
ವಾಷಿಂಗ್ಟನ್: ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ನಿನ್ನೆ ಸಾಯಂಕಾಲ ಯಹೂದಿ ವಸ್ತುಸಂಗ್ರಹಾಲಯದ ಬಳಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ತಿಳಿಸಿದ್ದಾರೆ.
ರಾಷ್ಟ್ರದ ರಾಜಧಾನಿಯಲ್ಲಿರುವ ಎಫ್‌ಬಿಐನ ಕ್ಷೇತ್ರ ಕಚೇರಿಯಿಂದ ಸ್ವಲ್ಪ ದೂರದಲ್ಲಿರುವ ಕ್ಯಾಪಿಟಲ್ ಯಹೂದಿ ವಸ್ತುಸಂಗ್ರಹಾಲಯದ ಹೊರಗೆ ಗುಂಡಿನ ದಾಳಿ ನಡೆದಿದೆ ಎಂದು ನೋಯೆಮ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಅವರು ವಾಷಿಂಗ್ಟನ್‌ನಲ್ಲಿ ಯುಎಸ್ ಅಟಾರ್ನಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ನ್ಯಾಯಾಧೀಶ ಜೀನೈನ್ ಪಿರೋ ಅವರೊಂದಿಗೆ ಸ್ಥಳದಲ್ಲಿದ್ದರು. ವಿಶ್ವಸಂಸ್ಥೆಗೆ ಇಸ್ರೇಲ್‌ನ ರಾಯಭಾರಿಯಾಗಿರುವ ಡ್ಯಾನಿ ಡ್ಯಾನನ್, ಗುಂಡಿನ ದಾಳಿಯನ್ನು ಯೆಹೂದ್ಯ ವಿರೋಧಿ ಭಯೋತ್ಪಾದನೆಯ ದುಷ್ಕೃತ್ಯ ಎಂದು ಕರೆದಿದ್ದಾರೆ.
ಗುಂಡಿನ ದಾಳಿಗೆ ಕಾರಣವೇನೆಂದು ಪೊಲೀಸರು ಯಾವುದೇ ವಿವರಗಳನ್ನು ನೀಡಿಲ್ಲ. ಈ ಕ್ರಿಮಿನಲ್ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಅಮೆರಿಕ ಅಧಿಕಾರಿಗಳು ಬಲವಾದ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ"ಎಂದು ಡ್ಯಾನನ್ ಹೇಳಿದ್ದಾರೆ. ಇಸ್ರೇಲ್ ತನ್ನ ನಾಗರಿಕರು ಮತ್ತು ಪ್ರತಿನಿಧಿಗಳನ್ನು ರಕ್ಷಿಸಲು ದೃಢನಿಶ್ಚಯದಿಂದ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
Advertisement