
ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಸಲಹೆಗಾರ ಎಲಾನ್ ಮಸ್ಕ್ ತಮ್ಮ ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ಅಪ್ xAI ಗೆ ತಮ್ಮ ಸಾಮಾಜಿಕ ಜಾಲತಾಣ ವೇದಿಕೆ Xನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಒಂದು ಕಾಲದಲ್ಲಿ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಕಂಪನಿಯ ಮೌಲ್ಯವನ್ನು 33 ಬಿಲಿಯನ್ ಡಾಲರ್ ಗೆ ನಿಗದಿಪಡಿಸಲಾಗಿದೆ.
ಟ್ವಿಟರ್ ಹೆಸರಿನಲ್ಲಿದ್ದ ಈ ಸೋಶಿಯಲ್ ಮೀಡಿಯಾವನ್ನು ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ 2022ರ ಎಪ್ರಿಲ್ ತಿಂಗಳಲ್ಲಿ ಖರೀದಿಸಿದ್ದರು. ಬರೋಬ್ಬರಿ 44 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 3.40 ಲಕ್ಷ ಕೋಟಿ ರೂಪಾಯಿಗೆ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ್ದರು. ನಂತರ ಅದು ಎಕ್ಸ್ ಖಾತೆ ಎಂದು ಬದಲಾಯಿತು.
ಈ ವ್ಯಾಪಾರ ಯೋಜನೆಯು xAI ನ ಮುಂದುವರಿದ ಎಐ ಸಾಮರ್ಥ್ಯ ಮತ್ತು ಪರಿಣತಿಯನ್ನು ಎಕ್ಸ್ ಸೋಷಿಯಲ್ ಮೀಡಿಯಾದೊಂದಿಗೆ ಸಂಯೋಜಿಸುವ ಮೂಲಕ ಅಪಾರ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಎಲೊನ್ ಮಸ್ಕ್ ತಿಳಿಸಿದ್ದಾರೆ.
ಎಕ್ಸ್ ಸೋಷಿಯಲ್ ಮೀಡಿಯಾ ವೇದಿಕೆ 600 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಅದರ ಭವಿಷ್ಯವು ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾದ xAI ನೊಂದಿಗೆ ಬೆಸೆದುಕೊಂಡಿದೆ ಎಂದು ಮಸ್ಕ್ ಹೇಳಿದ್ದಾರೆ. ಇಂದು, ನಾವು ಅಧಿಕೃತವಾಗಿ ಡೇಟಾ, ಮಾದರಿಗಳು, ಕಂಪ್ಯೂಟ್, ವಿತರಣೆ ಮತ್ತು ಪ್ರತಿಭೆಯನ್ನು ಸಂಯೋಜಿಸಲು ಹೆಜ್ಜೆ ಇಡುತ್ತೇವೆ ಎಂದು ಮಸ್ಕ್ ಎರಡು ಕಂಪನಿಗಳನ್ನು ಸಂಯೋಜಿಸುವ ಬಗ್ಗೆ ಹೇಳಿದರು.
ಇದು ಕೇವಲ ಜಗತ್ತನ್ನು ಪ್ರತಿಬಿಂಬಿಸದೆ ಮಾನವ ಪ್ರಗತಿಯನ್ನು ಸಕ್ರಿಯವಾಗಿ ವೇಗಗೊಳಿಸುವ ವೇದಿಕೆಯನ್ನು ನಿರ್ಮಿಸಲು ನಮಗೆ ಅನುವು ಮಾಡಿಕೊಡುತ್ತದೆ. xAI ನ್ನು 80 ಬಿಲಿಯನ್ ಡಾಲರ್ ಮತ್ತು X ನ್ನು 33 ಬಿಲಿಯನ್ ಡಾಲರ್ ಗೆ ಮೌಲ್ಯೀಕರಿಸುವ ಆಲ್-ಸ್ಟಾಕ್ ಒಪ್ಪಂದದಲ್ಲಿ ಕಂಪನಿಗಳನ್ನು ಸಂಯೋಜಿಸಲಾಗುತ್ತಿದೆ,
2022ರ ಕೊನೆಯಲ್ಲಿ ಎಲೊನ್ ಮಸ್ಕ್ ಟ್ವಿಟರ್ ನ್ನು 44 ಬಿಲಿಯನ್ ಡಾಲರ್ ಗೆ ಖರೀದಿಸಿದ್ದರು. ಅದರ ಮುಂದಿನ ವರ್ಷ xAI ನ್ನು ಪ್ರಾರಂಭಿಸಿದರು, ಈ ಉದ್ಯಮಕ್ಕಾಗಿ ಶತಕೋಟಿ ಡಾಲರ್‌ಗಳನ್ನು ಉನ್ನತ-ಮಟ್ಟದ Nvidia ಚಿಪ್‌ಗಳಲ್ಲಿ ವಿನಿಯೋಗಿಸಿದರು.
Advertisement