
ವಾಷಿಂಗ್ಟನ್: ಬಹಳ ದೀರ್ಘ 9 ತಿಂಗಳ ಕಾಲ ಅಂತರಿಕ್ಷದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಇಂದು ಮಾರ್ಚ್ 19 ರಂದು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.
ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಇವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಕ್ಕಿಹಾಕಿಕೊಂಡಿದ್ದರು. ಜೂನ್ 5, 2024 ರಂದು ಒಂದು ವಾರದ ಕಾರ್ಯಾಚರಣೆಗೆಂದು ಅಂತರಿಕ್ಷಕ್ಕೆ ಹೋದವರು ಅಲ್ಲಿಯೇ ತಾಂತ್ರಿಕ ಸಮಸ್ಯೆಯಿಂದಾಗಿ ಸಿಲುಕಿಹಾಕಿಕೊಂಡಿದ್ದರು.
ಅವರನ್ನು ಮರಳಿ ಕರೆತರಲು ಅಮೆರಿಕದ ಗಗನಯಾತ್ರಿ ಮತ್ತು ರಷ್ಯಾದ ಗಗನಯಾತ್ರಿಗಳನ್ನು ಐಎಸ್ ಎಸ್ ನಲ್ಲಿ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಪ್ರಯಾಣ ಬೆಳೆಸಿತ್ತು.
ಹಾಗಾದರೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಉಳಿಯಲು ಎಷ್ಟು ಖರ್ಚು ತಗುಲಿತು ಎಂದು ನೋಡುವುದಾದರೆ, ಸಿಎನ್‌ಬಿಸಿ ವರದಿ ಮಾಡಿರುವಂತೆ, ನಾಸಾದ ಗಗನಯಾತ್ರಿ ಕ್ಯಾಡಿ ಕೋಲ್ಮನ್ ಪ್ರಕಾರ, ಗಗನಯಾತ್ರಿಗಳು ಈ ಸಮಯದಲ್ಲಿ ಕೂಡ ತಮ್ಮ ಎಂದಿನ ನಿಗದಿತ ವೇತನ ಪಡೆದಿದ್ದಾರೆ. ಯಾವುದೇ ಹೆಚ್ಚುವರಿ ವೇತನ ಪಡೆದಿಲ್ಲ.
ಉದ್ಯಮ ಪ್ರವಾಸದಲ್ಲಿರುವ ಯಾವುದೇ ಫೆಡರಲ್ ಉದ್ಯೋಗಿಯಂತೆ ಗಗನಯಾತ್ರಿಗಳಿಗೆ ವೇತನ ನೀಡಲಾಗುತ್ತದೆ. ಅವರಿಗೆ ನಿಯಮಿತ ಸಂಬಳ ಸಿಗುತ್ತದೆ, 9 ತಿಂಗಳು ಬಾಹ್ಯಾಕಾಶದಲ್ಲಿದ್ದುದಕ್ಕೆ ಪ್ರತಿದಿನಕ್ಕೆ ಸಣ್ಣಮೊತ್ತ ನೀಡಲಾಗಿದೆ. ತಮಗೆ ಪ್ರತಿದಿನಕ್ಕೆ 4 ಡಾಲರ್ ನೀಡಿದ್ದರು. ನಾಸಾ ಗಗನಯಾತ್ರಿಗಳ ಸಾರಿಗೆ, ವಸತಿ ಮತ್ತು ಆಹಾರವನ್ನು ನೋಡಿಕೊಳ್ಳುತ್ತದೆ ಎಂದು ಕೋಲ್ಮನ್ ವಾಷಿಂಗ್ಟನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ವರದಿಗಳ ಪ್ರಕಾರ, ವಿಲಿಯಮ್ಸ್ ಮತ್ತು ವಿಲ್ಮೋರ್ ಸಾಮಾನ್ಯ ವೇತನ ವೇಳಾಪಟ್ಟಿಯ ಅತ್ಯುನ್ನತ ಶ್ರೇಣಿಯಾದ GS-15 ಶ್ರೇಯಾಂಕವನ್ನು ಹೊಂದಿದ್ದಾರೆ, ಅವರ ಮೂಲ ವೇತನವು ವಾರ್ಷಿಕವಾಗಿ 125 ರಿಂದ 133 ಡಾಲರ್ ನಿಂದ 162,672 ಡಾಲರ್ ಆಗಿದೆ ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 1.08 ಕೋಟಿ ರೂಪಾಯಿಗಳಿಂದ 1.41 ಕೋಟಿ ರೂಪಾಯಿಗಳ ನಡುವೆ ಇರುತ್ತದೆ ಎಂದು generalschedule.org ತಿಳಿಸಿದೆ.
ಈ ಇಬ್ಬರು ಗಗನಯಾತ್ರಿ ಜೋಡಿಯ ಅನುಪಾತದ ವೇತನವು 93,850 ಡಾಲರ್ ನಿಂದ 122,004 ಡಾಲರ್ ಗೆ (ಸುಮಾರು ರೂ. 81 ಲಕ್ಷದಿಂದ ರೂ. 1.05 ಕೋಟಿ) ವರೆಗೆ ಇರುತ್ತದೆ. 1,148 ಡಾಲರ್ ಪ್ರಾಸಂಗಿಕ ವೇತನವನ್ನು ಸೇರಿಸಿದರೆ, ಅವರ ಒಟ್ಟು ಗಳಿಕೆ 94,998 ಡಾಲರ್ ಮತ್ತು 123,152 ಡಾಲರ್ (ಸುಮಾರು 82 ಲಕ್ಷದಿಂದ ರೂ. 1.06 ಕೋಟಿ) ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಫ್ಲೋರಿಡಾ ಕರಾವಳಿಯಲ್ಲಿ ಗಗನಯಾತ್ರಿಗಳು ಭಾರತೀಯ ಕಾಲಮಾನ ಪ್ರಕಾರ ಇಂದು ಬೆಳಗಿನ ಜಾವ 3:27 ಕ್ಕೆ ಬಂದಿಳಿದಿದ್ದಾರೆ.
Advertisement