ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣ ವಚನ ಸ್ವೀಕಾರ

ಇಂದು ಒಟ್ಟಾವಾದ ರೈಡೋ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಜನರಲ್ ಮೇರಿ ಸೈಮನ್ ಅವರು ಕಾರ್ನಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
 ಮಾರ್ಕ್ ಕಾರ್ನಿ
ಮಾರ್ಕ್ ಕಾರ್ನಿ
Updated on

ಟೊರೊಂಟೊ: ಕೆನಡಾದ ನೂತನ ಪ್ರಧಾನಿಯಾಗಿ ಶುಕ್ರವಾರ ಮಾಜಿ ಕೇಂದ್ರ ಬ್ಯಾಂಕರ್ ಮಾರ್ಕ್ ಕಾರ್ನಿ ಅವರು ಪ್ರಮಾಣವಚನ ಸ್ವೀಕರಿಸಿದರು.

ಇಂದು ಒಟ್ಟಾವಾದ ರೈಡೋ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಜನರಲ್ ಮೇರಿ ಸೈಮನ್ ಅವರು ಕಾರ್ನಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಇದೇ ವೇಳೆ ಮಾರ್ಕ್ ಕಾರ್ನಿ ಅವರ ಸಂಪುಟ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಿದರು. ಲಿಬರಲ್ ಪಕ್ಷದಿಂದ ಸ್ಪರ್ಧಿಸಿದ್ದ ಕಾರ್ನಿ ಅವರು ಶೇ.86 ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಣಿಜ್ಯ ಸಮರ ಮತ್ತು ಇಡೀ ದೇಶವನ್ನು 51ನೇ ರಾಜ್ಯವಾಗಿ ವಶಪಡಿಸಿಕೊಳ್ಳುವ ಬೆದರಿಕೆ ಹಾಗೂ ನಿರೀಕ್ಷಿತ ಫೆಡರಲ್ ಚುನಾವಣೆಯ ಮೂಲಕ ತಮ್ಮ ದೇಶವನ್ನು ಮುನ್ನಡೆಸುವ ಸವಾಲು ಮಾರ್ಕ್ ಕಾರ್ನಿ ಮುಂದೆ ಇದೆ.

ಟ್ರಂಪ್ "ಕೆನಡಾದ ಸಾರ್ವಭೌಮತ್ವವನ್ನು ಗೌರವಿಸುವುದಾದರೆ" ಮತ್ತು "ವ್ಯಾಪಾರಕ್ಕೆ ಹೆಚ್ಚು ಸಮಗ್ರವಾದ ಒಂದು ಸಾಮಾನ್ಯ ವಿಧಾನವನ್ನು" ಅಳವಡಿಸಿಕೊಳ್ಳಲು ಸಿದ್ಧರಿದ್ದರೆ ನಾನು ಅವರನ್ನು ಭೇಟಿಯಾಗಲು ಸಿದ್ಧನಿದ್ದೇನೆ ಎಂದು ಕಾರ್ನಿ ಹೇಳಿದ್ದಾರೆ.

 ಮಾರ್ಕ್ ಕಾರ್ನಿ
ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ

ಟ್ರಂಪ್ ಕೆನಡಾದ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ ಶೇ. 25 ರಷ್ಟು ಸುಂಕಗಳನ್ನು ವಿಧಿಸಿದ್ದಾರೆ ಮತ್ತು ಏಪ್ರಿಲ್ 2 ರಂದು ಕೆನಡಾದ ಎಲ್ಲಾ ಉತ್ಪನ್ನಗಳ ಮೇಲೆ ವ್ಯಾಪಕವಾದ ಸುಂಕಗಳನ್ನು ವಿಧಿಸುವ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆನಡಾ ಕೂಡ ಸುಮಾರು 20 ಶತಕೋಟಿ ಅಮೆರಿಕನ್‌ ಡಾಲರ್ ಮೌಲ್ಯದ ಅಮೆರಿಕನ್ ಸರಕುಗಳ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಿದೆ.

ಅಮೆರಿಕದ ವ್ಯಾಪಾರ ಯುದ್ಧ ಮತ್ತು ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಟ್ರಂಪ್ ಅವರ ಮಾತು ಕೆನಡಿಯನ್ನರನ್ನು ಕೆರಳಿಸಿದ್ದು, ಅವರು NHL ಮತ್ತು NBA ಪಂದ್ಯಗಳಲ್ಲಿ ಅಮೆರಿಕದ ಗೀತೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com