
ಕರಾಚಿ: ಕರಾಚಿಯ ಮಾಲಿರ್ ಜೈಲಿನಲ್ಲಿ ಮಂಗಳವಾರ ಭಾರತೀಯ ಮೀನುಗಾರ ಗೌರವ್ ರಾಮ್ ಆನಂದ್(52) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಾನ್.ಕಾಮ್ ವರದಿ ಮಾಡಿದೆ.
ಅಕ್ರಮವಾಗಿ ಪಾಕಿಸ್ತಾನದ ಜಲಗಡಿ ಪ್ರವೇಶಿಸಿದ ಆರೋಪದ ಮೇಲೆ ಫೆಬ್ರವರಿ 2022 ರಲ್ಲಿ ಬಂಧಿಸಲ್ಪಟ್ಟ ಆನಂದ್ ಅವರು ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿರುವುದಾಗಿ ಡಾನ್ ವರದಿ ಮಾಡಿದೆ.
ಮಾಲಿರ್ ಜೈಲಿನ ಸೂಪರಿಂಟೆಂಡೆಂಟ್ ಅರ್ಷದ್ ಹುಸೇನ್ ಅವರು ಈ ಘಟನೆಯನ್ನು ದೃಢಪಡಿಸಿದ್ದು, ಕೈದಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೈಲಿನ ಕರ್ತವ್ಯ ನಿರತ ವೈದ್ಯರು ಬೆಳಗಿನ ಜಾವ 2:20 ಕ್ಕೆ ಆನಂದ್ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮ್ಯಾಜಿಸ್ಟ್ರೇಟ್, ಮುಂದಿನ ಕಾನೂನು ಕ್ರಮಗಳು ಮುಗಿಯುವವರೆಗೆ ಅವರ ದೇಹವನ್ನು ಸೊಹ್ರಾಬ್ ಗೋತ್‌ನಲ್ಲಿರುವ ಈಧಿ ಫೌಂಡೇಶನ್‌ನ ಕೋಲ್ಡ್ ಸ್ಟೋರೇಜ್ ಸ್ಥಳಾಂತರಿಸಲು ಆದೇಶಿಸಿದ್ದಾರೆ.
ಸರ್ಕಾರಿ ಮೂಲಗಳ ಪ್ರಕಾರ, ಡಿಸೆಂಬರ್ 31, 2024 ರ ಹೊತ್ತಿಗೆ, 144 ಭಾರತೀಯ ಮೀನುಗಾರರು ಮತ್ತು 1,173 ದೋಣಿಗಳು - ಮುಖ್ಯವಾಗಿ ಗುಜರಾತ್‌ನವರು - ಪಾಕಿಸ್ತಾನದ ವಶದಲ್ಲಿದ್ದಾರೆ.
Advertisement