
ಢಾಕಾ: ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮೊಹಮ್ಮದ್ ಯೂನಸ್ ಅವರು ಮುಂದುವರೆಯುತ್ತಾರೆ ಎಂದು ಅವರ ಸಂಪುಟದ ಸಲಹೆಗಾರರೊಬ್ಬರು ಶನಿವಾರ ಹೇಳಿದ್ದಾರೆ.
ಮೊಹಮ್ಮದ್ ಯೂನಸ್ ಅವರು ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಅವರ ಆಪ್ತರೊಬ್ಬರು ಹೇಳಿದ ಎರಡು ದಿನಗಳ ನಂತರ ಈ ಸ್ಪಷ್ಟನೆ ನೀಡಲಾಗಿದ.
"ಅವರು(ಯೂನಸ್) ಹುದ್ದೆ ತ್ಯಜಿಸುವುದಾಗಿ ಹೇಳಿಲ್ಲ. ನಮಗೆ ನಿಯೋಜಿಸಲಾದ ಕೆಲಸ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ನಾವು ಅನೇಕ ಅಡೆತಡೆಗಳನ್ನು ಎದುರಿಸುತ್ತಿದ್ದರೂ, ನಾವು ಅವುಗಳನ್ನು ನಿವಾರಿಸುತ್ತಿದ್ದೇವೆ" ಎಂದು ಯೋಜನಾ ಸಲಹೆಗಾರ ವಾಹಿದುದ್ದೀನ್ ಮಹಮೂದ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಅವರು(ಯೂನಸ್) ಖಂಡಿತವಾಗಿಯೂ ಮುಂದುವರೆಯಲಿದ್ದಾರೆ" ಎಂದು ಮಹಮೂದ್ ಹೇಳಿದ್ದಾರೆ.
"ನಮಗೆ ವಹಿಸಲಾಗಿರುವ ಜವಾಬ್ದಾರಿ ಮಹತ್ವದ್ದಾಗಿದೆ; ನಾವು ಈ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬರಲು ವಿಫಲವಾದ ಕಾರಣ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗ ನೇತೃತ್ವದ ನ್ಯಾಷನಲ್ ಸಿಟಿಜನ್ ಪಾರ್ಟಿ(ಎನ್‌ಸಿಪಿ) ಸಂಚಾಲಕ ನಹಿದ್ ಇಸ್ಲಾಂ ತಿಳಿಸಿರುವುದಾಗಿ ಬಿಬಿಸಿ ಬಾಂಗ್ಲಾ ವರದಿ ಮಾಡಿತ್ತು.
Advertisement