
ವಾಷಿಂಗ್ಟನ್: ಡೊಮಿನಿಕನ್ ಗಣರಾಜ್ಯಕ್ಕೆ ಬೇಸಿಗೆ ರಜೆಯ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ನಿಗೂಢವಾಗಿ ಕಾಣೆಯಾಗಿದ್ದ 20 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿಯ ನಾಪತ್ತೆ ಪ್ರಕರಣದಲ್ಲಿ 24 ವರ್ಷದ ವ್ಯಕ್ತಿಯ ಜೊತೆ ಆಕೆ ಸಮುದ್ರ ತೀರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಳು ಎಂದು ಅಮೆರಿಕದ ಅಧಿಕಾರಿಗಳು ಗುರುತಿಸಿದ್ದಾರೆ.
ಭಾರತೀಯ ಮೂಲದ ಅಮೆರಿಕದ ಖಾಯಂ ನಿವಾಸಿ ಸುದೀಕ್ಷಾ ಕೊನಂಕಿಯನ್ನು ಕೊನೆಯ ಬಾರಿಗೆ ಮಾರ್ಚ್ 6 ರಂದು ಪಂಟಾ ಕಾನಾ ಪಟ್ಟಣದ ರಿಯು ರಿಪಬ್ಲಿಕ್ ರೆಸಾರ್ಟ್‌ನಲ್ಲಿ ಪತ್ತೆ ಮಾಡಲಾಗಿತ್ತು. ಆಕೆ ಡೊಮಿನಿಕನ್ ಗಣರಾಜ್ಯದಲ್ಲಿ ರಜೆಯ ಸಂದರ್ಭದಲ್ಲಿ ಹೋಗಿದ್ದಾಗ ಕಾಣೆಯಾಗಿದ್ದಾಳೆ.
ಯುಎಸ್ ಫೆಡರಲ್ ಕಾನೂನು ಜಾರಿ ಸಂಸ್ಥೆಗಳು ಅವರ ಕಣ್ಮರೆಗೆ ಸಂಬಂಧಿಸಿದ ತನಿಖೆಯಲ್ಲಿ ಕೆರಿಬಿಯನ್ ದೇಶದ ಅಧಿಕಾರಿಗಳೊಂದಿಗೆ ಜೊತೆಗೂಡಿ ತನಿಖೆ ಮಾಡುತ್ತಿದ್ದಾರೆ. ಕೊನಂಕಿಯ ತವರು ವರ್ಜೀನಿಯಾದ ಲೌಡೌನ್ ಕೌಂಟಿ ಶೆರಿಫ್ ಕಚೇರಿ, ಜೋಶುವಾ ರಿಯೆಬೆ ಅವರು ಸುದೀಕ್ಷಾ ಅವರೊಂದಿಗೆ ಕಾಣೆಯಾಗುವ ಮೊದಲು ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವಕ್ತಾರ ಚಾಡ್ ಕ್ವಿನ್ ತಿಳಿಸಿದ್ದಾರೆ.
ಕೊನಂಕಿಯ ತಂದೆ ಸ್ಥಳೀಯ ಅಧಿಕಾರಿಗಳನ್ನು ತನಿಖೆಯನ್ನು ವಿಸ್ತರಿಸಲು ಕೇಳಿದ್ದರೂ, ಪ್ರಕರಣವು ಕ್ರಿಮಿನಲ್ ತನಿಖೆಯಲ್ಲ, ಆದ್ದರಿಂದ ಕೊನಂಕಿಯ ಕಣ್ಮರೆಗೆ ರೀಬೆ ಅವರನ್ನು ಶಂಕಿತ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕ್ವಿನ್ ಹೇಳಿದ್ದಾರೆ.
ಈ ವ್ಯಕ್ತಿ ಆಕೆಯನ್ನು ಕೊನೆಯದಾಗಿ ನೋಡಿರಬಹುದು, ರೈಬೆ ಪ್ರಕರಣದಲ್ಲಿ ಮುಖ್ಯ ವ್ಯಕ್ತಿ ಎಂದು ಕ್ವಿನ್ ದೃಢಪಡಿಸಿದ್ದರೂ ಆತುರದ ತೀರ್ಮಾನಗಳಿಗೆ ಬರದಂತೆ ಎಚ್ಚರಿಕೆ ನೀಡಿದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದು ಪ್ರಸ್ತುತ ಕ್ರಿಮಿನಲ್ ತನಿಖೆಯಲ್ಲ, ಸ್ಪಷ್ಟವಾಗಿ ಹೇಳಬೇಕೆಂದರೆ, ಅವರು ಶಂಕಿತರಲ್ಲ ಎಂದು ಕ್ವಿನ್ ಹೇಳಿದರು. ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಕೊನಂಕಿ, ಮಾರ್ಚ್ 6 ರಂದು ನಾಪತ್ತೆಯಾದಾಗ ಡೊಮಿನಿಕನ್ ರಿಪಬ್ಲಿಕ್‌ನ ಪಂಟಾ ಕಾನಾದಲ್ಲಿರುವ ರೆಸಾರ್ಟ್‌ನಲ್ಲಿ ಐವರು ಸ್ನೇಹಿತರೊಂದಿಗೆ ರಜೆ ಮೇಲೆ ಹೋಗಿದ್ದಳು ಎಂದು ಲೌಡೌನ್ ಕೌಂಟಿ ಶೆರಿಫ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.ಭಾರತದ ಮೂಲದ ಕೊಣಂಕಿಯ ಕುಟುಂಬ ಸದಸ್ಯರು ವಾಷಿಂಗ್ಟನ್, ಡಿ.ಸಿ.ಯ ಉಪನಗರದಲ್ಲಿ ವಾಸಿಸುತ್ತಿದ್ದಾರೆ.
Advertisement