ಹಾರ್ವರ್ಡ್‌ ವಿ.ವಿ ಜೊತೆ ಡೊನಾಲ್ಡ್‌ ಟ್ರಂಪ್‌ ಜಟಾಪಟಿ: ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು, ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
repreentational image
ಸಂಗ್ರಹ ಚಿತ್ರ
Updated on

ನ್ಯೂಯಾರ್ಕ್‌: ಹಾರ್ವರ್ಡ್‌ ವಿಶ್ವವಿದ್ಯಾಲಯ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ನಡುವಿನ ಜಟಾಪಟಿ ತೀವ್ರಗೊಂಡಿದೆ.

ಇದರ ನಡುವೆ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಟ್ರಂಪ್‌ ಆಡಳಿತ ತಡೆ ನೀಡಿದೆ. ಜತೆಗೆ, ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಸ್ತಿತ್ವದಲ್ಲಿರುವ ಬೇರೆ ಕಾಲೇಜುಗಳು ಅಥವಾ ಶಾಲೆಗಳಿಗೆ ವರ್ಗಾವಣೆ ಆಗಬಹುದಾಗಿದೆ. ಇಲ್ಲವಾದ್ದಲ್ಲಿ ಕಾನೂನಿನ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೋಮ್‌ಲ್ಯಾಂಡ್ ಭದ್ರತಾ ಇಲಾಖೆ ಎಚ್ಚರಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು, ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಗೃಹ ಭದ್ರತಾ ಇಲಾಖೆಯ ತನಿಖೆ ನಡೆಯುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ವಿದೇಶಿ ವಿದ್ಯಾರ್ಥಿಗಳ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಓದುವ ಕನಸು ಭಗ್ನಗೊಂಡಿದೆ.

ಅಂತರರಾಷ್ಟ್ರೀಯ ವಿದ್ಯಾರ್ಥಿ ವೀಸಾ ಹೊಂದಿರುವವರು ನಡೆಸುತ್ತಿರುವ ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಏಪ್ರಿಲ್ 30ರ ಒಳಗಾಗಿ ಸಲ್ಲಿಸುವಂತೆ ಅಮೆರಿಕ ಗೃಹ ಇಲಾಖೆಯು ಈಚೆಗೆ ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು.

ಒಂದು ವೇಳೆ, ಈ ಗಡುವಿನ ಒಳಗಾಗಿ ಮಾಹಿತಿ ಸಲ್ಲಿಸದಿದ್ದಲ್ಲಿ, ವಿದೇಶಿ ವಿದ್ಯಾರ್ಥಿಗಳ ನೋಂದಣಿಗೆ ಸಂಬಂಧಿಸಿ ವಿ.ವಿ ಹೊಂದಿರುವ ಸೌಲಭ್ಯವನ್ನು ಹಿಂಪಡೆಯಲಾಗುವುದು ಎಂದು ಇಲಾಖೆ ತಿಳಿಸಿತ್ತು. ಇದರ ಬೆನ್ನಲ್ಲೇ ವಿಶ್ವವಿದ್ಯಾಲಯಕ್ಕೆ 2.7 ಮಿಲಿಯನ್ ಡಾಲರ್‌ಗೂ (ಅಂದಾಜು ₹23 ಕೋಟಿ) ಅಧಿಕ ಅನುದಾನ ನೀಡುವುದನ್ನು ಸರ್ಕಾರ ರದ್ದು ಮಾಡಿತ್ತು.

repreentational image
ವಿದ್ಯಾರ್ಥಿ ವೀಸಾ ನಿಯಮ: ಮೊಕದ್ದಮೆ ಹೂಡಿದ ಹಾರ್ವರ್ಡ್, ಎಂಐಟಿ ವಿವಿ, ಅಮೆರಿಕಾ ಸರ್ಕಾರದ ಜೊತೆ ಭಾರತ ಮಾತುಕತೆ

ಸರ್ಕಾರ ನೀಡಿದ್ದ ಕೆಲ ಸೂಚನೆಗಳನ್ನು ವಿಶ್ವವಿದ್ಯಾಲಯ ಇತ್ತೀಚೆಗೆ ತಿರಸ್ಕರಿಸಿತ್ತು. ಈ ಕಾರಣಕ್ಕೆ ಟ್ರಂಪ್‌ ಆಡಳಿತ ಈ ಕ್ರಮ ಕೈಗೊಂಡಿದೆ. ಹಾರ್ವರ್ಡ್‌ ವಿಶ್ವವಿದ್ಯಾಲಯ ಎಡಪಂಥೀಯ ಸಿದ್ಧಾಂತ ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ವಿ.ವಿಗೆ ನೀಡಿರುವ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕೂಡ ಹಿಂಪಡೆಯುವುದಾಗಿ ಸರ್ಕಾರ ಎಚ್ಚರಿಸಿತ್ತು.

ಹಾರ್ವರ್ಡ್ ವಿಶ್ವವಿದ್ಯಾಲಯವು ಈ ಕ್ರಮವನ್ನು ಖಂಡಿಸಿದ್ದು, "ಈ ಪ್ರತೀಕಾರದ ಕ್ರಮದಿಂದಾಗಿ ವಿಶ್ವವಿದ್ಯಾಲಯಕ್ಕೆ ಗಂಭೀರ ಹಾನಿಯಾಗಲಿದೆ. ಸರ್ಕಾರದ ಕ್ರಮ ಕಾನೂನುಬಾಹಿರವಾಗಿದ್ದು, 140ಕ್ಕೂ ಹೆಚ್ಚು ದೇಶಗಳಿಂದ ಬಂದಿರುವ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದೆ" ಎಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ವಿಶ್ವವಿದ್ಯಾಲಯವನ್ನು ಮತ್ತು ಈ ರಾಷ್ಟ್ರದ ಪ್ರತಿಷ್ಠೆಯನ್ನು ಹೆಚ್ಚಿಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ವಿದ್ವಾಂಸರನ್ನು ಹೊಂದಲು ಹಾರ್ವರ್ಡ್‌ನ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ" ಎಂದು ವಿಶ್ವವಿದ್ಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

repreentational image
Watch | ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಟ್ರಂಪ್ 2.3 ಬಿಲಿಯನ್ ಡಾಲರ್ ಅನುದಾನ ಸ್ಥಗಿತ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com