ಗಾಜಾದಾದ್ಯಂತ ಇಸ್ರೇಲ್ ದಾಳಿ: ಕನಿಷ್ಠ 66 ಸಾವು, ಹಲವರಿಗೆ ಗಾಯ

ದಕ್ಷಿಣ ಗಾಜಾ ಪಟ್ಟಿಯ ಅಲ್-ಮವಾಸಿಯಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯರಿಗೆ ಆಶ್ರಯ ನೀಡಿದ್ದ ಡೇರೆಗಳ ಮೇಲೆ ಬೆಳಗಿನ ಜಾವ ದಾಳಿ ನಡೆದಿದೆ.
Palestinians search the rubble of a house targeted by an Israeli army strike that killed killing at least five members of the Abu Sahloul family in Khan Younis, in the southern Gaza Strip, Thursday, May 1, 2025
ದಕ್ಷಿಣ ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿ ಅಬು ಸಹ್ಲೌಲ್ ಕುಟುಂಬದ ಕನಿಷ್ಠ ಐವರನ್ನು ಕೊಂದ ಇಸ್ರೇಲ್ ಸೇನೆಯ ದಾಳಿಗೆ ಗುರಿಯಾಗಿದ್ದ ಮನೆಯ ಅವಶೇಷಗಳಡಿ ಹುಡುಕಾಟ ನಡೆಸುತ್ತಿರುವ ಪ್ಯಾಲೆಸ್ತೀನಿಯರು
Updated on

ದೀರ್ ಅಲ್-ಬಾಲಾಹ್, ಗಾಜಾ ಪಟ್ಟಿ: ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕಳೆದ ರಾತ್ರಿಯಿಂದ ಈವರೆಗೆ ಕನಿಷ್ಠ 66 ಜನರು ಮೃತಪಟ್ಟಿದ್ದಾರೆ ಎಂದು ಗಾಜಾ ಪಟ್ಟಿಯ ಆಸ್ಪತ್ರೆ ಮೂಲಗಳು ಮತ್ತು ವೈದ್ಯರು ಹೇಳಿದ್ದಾರೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ಇಸ್ರೇಲ್, ಗಾಜಾ ಪಟ್ಟಿಯಲ್ಲಿ ತನ್ನ ಯುದ್ಧ ಹೆಚ್ಚಿಸುತ್ತಿದ್ದಂತೆ ರಕ್ತಪಾತ ಸಂಭವಿಸಿದೆ, ಇದು ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಹಮಾಸ್ ಮೇಲೆ ಒತ್ತಡ ಹೇರುವ ಉದ್ದೇಶವನ್ನು ಹೊಂದಿದೆ ಎಂದು ಅದು ಹೇಳುತ್ತದೆ. ಈ ಬಗ್ಗೆ ಇಸ್ರೇಲ್ ಸೇನೆಯು ತಕ್ಷಣದ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ದಕ್ಷಿಣ ಗಾಜಾ ಪಟ್ಟಿಯ ಅಲ್-ಮವಾಸಿಯಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯರಿಗೆ ಆಶ್ರಯ ನೀಡಿದ್ದ ಡೇರೆಗಳ ಮೇಲೆ ಬೆಳಗಿನ ಜಾವ ನಡೆದ ದಾಳಿಯಲ್ಲಿ 22 ಜನರು ಮೃತಪಟ್ಟು ಕನಿಷ್ಠ 100 ಜನರು ಗಾಯಗೊಂಡಿದ್ದಾರೆ ಎಂದು ನಾಗರಿಕ ರಕ್ಷಣಾ ವಕ್ತಾರ ಮಹ್ಮದ್ ಬಸ್ಸಲ್ AFP ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Palestinians search the rubble of a house targeted by an Israeli army strike that killed killing at least five members of the Abu Sahloul family in Khan Younis, in the southern Gaza Strip, Thursday, May 1, 2025
ಗಾಜಾ ಮೇಲೆ ಮತ್ತೆ ಇಸ್ರೇಲ್ ದಾಳಿ; ಒಂದೇ ಕುಟುಂಬದ 10 ಜನ ಸೇರಿ 23 ಮಂದಿ ಸಾವು

ಉತ್ತರ ಗಾಜಾದ ಜಬಾಲಿಯಾದಲ್ಲಿನ ಮನೆಯ ಮೇಲೆ ನಡೆದ ದಾಳಿಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ ಎಂದು ಬಸ್ಸಲ್ ಹೇಳಿದ್ದಾರೆ, ಅದೇ ಪ್ರದೇಶದ ಅಲ್-ಅವ್ಡಾ ಆಸ್ಪತ್ರೆ ಹಾನಿಯನ್ನು ವರದಿ ಮಾಡಿದೆ.

ಬಸ್ಸಲ್ ಪ್ರಕಾರ, ಅಲ್-ಜವಾಯ್ದಾ ಕೇಂದ್ರ ಪ್ರದೇಶದಲ್ಲಿ ಮತ್ತು ದಕ್ಷಿಣದ ಖಾನ್ ಯೂನಿಸ್‌ನಲ್ಲಿಯೂ ಸಾವುಗಳು ದಾಖಲಾಗಿವೆ. 19 ತಿಂಗಳಿಗೂ ಹೆಚ್ಚು ಕಾಲದ ಯುದ್ಧದ ನಂತರ ಹಮಾಸ್ ಉಗ್ರರನ್ನು ಸೋಲಿಸುವ ಪ್ರಯತ್ನದಲ್ಲಿ ಇಸ್ರೇಲ್ ಸೇನೆಯು ಗಾಜಾದಾದ್ಯಂತ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದೆ ಎಂದು ಹೇಳಿದೆ.

ಇಸ್ರೇಲ್ ನೆರವು ದಿಗ್ಬಂಧನದಿಂದಾಗಿ ಪ್ಯಾಲೆಸ್ತೀನಿಯನ್ ಪ್ರದೇಶದಲ್ಲಿ ಮಾನವೀಯ ಪರಿಸ್ಥಿತಿಗಳು ಹದಗೆಡುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಕಳವಳ ಹೆಚ್ಚುತ್ತಿರುವ ಮಧ್ಯೆ ಈ ಕಾರ್ಯಾಚರಣೆಯನ್ನು ಹೆಚ್ಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com