ಟ್ರಂಪ್ ಆಡಳಿತದಲ್ಲಿ ಕೀಳುಮಟ್ಟದ ರಾಜಕೀಯ ಭಾಷಣಗಳು ದುಃಸ್ವಪ್ನವಾಗಿ ಕಾಡಬಹುದು: ಸ್ವಯಂ ಗಡಿಪಾರುಗೊಂಡ ವಿದ್ಯಾರ್ಥಿನಿ ಹೇಳಿಕೆ
ನವದೆಹಲಿ: ಕಳೆದ ಶುಕ್ರವಾರ ಬೆಳಗ್ಗೆ ಫೆಡರಲ್ ವಲಸೆ ಏಜೆಂಟ್‌ಗಳು ಕೊಲಂಬಿಯಾ ವಿಶ್ವವಿದ್ಯಾಲಯದ ಅಪಾರ್ಟ್‌ಮೆಂಟ್‌ಗೆ ಬಂದಾಗ ಅಲ್ಲಿನ ವಾತಾವರಣ ಶಾಂತವಾಗಿತ್ತು. ಅಂದು ಎಂದಿನ ದೃಶ್ಯ ಕಂಡುಬರಲಿಲ್ಲ. ಏಜೆಂಟರು ಫುಲ್‌ಬ್ರೈಟ್ ವಿದ್ವಾಂಸೆಯಾಗಿರುವ ಭಾರತೀಯ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್‌ರನ್ನು ಹುಡುಕಿಕೊಂಡು ಬಂದಿದ್ದರು. ಇತ್ತೀಚೆಗೆ ಅವರ ವಿದ್ಯಾರ್ಥಿ ವೀಸಾವನ್ನು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಹಠಾತ್ತನೆ ರದ್ದುಮಾಡಿತ್ತು.
ಅರ್ಬನ್ ಪ್ಲಾನಿಂಗ್ ನಲ್ಲಿ ಡಾಕ್ಟರೇಟ್ ಪದವಿ ಪಡೆಯುತ್ತಿದ್ದ 37 ವರ್ಷದ ರಂಜನಿ ಶ್ರೀನಿವಾಸನ್ ಆ ಏಜೆಂಟರ್ ಗಳು ಬಂದಾಗ ಮನೆಯಲ್ಲಿ ಇರಲಿಲ್ಲ. ಏಜೆಂಟರ್ ಗಳು ಅಂದು ಹೋದವರು ಮರುದಿನ ಬಂದರು. ಆ ಹೊತ್ತಿಗೆ, ರಂಜನಿ ಶ್ರೀನಿವಾಸನ್‌ಗೆ ತನ್ನ ಪರಿಸ್ಥಿತಿ ಅರ್ಥವಾಗಿತ್ತು.
ಪರಿಸ್ಥತಿ ಅಸ್ಥಿರವಾಗಿದ್ದು ಅಪಾಯಕಾರಿಯಾಗಿದೆ ಎಂದು ರಂಜನಿ ಶ್ರೀನಿವಾಸನ್ ಗೆ ಅನ್ನಿಸಿ ತಕ್ಷಣವೇ ಸ್ವಯಂಪ್ರೇರಿತವಾಗಿ ಭಾರತಕ್ಕೆ ಗಡಿಪಾರಾಗುವ ನಿರ್ಧಾರ ತೆಗೆದುಕೊಂಡರು. ಈ ಬಗ್ಗೆ ರಂಜನಿ ನ್ಯೂಯಾರ್ಕ್ ಟೈಮ್ಸ್ ಗೆ ಸಂದರ್ಶನ ನೀಡಿದ್ದಾರೆ.
ಅತ್ಯಂತ ಕೀಳು ಮಟ್ಟದ ರಾಜಕೀಯ ಭಾಷಣ ಕೂಡ ನಿಮ್ಮನ್ನು ಭಯೋತ್ಪಾದಕ ಸಹಾನುಭೂತಿ ಹೊಂದಿರುವವರು ಎಂದು ಕರೆಯುತ್ತಾರೆ. ಇಲ್ಲಿ ಅಕ್ಷರಶಃ ನಿಮ್ಮ ಜೀವ ಮತ್ತು ನಿಮ್ಮ ಸುರಕ್ಷತೆಗಾಗಿ ನಿಮ್ಮನ್ನು ಭಯಪಡುವಂತೆ ಮಾಡುತ್ತಾರೆ ಎಂದಿದ್ದಾರೆ ರಂಜನಿ.
ತಮ್ಮ ಬಳಿಯಿದ್ದ ಕೆಲವು ಸಾಮಾನುಗಳನ್ನು ಪ್ಯಾಕ್ ಮಾಡಿ, ತನ್ನ ಬೆಕ್ಕನ್ನು ಸ್ನೇಹಿತನ ಬಳಿ ಬಿಟ್ಟು, ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಿಂದ ಕೆನಡಾಕ್ಕೆ ವಿಮಾನ ಹತ್ತಿದರು. ವಲಸೆ ಏಜೆಂಟರು ಅವರನ್ನು ಹುಡುಕುತ್ತಾ ಮುಂದುವರಿದಿದ್ದರಿಂದ, ಆಕೆಯ ರೂಮ್ ಮೇಟ್ ಗೆ ತೊಂದರೆಯಾಯಿತು.
ಅಂದು ಏನಾಯ್ತು?
ಅಮೆರಿಕದ ವಲಸೆ ಏಜೆಂಟರ್ ಗಳು ಈ ರೀತಿ ಹುಡುಕುತ್ತಿರುವಾಗ ಕೆಲವು ಗಂಟೆಗಳ ನಂತರ, ಕೊಲಂಬಿಯಾದ ಮತ್ತೊಬ್ಬ ವಿದ್ಯಾರ್ಥಿ ಮಹಮೂದ್ ಖಲೀಲ್ ಎಂಬಾತನನ್ನು ಫೆಡರಲ್ ವಲಸೆ ಅಧಿಕಾರಿಗಳು ತಮ್ಮ ಕ್ಯಾಂಪಸ್ ಅಪಾರ್ಟ್‌ಮೆಂಟ್‌ನಿಂದ ಬಂಧಿಸಿದರು, ಇದು ವಿಶ್ವವಿದ್ಯಾನಿಲಯದಾದ್ಯಂತ ಭಾರೀ ದೊಡ್ಡ ಸುದ್ದಿಯಾಯಿತು.
ರಂಜನಿ ಶ್ರೀನಿವಾಸನ್ ಸಿಬಿಪಿ ಹೋಮ್ ಆ್ಯಪ್ ಮೂಲಕ ಸ್ವಯಂಪ್ರೇರಣೆಯಿಂದ ಸ್ವಯಂ-ಗಡಿಪಾರು ಮಾಡಿದ್ದಾರೆ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ತಿಳಿಸಿದೆ. ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಹೀಗೆ ಪ್ರತಿಕ್ರಿಯಿಸಿದ್ದಾರೆ: ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸಲು ಮತ್ತು ಅಧ್ಯಯನ ಮಾಡಲು ವೀಸಾ ನೀಡಲಾಗುತ್ತಿರುವುದು ಒಂದು ಸವಲತ್ತು. ಅದನ್ನು ಬಳಸಿಕೊಂಡು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದಾಗ, ಆ ಸವಲತ್ತನ್ನು ರದ್ದುಗೊಳಿಸಿ ನೀವು ಇನ್ನು ಮುಂದೆ ಈ ದೇಶಕ್ಕೆ ಸೇರಿದವರಲ್ಲ ಎಂದು ತೋರಿಸಬೇಕಾಗುತ್ತದೆ ಎಂದು ಅಮೆರಿಕಾದ ಹೋಮ್ ಲ್ಯಾಂಡ್ ಸೆಕ್ಯುರಿಟಿಸ್ ಡಿಪಾರ್ಟ್ ಮೆಂಟ್ ಹೇಳಿದೆ.
ರಂಜನಿ ಶ್ರೀನಿವಾಸನ್ ಸ್ವಯಂ ಗಡಿಪಾರು ಪ್ರಚೋದನೆಯು ಪ್ಯಾಲೆಸ್ಟೀನಿಯನ್ ಪರ ಪ್ರತಿಭಟನಾಕಾರರನ್ನು ಗುರಿಯಾಗಿಟ್ಟುಕೊಂಡು ಟ್ರಂಪ್ ಆಡಳಿತದ ಅಡಿಯಲ್ಲಿ ನಡೆಸಲಾದ ದೊಡ್ಡ, ಆಕ್ರಮಣಕಾರಿ ಕ್ರಮದ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಗುರಿಯಾಗಿಸಿಕೊಂಡ ಕೊಲಂಬಿಯಾ ವಿಶ್ವವಿದ್ಯಾಲಯದ ಹಲವಾರು ನಾಗರಿಕರಲ್ಲದವರಲ್ಲಿ ಅವರು ಒಬ್ಬರು.
ಕಳೆದ ವಾರ, ರಂಜನಿ ಶ್ರೀನಿವಾಸನ್ ತನ್ನ ವೀಸಾವನ್ನು ಹಠಾತ್ತನೆ ರದ್ದುಗೊಳಿಸಿದ್ದನ್ನು ಮತ್ತು ಕೊಲಂಬಿಯಾ ತನ್ನ ಕಾನೂನು ಸ್ಥಾನಮಾನವನ್ನು ರದ್ದುಗೊಳಿಸಿದ ಪರಿಣಾಮವಾಗಿ ತನ್ನ ದಾಖಲಾತಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ರಂಜನಿ ಶ್ರೀನಿವಾಸನ್ ಅವರನ್ನು ಗೃಹ ಭದ್ರತಾ ಇಲಾಖೆ (DHS) "ಭಯೋತ್ಪಾದಕ ಬೆಂಬಲಿಗ" ಎಂದು ಕರೆದಿದೆ, ಅವರು ಅಮೆರಿಕ ಸರ್ಕಾರವು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದ ಗುಂಪಾದ ಹಮಾಸ್‌ಗೆ ಬೆಂಬಲವಾಗಿ ಹಿಂಸಾಚಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದೆ. ಆದಾಗ್ಯೂ, ಈ ಆರೋಪಗಳನ್ನು ಶ್ರೀನಿವಾಸನ್ ಅವರ ಕಾನೂನು ತಂಡವು ದೃಢವಾಗಿ ನಿರಾಕರಿಸಿದೆ.
ಅಮೆರಿಕದ ಗೃಹ ಭದ್ರತಾ ಇಲಾಖೆ (DHS) ರಂಜನಿ ಶ್ರೀನಿವಾಸನ್ ಸಿಬಿಪಿ ಹೋಮ್ ಆ್ಯಪ್ ಮೂಲಕ ಸ್ವಯಂಪ್ರೇರಣೆಯಿಂದ ಸ್ವಯಂ-ಗಡಿಪಾರುಗೊಂಡಿದ್ದಾರೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ