತ ತೆಗೆದುಕೊಂಡಿದ್ದಾಳೆ. ಲಂಡನ್ನ ಮ್ಯಾಂಚೆಸ್ಟರ್ ವಿದ್ಯಾರ್ಥಿನಿ ಲೌರಾ ಎಂಬಾಕೆಗೆ ಈಗಿನ್ನೂ 22 ವರ್ಷ. ಆಕೆ ವಿದ್ಯಾರ್ಥಿನಿ. ಅವಳು ಈಗ ಸುದ್ದಿಯಲ್ಲಿ ಇದ್ದಾಳೆ.
ಅವಳು ತನ್ನ ಕನ್ಯತ್ವವನ್ನು ವೆಬ್ಸೈಟ್ ಮೂಲಕ ಹರಾಜಿಗೆ ಇಟ್ಟಿದ್ದಳು. ಈ ಹರಾಜಿನಲ್ಲಿ ಜನಸಾಮಾನ್ಯರು, ಉದ್ಯಮಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಭಾಗಿ ಆಗಿದ್ದರು. ಈಗ ಈ ಹುಡುಗಿಯ ಕನ್ಯತ್ವ ಹಾಲಿವುಡ್ ಹೀರೋಗೆ ಮಾರಾಟ ಆಗಿದೆ. ಆದರೆ, ಹೀರೋನ ಹೆಸರು ಎಲ್ಲಿಯೂ ರಿವೀಲ್ ಆಗಿಲ್ಲ.
ಲೌರಾ ಧಾರ್ಮಿಕ ಹಿನ್ನೆಲೆ ಹೊಂದಿದ್ದಾಳೆ. ಅವಳಿಗೆ ತನ್ನ ನಿರ್ಧಾರದ ಬಗ್ಗೆ ಯಾವುದೇ ಬೇಸರ ಇಲ್ಲ. ತನ್ನ ಜೀವನ ಸೆಟಲ್ ಮಾಡಿಕೊಳ್ಳಲು ಇದು ಒಳ್ಳೆಯ ಆಯ್ಕೆ ಎಂದು ಆಕೆ ಹೇಳಿದ್ದಾಳೆ. ‘ನನಗೆ ಆ ಬಗ್ಗೆ ಬೇಸರ ಇಲ್ಲ. ಪ್ರತಿಯಾಗಿ ಏನೂ ಸಿಗದೇ ಕೆಲವರು ಕನ್ಯತ್ವ ಕಳೆದುಕೊಳ್ಳುತ್ತಾರೆ. ನನಗೆ ಭವಿಷ್ಯವೇ ಸೆಟಲ್ ಆಗುತ್ತಿದೆ’ ಎಂದು ಅವಳು ಹೇಳಿದ್ದಾಗಿ ವರದಿ ಆಗಿದೆ.
ಲೌರಾಳ ಕನ್ಯತ್ವ ಪಡೆದುಕೊಳ್ಳಲು ಹಾಲಿವುಡ್ನ ಹೀರೋ ಜೊತೆ ಅನೇಕ ರಾಜಕಾರಣಿಗಳು, ಉದ್ಯಮಿಗಳು ರೇಸ್ನಲ್ಲಿ ಇದ್ದರು. ಅಂತಿಮವಾಗಿ 18 ಕೋಟಿ ರೂಪಾಯಿ ಕೊಡಲು ರೆಡಿ ಆದ ಹೀರೋಗೆ ಲೌರಾ ಸಿಕ್ಕಿದ್ದಾಳೆ. ಲೌರಾ ಇನ್ನೂ ಶಿಕ್ಷಣ ಪಡೆಯುತ್ತಿದ್ದಾಳೆ. ಈ ರೀತಿ ಬಂದ ಹಣವನ್ನು ಓದಿಗೆ ಬಳಕೆ ಮಾಡೋದಾಗಿ ಹೇಳಿದ್ದಾಳೆ.
ತನ್ನ ಸಂಪ್ರದಾಯವಾದಿ ಪಾಲನೆಯ ಹೊರತಾಗಿಯೂ, ಆರ್ಥಿಕ ಸ್ಥಿರತೆಯನ್ನು ಭದ್ರಪಡಿಸಿಕೊಳ್ಳುವ ಪ್ರಾಯೋಗಿಕ ಮಾರ್ಗವಾಗಿ ಮಾತ್ರ ನಾನು ಇದನ್ನು ಮಾಡಿದ್ದೇನೆ ಎಂದು ಅವರು ಹೇಳಿದರು.
ಯಾವುದೇ ಆರ್ಥಿಕ ಅಥವಾ ಭಾವನಾತ್ಮಕ ಪ್ರಯೋಜನವಿಲ್ಲದೆ ಅನೇಕ ಮಹಿಳೆಯರು ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ಲಾರಾ ವಿವರಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ತನ್ನ ಕನ್ಯತ್ವವನ್ನು ಹರಾಜಿನಲ್ಲಿ ಹಾಕುವ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಈ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವ ಯೋಚನೆ ಮಾಡಿದೆ ಎಂದು ಅವರು ಹೇಳುತ್ತಾರೆ.
ಅನೇಕ ಹುಡುಗಿಯರು ಏನನ್ನೂ ಪಡೆಯದೆ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಕನಿಷ್ಠ ನಾನು ನನ್ನ ಭವಿಷ್ಯವನ್ನು ಸುರಕ್ಷಿತಗೊಳಿಸಿದೆ ಎಂದಿದ್ದಾರೆ 22ರ ಚೆಲುವೆ. ಪ್ರಸಿದ್ಧ ಎಸ್ಕಾರ್ಟ್ ಏಜೆನ್ಸಿಯ ವೆಬ್‌ಸೈಟ್‌ನಲ್ಲಿ ಹರಾಜನ್ನು ಆಯೋಜಿಸಲಾಗಿದ್ದು, ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಿಂದ ಗಮನ ಸೆಳೆಯಿತು. ಲೌರಾ ಕನ್ಯೆ ಹೌದೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಆಕೆ ಕನ್ಯತ್ವ ಹೊಂದಿದ್ದಾಳೆ ಎಂಬ ವರದಿ ಬಂದ ಬಳಿಕವೇ ಅವಳನ್ನು ಹರಾಜಿಗೆ ಇಡಲಾಗಿತ್ತು.
Advertisement