Israeli strikes: ಮಧ್ಯರಾತ್ರಿಯಿಂದ ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ; 64 ಜನರ ಹತ್ಯೆ, ಮಹಿಳೆಯರು, ಮಕ್ಕಳೇ ಹೆಚ್ಚು!

ಉತ್ತರ ಗಾಜಾ ಪಟ್ಟಿಯಲ್ಲಿರುವ ನಾಗರಿಕರ ಮನೆಗಳನ್ನು ಮಧ್ಯರಾತ್ರಿ ಮತ್ತು ಬೆಳಗಿನ ಜಾವದ ನಡುವೆ ಗುರಿಯಾಗಿಸಿ ಇಸ್ರೇಲಿ ನಡೆಸಿದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಸಂಖ್ಯೆ 64 ಕ್ಕೆ ಏರಿದೆ.
Palestinians inspect the rubble of the Al-Lahham family's home, destroyed by Israeli airstrike
ಇಸ್ರೇಲ್ ದಾಳಿಯಲ್ಲಿ ಛಿದ್ರಗೊಂಡ ಮನೆಗಳ ಮಧ್ಯೆ ಏಕಾಂಗಿ ಬಾಲಕನ ಚಿತ್ರ
Updated on

ಗಾಜಾ: ನಿನ್ನೆ ಮಧ್ಯರಾತ್ರಿಯಿಂದ ಪ್ಯಾಲೆಸ್ತೀನ್ ಪ್ರದೇಶ ಗಾಜಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 64 ಜನರು ಸಾವನ್ನಪ್ಪಿದ್ದಾರೆ.

ಉತ್ತರ ಗಾಜಾ ಪಟ್ಟಿಯಲ್ಲಿರುವ ನಾಗರಿಕರ ಮನೆಗಳನ್ನು ಮಧ್ಯರಾತ್ರಿ ಮತ್ತು ಬೆಳಗಿನ ಜಾವದ ನಡುವೆ ಗುರಿಯಾಗಿಸಿ ಇಸ್ರೇಲಿ ನಡೆಸಿದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಸಂಖ್ಯೆ 64 ಕ್ಕೆ ಏರಿದೆ.ನಮ್ಮ ತಂಡಗಳು ಇನ್ನೂ ಆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ" ಎಂದು ಗಾಜಾದ ನಾಗರಿಕ ರಕ್ಷಣಾ ಅಧಿಕಾರಿ ಮೊಹಮ್ಮದ್ ಅಲ್-ಮುಘಯ್ಯಿರ್ ಸುದ್ದಿಸಂಸ್ಥೆ AFP ಗೆ ತಿಳಿಸಿದ್ದಾರೆ.

ಕನಿಷ್ಠ 48 ಶವಗಳನ್ನು ಇಂಡೋನೇಷಿಯನ್ ಆಸ್ಪತ್ರೆಗೆ ತರಲಾಗಿದೆ ಮತ್ತು ಇನ್ನೂ 16 ದೇಹಗಳನ್ನು ನಾಸರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗೆ ಸೇರಿಸಲಾಗಿದ್ದ 30 ಮಂದಿ ಸಾವನ್ನಪ್ಪಿದ್ದಾರೆ. ಡಜನ್ ನಷ್ಟು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಮಹಿಳೆಯರು, ಮಕ್ಕಳೇ ಹೆಚ್ಚಾಗಿದ್ದಾರೆ ಎಂದು ಬೀಟ್ ಲಾಹಿಯಾದಲ್ಲಿರುವ ಇಂಡೋನೇಷ್ಯಾದ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಬಾಂಬ್ ಸ್ಫೋಟದ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಐವರು ಸತ್ತಿದ್ದಾರೆ ಮತ್ತು "75 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ ಎಂದು ಜಬಾಲಿಯಾದಲ್ಲಿನ ಅಲ್-ಅವ್ದಾ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಮೊಹಮ್ಮದ್ ಸಲೇಹ್ ತಿಳಿಸಿದ್ದಾರೆ. ಗಣಿ ಪಕ್ಕದ ಮನೆಯ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, ಅದರಲ್ಲಿದ್ದ ಜನರು ಸಾವನ್ನಪ್ಪಿದ್ದಾರೆ. ಶೆಲ್, ಕ್ಷಿಪಣಿ, ಡ್ರೋನ್ ದಾಳಿ ನಡೆಸಲಾಗಿದೆ ಎಂದು ಪಶ್ಚಿಮದ ಬೀಟ್ ಲಾಹಿಯಾದ ಅಲ್-ಸಲಾಟಿನ್ ಪ್ರದೇಶದ ಯೂಸೆಫ್ ಅಲ್-ಸುಲ್ತಾನ್ ತಿಳಿಸಿದ್ದಾರೆ.

Palestinians inspect the rubble of the Al-Lahham family's home, destroyed by Israeli airstrike
Gaza ಆಸ್ಪತ್ರೆ ಮೇಲೆ Israel ಏರ್ ಸ್ಟ್ರೈಕ್; Hamas ಮುಖ್ಯಸ್ಥ Mohammed Sinwar ಸಾವು!

ಟ್ರಂಪ್ ಗಲ್ಫ್ ರಾಜ್ಯಗಳಿಗೆ ತನ್ನ ಭೇಟಿಯನ್ನು ಮುಗಿಸುತ್ತಿದ್ದಂತೆಯೇ ಉತ್ತರ ಗಾಜಾದ್ಯಂತ ದಾಳಿ ನಡೆಯುತ್ತಿದೆ. ಟ್ರಂಪ್‌ರ ಭೇಟಿಯು ಕದನ ವಿರಾಮ ಒಪ್ಪಂದಕ್ಕೆ ಅಥವಾ ಗಾಜಾಕ್ಕೆ ಮಾನವೀಯ ನೆರವು ದೊರೆಯಬಹುದು ಎಂಬ ವ್ಯಾಪಕ ಭರವಸೆ ಇತ್ತು. ಗಾಜಾ ಪ್ರದೇಶ ಮೂರು ತಿಂಗಳಿನಿಂದ ಇಸ್ರೇಲಿ ಹತೋಟಿಯಲ್ಲಿದೆ. ಆದರೆ ದಾಳಿಯ ಬಗ್ಗೆ ಇಸ್ರೇಲಿ ಮಿಲಿಟರಿ ಯಾವುದೇ ತಕ್ಷಣದ ಪ್ರತಿಕ್ರಿಯೆಯನ್ನು ನೀಡಿಲ್ಲ.

130ಕ್ಕೂ ಹೆಚ್ಚು ಜನರನ್ನು ಕೊಂದ ರೀತಿಯಲ್ಲಿ ಶುಕ್ರವಾರ ಮುಂಜಾನೆವರೆಗೂ ಗಾಜಾದಲ್ಲಿ ದಾಳಿ ನಡೆದಿದ್ದು, ಹಲವರನ್ನು ಜಬಲಿಯಾ ಮತ್ತು ಬೀಟ್ ಲಹಿಯಾ ಪಟ್ಟಣದ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಯಿತು ಎಂದುಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com