
ಇರಾಕ್ ರಾಷ್ಟ್ರೀಯ ಗುಪ್ತಚರ ಸೇವೆ ಸದಸ್ಯರು ಅಮೆರಿಕ ನೇತೃತ್ವದ ಸಂಯುಕ್ತ ಪಡೆಯೊಂದಿಗೆ ನಡೆಸಿದ ನಿಖ ವೈಮಾಜಿನ ಕಾರ್ಯಾಚರಣೆಯಲ್ಲಿ ಐಸಿಸ್ ನ ಮತ್ತೊಬ್ಬ ಮುಖ್ಯಸ್ಥನನ್ನು ಇರಾಕ್ ನಲ್ಲಿ ಹತ್ಯೆ ಮಾಡಲಾಗಿದೆ.
ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುದಾನಿ ಇದನ್ನು ದೃಢಪಡಿಸಿದ್ದು, "ಕತ್ತಲೆ ಮತ್ತು ಭಯೋತ್ಪಾದನೆಯ ಶಕ್ತಿಗಳ ಮೇಲೆ ಇರಾಕಿಗಳು ತಮ್ಮ ಪ್ರಭಾವಶಾಲಿ ವಿಜಯಗಳನ್ನು ಮುಂದುವರೆಸಿದ್ದಾರೆ" ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಅಬ್ದುಲ್ಲಾ ಮಕಿ ಮೊಸ್ಲೆಹ್ ಅಲ್-ರಿಫಾಯಿ ಅಥವಾ "ಅಬು ಖದೀಜಾ" ಉಗ್ರಗಾಮಿ ಸಂಘಟನೆಯ ಉಪ ಖಲೀಫ್ ಆಗಿದ್ದನು. ಈತ ಇರಾಕ್ ಮತ್ತು ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದನು ಎಂದು ಪ್ರಧಾನ ಮಂತ್ರಿಗಳ ಹೇಳಿಕೆ ತಿಳಿಸಿದೆ.
ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್ ಫಾರ್ಮ್ ನಲ್ಲಿ ನಿನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂದು ಇರಾಕ್‌ನಲ್ಲಿ ಪರಾರಿಯಾಗಿದ್ದ ಐಸಿಸ್ ನಾಯಕನನ್ನು ಹತ್ಯೆ ಮಾಡಲಾಗಿದೆ. ನಮ್ಮ ವೀರ ಯೋಧರು ಇರಾಕ್ ಸರ್ಕಾರ ಮತ್ತು ಕುರ್ದಿಶ್ ಸ್ಥಳೀಯ ಸರ್ಕಾರದ ಸಮನ್ವಯದೊಂದಿಗೆ ಆತನನ್ನು ಕೊಂದು ಹಾಕಿದ್ದಾರೆ ಎಂದು ಬರೆದಿದ್ದಾರೆ.
ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದನು. ಜಾಗತಿಕವಾಗಿ ಗುಂಪಿನ ಎರಡನೇ ಕಮಾಂಡ್ ಸ್ಥಾನವನ್ನು ಹೊಂದಿದ್ದನು. ಮಾರ್ಚ್ 13 ರಂದು ನಡೆದ ದಾಳಿಯಲ್ಲಿ ಮತ್ತೊಬ್ಬ ಐಸಿಸ್ ಉಗ್ರ ಕೂಡ ಮೃತಪಟ್ಟಿದ್ದಾನೆ.
"ಶಕ್ತಿ ಮೂಲಕ ಶಾಂತಿ!" ಡೊನಾಲ್ಡ್ ಟ್ರಂಪ್
ಪಶ್ಚಿಮ ಇರಾಕ್‌ನ ಅನ್ಬರ್ ಪ್ರಾಂತ್ಯದಲ್ಲಿ ವಾಯುದಾಳಿಯ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ಗುರುವಾರ ರಾತ್ರಿ ನಡೆದು ನಿನ್ನೆ ಹತ್ಯೆಯನ್ನು ದೃಢಪಡಿಸಲಾಯಿತು.
Advertisement