ಸತತ ಎರಡನೇ ಬಾರಿ ಲೇಬರ್ ಪಕ್ಷ ಅಧಿಕಾರಕ್ಕೆ: ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿ ಸಚಿವರ ಪ್ರಮಾಣ ವಚನ

ಮತ ಎಣಿಕೆ ಇನ್ನೂ ಮುಂದುವರೆದಿದ್ದು, 150 ಸ್ಥಾನಗಳ ಸದನದಲ್ಲಿ ಲೇಬರ್ ಪಕ್ಷವು 92 ರಿಂದ 95 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹಿಂದಿನ ಸಂಸತ್ತಿನಲ್ಲಿ ಪಕ್ಷವು 78 ಸ್ಥಾನಗಳನ್ನು ಹೊಂದಿತ್ತು.
Australian Prime Minister Anthony Albanese
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್
Updated on

ಕ್ಯಾನ್‌ಬೆರಾ: ಕಳೆದ ಮೇ 3 ರಂದು ಮಧ್ಯ-ಎಡ ಲೇಬರ್ ಪಕ್ಷವು ಭರ್ಜರಿ ಗೆಲುವಿನೊಂದಿಗೆ ಮರು ಆಯ್ಕೆಯಾದ ನಂತರ ಆಸ್ಟ್ರೇಲಿಯಾದ ಸಚಿವ ಪ್ರಮಾಣ ವಚನ ಸ್ವೀಕರಿಸಿತು.

ಮತ ಎಣಿಕೆ ಇನ್ನೂ ಮುಂದುವರೆದಿದ್ದು, 150 ಸ್ಥಾನಗಳ ಸದನದಲ್ಲಿ ಲೇಬರ್ ಪಕ್ಷವು 92 ರಿಂದ 95 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹಿಂದಿನ ಸಂಸತ್ತಿನಲ್ಲಿ ಪಕ್ಷವು 78 ಸ್ಥಾನಗಳನ್ನು ಹೊಂದಿತ್ತು.

ವಿರೋಧ ಪಕ್ಷಗಳ ಮೈತ್ರಿಕೂಟವು 41 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸಂಪುಟವು ತನ್ನ ಮೊದಲ ಸಭೆಯನ್ನು ನಡೆಸಿತು.

ಪ್ರಧಾನಿ ಆಂಥೋನಿ ಅಲ್ಬನೀಸ್ ನಾಳೆ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಭೇಟಿ ಮಾಡಲು ಜಕಾರ್ತಾಗೆ ಹೋಗುವ ನಿರೀಕ್ಷೆಯಿದೆ. ನಂತರ ಅವರು ಭಾನುವಾರ ಪೋಪ್ ಲಿಯೋ XIV ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಇಂಡೋನೇಷ್ಯಾದಿಂದ ರೋಮ್‌ಗೆ ತೆರಳಲಿದ್ದಾರೆ.

Australian Prime Minister Anthony Albanese
ಎರಡನೇ ಅವಧಿಗೆ ಆಸ್ಟ್ರೇಲಿಯಾ ಪ್ರಧಾನಿಯಾಗಿ ಆಂಥೋನಿ ಅಲ್ಬನೀಸ್ ಆಯ್ಕೆ

ರೋಮ್‌ನಲ್ಲಿ ಅವರು ಮೊದಲ ಬಾರಿಗೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಸೇರಿದಂತೆ ವಿಶ್ವ ನಾಯಕರನ್ನು ಭೇಟಿ ಮಾಡಲಿದ್ದಾರೆ. ವಿರೋಧ ಪಕ್ಷ ಲಿಬರಲ್ ಪಕ್ಷವು ಮಾಜಿ ಸಚಿವೆ ಸುಸಾನ್ ಲೇ ಅವರನ್ನು ತಮ್ಮ ಹೊಸ ನಾಯಕಿಯಾಗಿ ಆಯ್ಕೆ ಮಾಡಿದೆ. 1944 ರಲ್ಲಿ ಸ್ಥಾಪನೆಯಾದ ಪಕ್ಷವನ್ನು ಮುನ್ನಡೆಸಿದ ಮೊದಲ ಮಹಿಳೆ ಇವರು.

ಅವರ ಪೂರ್ವವರ್ತಿ ಪೀಟರ್ ಡಟ್ಟನ್ ಚುನಾವಣೆಯಲ್ಲಿ ತಮ್ಮ ಸಂಸತ್ತಿನ ಸ್ಥಾನವನ್ನು ಕಳೆದುಕೊಂಡ ಏಕೈಕ ಆಸ್ಟ್ರೇಲಿಯಾದ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com