ರಷ್ಯಾ-ಉಕ್ರೇನ್ ಮಧ್ಯೆ 'ತಕ್ಷಣ' ಕದನ ವಿರಾಮ ಮಾತುಕತೆ ಆರಂಭ: ಡೊನಾಲ್ಡ್ ಟ್ರಂಪ್ ಹೇಳಿಕೆ

ಕದನ ವಿರಾಮದತ್ತ ಪ್ರಗತಿ ಸಾಧಿಸುವ ಭರವಸೆಯಲ್ಲಿ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ.
Donald Trump and Vladimir Putin
ಡೊನಾಲ್ಡ್ ಟ್ರಂಪ್-ವ್ಲಾಡಿಮಿರ್ ಪುಟಿನ್
Updated on

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಮಾತುಕತೆ ಅತ್ಯಂತ ಫಲಪ್ರದವಾಗಿತ್ತು. ರಷ್ಯಾ ಮತ್ತು ಉಕ್ರೇನ್ "ತಕ್ಷಣ" ಕದನ ವಿರಾಮ ಮಾತುಕತೆಗಳನ್ನು ಪ್ರಾರಂಭಿಸುತ್ತವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಆಶಾವಾದ ವ್ಯಕ್ತಪಡಿಸಿದ್ದಾರೆ.

ಕದನ ವಿರಾಮದತ್ತ ಪ್ರಗತಿ ಸಾಧಿಸುವ ಭರವಸೆಯಲ್ಲಿ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ.

ಅದಕ್ಕಾಗಿ ಷರತ್ತುಗಳನ್ನು ಎರಡೂ ದೇಶಗಳ ನಾಯಕರ ನಡುವೆ ಮಾತುಕತೆ ಮಾಡಲಾಗುತ್ತದೆ, ಬೇರೆ ಯಾರಿಗೂ ತಿಳಿದಿರದ ಮಾತುಕತೆಯ ವಿವರಗಳನ್ನು ಅವರು ತಿಳಿದಿದ್ದಾರೆ ಎಂದು ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

https://truthsocial.com/@realDonaldTrump/posts/114535693441367601

ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಅಮರಿಕ ತೀವ್ರ ಹತಾಶೆಗೊಂಡಿದೆ ಎಂದು ಶ್ವೇತಭವನ ಹೇಳಿದ ನಂತರ ಈ ಮಾತುಕತೆಗಳು ನಡೆದಿವೆ. ಹೋರಾಟವನ್ನು ಕೊನೆಗೊಳಿಸುವ ಬಗ್ಗೆ ಚರ್ಚಿಸುವುದನ್ನು ಮುಂದುವರಿಸಲು ರಷ್ಯಾ ಸಿದ್ಧವಾಗಿದೆ ಎಂದು ಪುಟಿನ್ ಹೇಳಿದರು, ಆದರೆ ಟ್ರಂಪ್ ಅವರೊಂದಿಗೆ ಬಹಳ ಮಾಹಿತಿಯುಕ್ತ ಮತ್ತು ಅತ್ಯಂತ ಸ್ಪಷ್ಟವಾದ ಸಂಭಾಷಣೆ ಎಂದು ಅವರು ಕರೆದಿದ್ದರಲ್ಲಿ ಯಾವುದೇ ಪ್ರಮುಖ ಪ್ರಗತಿ ಕಂಡುಬಂದಿಲ್ಲ ಎಂದರು.

ಭವಿಷ್ಯದ ಸಂಭಾವ್ಯ ಶಾಂತಿ ಒಪ್ಪಂದದ ಚೌಕಟ್ಟನ್ನು ವಿವರಿಸುವ ಮನವಿ ಪತ್ರ ಕುರಿತು ರಷ್ಯಾ ಉಕ್ರೇನ್‌ನೊಂದಿಗೆ ಪ್ರಸ್ತಾಪಿಸುತ್ತದೆ ಮತ್ತು ಕೆಲಸ ಮಾಡಲು ಸಿದ್ಧವಾಗಿದೆ ಎಂದರು.

ಫೆಬ್ರವರಿ 2022 ರಲ್ಲಿ ರಷ್ಯಾದ ಆಕ್ರಮಣದೊಂದಿಗೆ ಪ್ರಾರಂಭವಾದ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಶತಾಯಗತಾಯ ಪ್ರಯತ್ನಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com